Om Raut: ಸಾವಿರ ಕೋಟಿ ರೂ. ಬಜೆಟ್​ನಲ್ಲಿ ‘ಆದಿಪುರುಷ್​ 2’ ಮಾಡುವ ಪ್ಲಾನ್​; ನಿರ್ದೇಶಕರ ಐಡಿಯಾಗೆ ಪ್ರಭಾಸ್​ ಏನಂದ್ರು?

|

Updated on: Jun 25, 2023 | 1:05 PM

Adipurush 2: ‘ಆದಿಪುರುಷ್​’ ಶೂಟಿಂಗ್​ ಕೊನೇ ಹಂತದಲ್ಲಿ ಇದ್ದಾಗ 2ನೇ ಪಾರ್ಟ್​ ಮಾಡುವ ಐಡಿಯಾ ನಿರ್ದೇಶಕರಿಗೆ ಬಂತು. ಅದಕ್ಕಾಗಿ ಇನ್ನೂ ಒಂದು ತಿಂಗಳ ಕಾಲ ಹೆಚ್ಚಿನ ಶೂಟಿಂಗ್​ನಲ್ಲಿ ಭಾಗಿ ಆಗುವಂತೆ ಅವರು ಪ್ರಭಾಸ್​ಗೆ ಹೇಳಿದ್ದರು.

Om Raut: ಸಾವಿರ ಕೋಟಿ ರೂ. ಬಜೆಟ್​ನಲ್ಲಿ ‘ಆದಿಪುರುಷ್​ 2’ ಮಾಡುವ ಪ್ಲಾನ್​; ನಿರ್ದೇಶಕರ ಐಡಿಯಾಗೆ ಪ್ರಭಾಸ್​ ಏನಂದ್ರು?
ಓಂ ರಾವತ್​, ಪ್ರಭಾಸ್​
Follow us on

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಆದಿಪುರುಷ್​’ (Adipurush) ಚಿತ್ರವು ಸ್ಥಾನ ಪಡೆದುಕೊಂಡಿತ್ತು. ಪ್ರಭಾಸ್​ ಅಭಿಮಾನಿಗಳು ಈ ಚಿತ್ರದ ಮೇಲೆ ತುಂಬ ಭರವಸೆ ಇಟ್ಟುಕೊಂಡಿದ್ದರು. ‘ತಾನಾಜಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದ ನಿರ್ದೇಶಕ ಓಂ ರಾವತ್​ (Om Raut) ಅವರು ‘ಆದಿಪುರುಷ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದರಿಂದ ಹೈಪ್​ ಹೆಚ್ಚಿತ್ತು. ಆದರೆ ಚಿತ್ರ ಬಿಡುಗಡೆ ಆದ ಬಳಿಕ ಪ್ರೇಕ್ಷಕರಿಗೆ ಭಾರಿ ನಿರಾಸೆ ಆಯಿತು. ಯಾಕೆಂದರೆ, ರಾಮಾಯಣದ ಕಥೆ ಆಧರಿಸಿ ಮೂಡಿಬಂದಿದ್ದ ಈ ಸಿನಿಮಾದಲ್ಲಿ ತುಂಬ ಅಸಂಬದ್ಧ ಅಂಶಗಳು ಇವೆ ಎಂದು ಜನರು ತಕರಾರು ತೆಗೆದರು. ಜೂನ್​ 16ರಂದು ಬಿಡುಗಡೆಯಾದ ‘ಆದಿಪುರುಷ್​’ ಸಿನಿಮಾ ಈಗಲೂ ಟ್ರೋಲ್​ ಕಾಟ ಎದುರಿಸುತ್ತಿದೆ. ಅಚ್ಚರಿ ಏನೆಂದರೆ, ಈ ಸಿನಿಮಾಗೆ ಸೀಕ್ವೆಲ್​ (Adipurush 2) ಮಾಡುವ ಆಲೋಚನೆ ಕೂಡ ನಿರ್ದೇಶಕ ಓಂ ರಾವತ್​ ಅವರಿಗೆ ಇತ್ತು! ಆದರೆ ಅದಕ್ಕೆ ಪ್ರಭಾಸ್​ ಅವರು ಒಪ್ಪಿಕೊಂಡಿರಲಿಲ್ಲ.

