
ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ತಾಯಿ ಹೀರಾಬೆನ್ ಮೋದಿ ನಿಧನಕ್ಕೆ ದೇಶದ ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಜನಸಾಮಾನ್ಯರು ಕೂಡ ಸಂತಾಪ ಸೂಚಿಸಿದ್ದಾರೆ. ಶುಕ್ರವಾರ (ಡಿ.30) ಹೀರಾಬೆನ್ ಮೋದಿ (Heeraben Modi) ಅವರು ಕೊನೆಯುಸಿರು ಎಳೆದರು. ತಾಯಿಯ ಅಂತ್ಯಕ್ರಿಯೆಯಲ್ಲಿ ಮೋದಿ ಪಾಲ್ಗೊಂಡರು. ಬಳಿಕ ಶನಿವಾರ (ಡಿ.31) ಅವರು ದೆಹಲಿಗೆ ವಾಪಸ್ ಆಗಿದ್ದಾರೆ. ಈ ಸಂದರ್ಭದಲ್ಲಿ ನಟ ಶಾರುಖ್ ಖಾನ್ ಕೂಡ ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ. ‘ತಾಯಿಯನ್ನು ಕಳೆದುಕೊಂಡ ನರೇಂದ್ರ ಮೋದಿ ಅವರಿಗೆ ನಮ್ಮ ಸಂತಾಪಗಳು. ಅವರಿಗಾಗಿ ನಮ್ಮ ಕುಟುಂಬ ಪ್ರಾರ್ಥಿಸುತ್ತದೆ. ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಶಾರುಖ್ ಖಾನ್ (Shah Rukh Khan) ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಒಂದೆರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗುವ ಅವಕಾಶ ಶಾರುಖ್ ಖಾನ್ಗೆ ಸಿಕ್ಕಿತ್ತು. 2019ರಲ್ಲಿ ಮಹಾತ್ಮ ಗಾಂಧಿ ಅವರ 150ನೇ ಜಯಂತಿ ಪ್ರಯುಕ್ತ ಬಾಲಿವುಡ್ ಸೆಲೆಬ್ರಿಟಿಗಳನ್ನು ಮೋದಿ ಭೇಟಿ ಮಾಡಿದ್ದರು. ಆಗ ಅವರ ಜೊತೆ ಶಾರುಖ್ ಖಾನ್ ಮಾತುಕತೆ ನಡೆಸಿದ್ದರು. ಈ ವರ್ಷ ಮೋದಿ ಜನ್ಮದಿನಕ್ಕೆ ಶಾರುಖ್ ಅವರು ವಿಶ್ ಮಾಡಿದ್ದರು. ಈಗ ತಾಯಿಯನ್ನು ಕಳೆದುಕೊಂಡ ಪ್ರಧಾನ ಮಂತ್ರಿಗೆ ಕಿಂಗ್ ಖಾನ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Jhoome Jo Pathaan: ‘ಪಠಾಣ್’ ಚಿತ್ರದ 2ನೇ ಹಾಡಿನಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮಿಂಚಿಂಗ್
ಶಾರುಖ್ ಖಾನ್ ಮಾತ್ರವಲ್ಲದೇ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ತಮ್ಮ ಸಂತಾಪದ ನುಡಿಗಳನ್ನು ತಿಳಿಸಿದ್ದಾರೆ. ಅಕ್ಷಯ್ ಕುಮಾರ್, ಅನುಪಮ್ ಖೇರ್, ಕಂಗನಾ ರಣಾವತ್, ವಿವೇಕ್ ಅಗ್ನಿಹೋತ್ರಿ, ಜಾಕಿ ಶ್ರಾಫ್, ಸ್ವರಾ ಭಾಸ್ಕರ್, ಸೋನು ಸೂದ್ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ. ಶಾರುಖ್ ಅವರ ಪೋಸ್ಟ್ಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ನಾಲ್ಕು ವರ್ಷದ ಬಳಿಕ ಶಾರುಖ್ ಖಾನ್ ಅವರು ದೊಡ್ಡ ಪರದೆಯಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲು ಬರುತ್ತಿದ್ದಾರೆ. ಅವರ ನಟನೆಯ ‘ಪಠಾಣ್’ ಸಿನಿಮಾ 2023ರ ಜನವರಿ 25ರಂದು ಬಿಡುಗಡೆ ಆಗುತ್ತಿದೆ. ಹೈ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರ ಮೂಲಕ ಶಾರುಖ್ ಖಾನ್ ಅವರು ಗ್ರ್ಯಾಂಡ್ ಕಮ್ಬ್ಯಾಕ್ ಮಾಡಲಿದ್ದಾರೆ.
ಇದನ್ನೂ ಓದಿ: Shah Rukh Khan: ‘ಪಠಾಣ್’ ಚಿತ್ರ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್ ಮಾಡಲಿದೆ? ಶಾರುಖ್ ಖಾನ್ಗೆ ನೇರ ಪ್ರಶ್ನೆ
ಬಿಡುಗಡೆಗೂ ಮುನ್ನ ‘ಪಠಾಣ್’ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಈ ಚಿತ್ರದ ‘ಬೇಷರಂ ರಂಗ್..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿಸಿ ಧರಿಸಿರುವುದನ್ನು ಒಂದು ವರ್ಗದ ನೆಟ್ಟಿಗರು ವಿರೋಧಿಸಿದ್ದಾರೆ. ಈ ಸಿನಿಮಾವನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:05 pm, Sat, 31 December 22