
ಬಾಲಿವುಡ್‌ನ ಪ್ರತಿಭಾವಂತ ನಟ ರಾಜ್‌ಕುಮಾರ್ ರಾವ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಪ್ರಹಾರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಉಜ್ವಲ್ ನಿಕಮ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ದೇಶಾದ್ಯಂತ ಸಂಚಲನ ಮೂಡಿಸಿದ್ದ 26/11 ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಸೆರೆ ಸಿಕ್ಕ ಉಗ್ರ ಅಜ್ಮಲ್ ಕಸಬ್ ವಿರುದ್ಧ ನಡೆದ ಕಾನೂನು ಹೋರಾಟ ಮತ್ತು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರ ವೃತ್ತಿಜೀವನದ ಕಥಾಹಂದರವನ್ನು ಈ ಚಿತ್ರ ಹೊಂದಿದೆ.
ಟ್ರೇಲರ್ ಆರಂಭದಲ್ಲೇ ಉಜ್ವಲ್ ನಿಕಮ್ ಪಾತ್ರದಲ್ಲಿರುವ ರಾಜ್‌ಕುಮಾರ್ ರಾವ್ ಅವರು ಮುಂಬೈ ದಾಳಿಯ ರಾತ್ರಿ ಏನು ನಡೆಯಿತು ಎಂಬುದರ ಕುರಿತು ಬಾಲಕಿಯೊಬ್ಬಳನ್ನು ಪ್ರಶ್ನಿಸುವ ಮೂಲಕ ಕಥೆಯ ಗಂಭೀರತೆಯನ್ನು ಪರಿಚಯಿಸುತ್ತಾರೆ. ಕೋರ್ಟ್ ಹಾಲ್‌ನಲ್ಲಿ ನಡೆಯುವ ಈ ಕಾನೂನು ಸಮರವು ಅತ್ಯಂತ ರೋಚಕವಾಗಿದ್ದು, ಉಗ್ರ ಕಸಬ್‌ಗೆ ತಕ್ಕ ಶಿಕ್ಷೆ ಕೊಡಿಸಲು ವಕೀಲರು ನಡೆಸುವ ಹೋರಾಟದ ಝಲಕ್ ಟ್ರೇಲರ್‌ನಲ್ಲಿದೆ.
ರಾಜ್‌ಕುಮಾರ್ ರಾವ್ ಅವರು ಉಜ್ವಲ್ ನಿಕಮ್ ಪಾತ್ರದಲ್ಲಿ ನಟಿಸಿದ್ದು, ಅವರ ಗೆಟಪ್, ಮರಾಠಿ ಭಾಷೆಯ ಉಚ್ಛಾರಣೆ ಹಾಗೂ ಮೈಕಟ್ಟು ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಉಜ್ವಲ್ ನಿಕಮ್ ಅವರ ಪತ್ನಿ ಜ್ಯೋತಿ ನಿಕಮ್ ಪಾತ್ರದಲ್ಲಿ ವಮಿಕಾ ಗಬ್ಬಿ ನಟಿಸಿದ್ದು, ಕೋರ್ಟ್‌ನ ಹೊರಗಿನ ಕೌಟುಂಬಿಕ ಹಾಗೂ ಒತ್ತಡದ ಬದುಕಿನ ಎಳೆಗಳನ್ನು ತೋರಿಸಲಿದ್ದಾರೆ.
ಇಸ್ಲಾಮಾಬಾದ್‌ನಿಂದ ಆಗಮಿಸುವ ನಿಯೋಗದ ಪ್ರಮುಖರಾಗಿ ಜೈದೀಪ್ ಅಹ್ಲಾವತ್ ಕಾಣಿಸಿಕೊಂಡಿದ್ದಾರೆ. ಎದುರಾಳಿ ಪಾಳಯದ ವಕೀಲರಾಗಿ ಸಿಕಂದರ್ ಖೇರ್ ಗಮನ ಸೆಳೆದಿದ್ದಾರೆ. ಮರಾಠಿ ನಟ ಲಲಿತ್ ಪ್ರಭಾಕರ್ ಅವರು ಅಜ್ಮಲ್ ಕಸಬ್ ಪಾತ್ರವನ್ನು ಮಾಡಿದ್ದಾರೆ. ‘ಪ್ರಹಾರ್’ ಸಿನಿಮಾ ಹೇಗಿರಲಿದೆ ಎಂಬುದರ ಸುಳಿವು ಈ ಟ್ರೇಲರ್ ಮೂಲಕ ಸಿಕ್ಕಿದೆ. ಈ ಚಿತ್ರವು ಅಕ್ಟೋಬರ್ 16ರಂದು ಬಿಡುಗಡೆ ಆಗಲಿದೆ. ಟ್ರೇಲರ್ ಬಿಡುಗಡೆ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ: ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಎಲ್ಲಿದ್ದಾನೆ ಎಂದು ಭಾರತಕ್ಕೆ ತಿಳಿಸಿದ್ದು ನವಾಜ್ ಷರೀಫ್: ಪಾಕ್ ಸಚಿವ
ಟ್ರೇಲರ್‌ನ ಅಂತ್ಯದಲ್ಲಿ ಉಗ್ರ ಅಜ್ಮಲ್ ಕಸಬ್ ಕಟಕಟೆಯಲ್ಲಿ ನಿಂತು ನೀಡುವ ಹೇಳಿಕೆಯು ಅಚ್ಚರಿ ಮೂಡಿಸುತ್ತದೆ. ತಾನು ಯಾವುದೇ ಭಯೋತ್ಪಾದಕನಲ್ಲ, ಮುಂಬೈ ನಗರವನ್ನು ಸುತ್ತಲು ಬಂದ ಪ್ರವಾಸಿಗನಷ್ಟೇ ಎಂದು ಕಸಾಬ್ ವಾದಿಸುತ್ತಾನೆ. ಅಲ್ಲದೆ, ತನನ್ನು ಚಿತ್ರಹಿಂಸೆ ನೀಡಿ ಉಗ್ರನಂತೆ ಬಿಂಬಿಸಲಾಗಿದೆ ಎಂಬ ಆಘಾತಕಾರಿ ಸುಳ್ಳು ಹೇಳಿಕೆಯನ್ನು ನೀಡುವುದು ಟ್ರೇಲರ್‌ನಲ್ಲಿ ಹೈಲೈಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.