
ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ದೊಡ್ಡ ಪರದೆಗೆ ಮರಳುತ್ತಿರುವುದಕ್ಕೆ ಅವರ ಅಭಿಮಾನಿಗಳ ವಲಯದಲ್ಲಿ ಖುಷಿ ಇದೆ. ಇನ್ನು ಒಂದು ವರ್ಗದ ಜನರು ಈ ಚಿತ್ರವನ್ನು ಟೀಕಿಸುತ್ತಿದ್ದಾರೆ. ಈ ಚಿತ್ರದಿಂದ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿವೆ. ಇನ್ನು ಚಿತ್ರಕ್ಕೆ ಬೈಕಾಟ್ ಬೆದರಿಕೆಯೂ ಇದೆ. ಈ ಮಧ್ಯೆ ‘ಪಠಾಣ್’ ಚಿತ್ರದ (Pathan Movie) ಟ್ರೇಲರ್ ಲೀಕ್ ಆಗಿದೆ. ಇದು ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
‘ಪಠಾಣ್’ ಚಿತ್ರ ರಿಲೀಸ್ಗೆ ಇನ್ನು 20 ದಿನ ಬಾಕಿ ಇದೆ. ಜನವರಿ 25ರಂದು ‘ಪಠಾಣ್’ ರಿಲೀಸ್ ಆಗಲಿದೆ. ಶಾರುಖ್ ಖಾನ್ ಅವರು ಈ ಚಿತ್ರಕ್ಕಾಗಿ 6 ಪ್ಯಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಎಲ್ಲರ ಗಮನ ಸೆಳೆದಿದೆ. ಇನ್ನು ದೀಪಿಕಾ ಪಡುಕೋಣೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಸಿದ್ದಾರ್ಥ್ ಆನಂದ್ ಸಾಕಷ್ಟು ಎಚ್ಚರಿಕೆ ತೆಗೆದುಕೊಂಡ ಹೊರತಾಗಿಯೂ ಈ ಚಿತ್ರದ ಟ್ರೇಲರ್ ಲೀಕ್ ಆಗಿದೆ. ‘ಪಠಾಣ್’ ಟ್ರೇಲರ್ ಎನ್ನಲಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋನ ಸಾಕಷ್ಟು ಎಡಿಟ್ ಮಾಡಲಾಗಿದೆ. ಹೀಗಾಗಿ, ಯಾವುದೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಕೆಲವರು ಇದು ‘ಪಠಾಣ್’ ಟ್ರೇಲರ್ ತುಣುಕು ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ಅಲ್ಲಗಳೆದಿದ್ದಾರೆ. ಇದು ನಿಜಕ್ಕೂ ‘ಪಠಾಣ್’ ಚಿತ್ರದ ಟ್ರೇಲರ್ ಹೌದೋ ಅಥವಾ ಇಲ್ಲವೋ ಎಂಬ ಬಗ್ಗೆ ತಂಡದ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.
‘ಪಠಾಣ್’ ಸಿನಿಮಾದ ಹಾಡುಗಳು ಸದ್ದು ಮಾಡಿವೆ. ‘ಬೇಷರಂ ರಂಗ್..’ ಹಾಡು ಸಾಕಷ್ಟು ವಿವಾದ ಸೃಷ್ಟಿಸಿದೆ. ಇದರಿಂದ ಚಿತ್ರಕ್ಕೆ ಮೈಲೇಜ್ ಸಿಕ್ಕಿದೆ. ಮತ್ತೊಂದು ಕಡೆ ಈ ವಿವಾದದಿಂದ ಚಿತ್ರಕ್ಕೆ ಹಿನ್ನಡೆ ಆಗುವ ಸೂಚನೆ ಕೂಡ ಸಿಕ್ಕಿದೆ.
ಇದನ್ನೂ ಓದಿ: Vivek Agnihotri: ‘ಪಠಾಣ್ ಚಿತ್ರದ ವಿವಾದದಿಂದ ವಿವೇಕ್ ಅಗ್ನಿಹೋತ್ರಿ ಪ್ರಚಾರ ಪಡೆಯುತ್ತಿದ್ದಾರೆ’: ಕೆಆರ್ಕೆ ಆರೋಪ
‘ಪಠಾಣ್’ ಚಿತ್ರದಲ್ಲಿ ಜಾನ್ ಅಬ್ರಾಹಂ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಚಿತ್ರದ ನಾಯಕಿ. ಸಿನಿಮಾದ ಟೀಸರ್ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ‘ಜವಾನ್’, ‘ಡಂಕಿ’ ಚಿತ್ರದ ಕೆಲಸಗಳಲ್ಲೂ ಶಾರುಖ್ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