ಸಿನಿಮಾಗಳನ್ನು ಎರಡು ಪಾರ್ಟ್​​ನಲ್ಲಿ ಮಾಡುವ ಟ್ರೆಂಡ್​ ಜೋರಾಗಿದೆ. ‘ಬಾಹುಬಲಿ’, ‘ಕೆಜಿಎಫ್​’ ಮುಂತಾದ ಸಿನಿಮಾಗಳು ಈ ಸೂತ್ರ ಅನುಸರಿಸಿ ಭರ್ಜರಿ ಲಾಭ ಮಾಡಿಕೊಂಡವು. ‘ಪುಷ್ಟ’ ಸಿನಿಮಾಗೂ ಸೀಕ್ವೆಲ್​ ಮೂಡಿಬರುತ್ತಿದೆ. ಹೀಗಾಗಿ ‘ಆದಿಪುರುಷ್​’ ಸಿನಿಮಾದ ಕಥೆಯನ್ನೂ ಎರಡು ಪಾರ್ಟ್​ನಲ್ಲಿ ಹೇಳಬೇಕು ಎಂಬುದು ನಿರ್ದೇಶಕರ ಪ್ಲ್ಯಾನ್​ ಆಗಿತ್ತಂತೆ. ಮೊದಲ ಪಾರ್ಟ್​ ಬಿಡುಗಡೆ ಆದ ಬಳಿಕ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಆದಿಪುರುಷ್​ 2’ ಸಿನಿಮಾವನ್ನು ಮಾಡಬೇಕು ಎಂದು ಓಂ ರಾವುತ್​ ಆಲೋಚಿಸಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: Project K: ‘ಆದಿಪುರುಷ್​’ ಟ್ರೋಲ್​ ಮರೆತು ‘ಪ್ರಾಜೆಕ್ಟ್​ ಕೆ’ ಅಪ್​ಡೇಟ್​ ತಿಳಿಯಲು ಕಾದಿರುವ ಪ್ರಭಾಸ್​ ಅಭಿಮಾನಿಗಳು

‘ಆದಿಪುರುಷ್​’ ಸಿನಿಮಾದ ಶೂಟಿಂಗ್​ ಕೊನೇ ಹಂತದಲ್ಲಿ ಇದ್ದಾಗ ಎರಡನೇ ಪಾರ್ಟ್​ ಮಾಡುವ ಐಡಿಯಾ ನಿರ್ದೇಶಕರಿಗೆ ಬಂತು. ಅದಕ್ಕಾಗಿ ಇನ್ನೂ ಒಂದು ತಿಂಗಳ ಕಾಲ ಹೆಚ್ಚಿನ ಶೂಟಿಂಗ್​ನಲ್ಲಿ ಭಾಗಿ ಆಗುವಂತೆ ಅವರು ಪ್ರಭಾಸ್​ಗೆ ಹೇಳಿದರು. ಆದರೆ ಅದು ಪ್ರಭಾಸ್​ಗೆ ಸರಿ ಎನಿಸಲಿಲ್ಲ. ಈ ಕಥೆಯನ್ನು ಎರಡು ಪಾರ್ಟ್​​ನಲ್ಲಿ ಹೇಳಿದರೆ ವರ್ಕೌಟ್​ ಆಗುವುದಿಲ್ಲ ಎಂಬುದು ಪ್ರಭಾಸ್​ಗೆ ಅನಿಸಿತು. ಹಾಗಾಗಿ ‘ಆದಿಪುರುಷ್​ 2’ ಮಾಡುವ ಉದ್ದೇಶ ಇಟ್ಟುಕೊಂಡಿದ್ದ ಓಂ ರಾವತ್​ಗೆ ಪ್ರಭಾಸ್​ ಅವರು ಗ್ರೀನ್​ ಸಿಗ್ನಲ್​ ನೀಡಲಿಲ್ಲ. ಅಂದು ಪ್ರಭಾಸ್​ ತೆಗೆದುಕೊಂಡ ನಿರ್ಧಾರದಿಂದ ಬಹುಕೋಟಿ ರೂಪಾಯಿ ವೇಸ್ಟ್​ ಆಗುವುದು ತಪ್ಪಿತು.

ಇದನ್ನೂ ಓದಿ: Om Raut: ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ‘ಆದಿಪುರುಷ್​’ ನಿರ್ದೇಶಕ ಓಂ ರಾವತ್​ಗೆ ಮುಂಬೈ ಪೊಲೀಸರಿಂದ​ ಭದ್ರತೆ?

ಮಹಾಭಾರತ, ರಾಮಾಯಣ ಮುಂತಾದ ಮಹಾಕಾವ್ಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವಾಗ ಚಿತ್ರತಂಡದವರು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ‘ಆದಿಪುರುಷ್​’ ಸಿನಿಮಾತಂಡದವರು ರಾಮಾಯಣದ ಕಥೆಗೆ ಆಧುನಿಕ ಟಚ್​ ನೀಡಲು ಹೋಗಿ ಎಡವಿದರು. ಸೈಫ್​ ಅಲಿ ಖಾನ್​ ಮಾಡಿದ ರಾವಣನ ಪಾತ್ರ ನೋಡಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಆಂಜನೇಯನ ಪಾತ್ರದ ಸಂಭಾಷಣೆ ತೀರಾ ಕಳಪೆ ಆಗಿದೆ ಎಂಬ ಆಕ್ಷೇಪ ಕೂಡ ಎದುರಾಯಿತು. ಇದೆಲ್ಲದರ ಪರಿಣಾಮವಾಗಿ ಚಿತ್ರತಂಡಕ್ಕೆ ತೀವ್ರ ಮುಖಭಂಗ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.