12ನೇ ವಯಸ್ಸಿಗೆ ಡ್ರಗ್ಸ್​ಗೆ ಒಳಗಾದ ಸ್ಟಾರ್ ನಟಿಯ ಮಗ

ಪ್ರತೀಕ್ ಬಾಲಿವುಡ್ ಇಂಡಸ್ಟ್ರಿಗೆ ಬಂದ ನಂತರ ಡ್ರಗ್ಸ್ ಚಟಕ್ಕೆ ಬಿದ್ದಿದ್ದರು ಎನ್ನಲಾಗಿದೆ. ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಖ್ಯಾತಿಯು ಅವರ ಮೇಲೆ ಪರಿಣಾಮ ಬೀರಿತು ಮತ್ತು ಅವರು ಡ್ರಗ್ಸ್ ಸೇವಿಸಲು ಪ್ರಾರಂಭಿಸಿದರು ಎಂದು ಹೇಳಲಾಗಿತ್ತು.

12ನೇ ವಯಸ್ಸಿಗೆ ಡ್ರಗ್ಸ್​ಗೆ ಒಳಗಾದ ಸ್ಟಾರ್ ನಟಿಯ ಮಗ
ಪ್ರತೀಕ್
Edited By:

Updated on: Nov 11, 2024 | 7:53 AM

ಬಾಲಿವುಡ್‌ ಯಾವಾಗಲೂ ಗ್ಲಾಮರಸ್ ಆಗಿ ಕಾಣಿಸುತ್ತದೆ. ಆದರೆ ಈ ಚಿತ್ರರಂಗದ ಇನ್ನೊಂದು ಕರಾಳ ಮುಖವಿದೆ. ಸಾಮಾನ್ಯವಾಗಿ ಇಲ್ಲಿ ಕಲಾವಿದರು ಕೆಟ್ಟ ಅಭ್ಯಾಸಗಳು ಮತ್ತು ವ್ಯಸನಗಳಿಗೆ ಒಳಗಾಗುತ್ತಾರೆ. ಇದು ಅನೇಕ ಕಲಾವಿದರ ವೃತ್ತಿಜೀವನವನ್ನು ಹಾಳುಮಾಡಿದೆ. ಅಂತಹ ಸಾಲಿನಲ್ಲಿ ನಟ ಪ್ರತೀಕ್ ಬಬ್ಬರ್ ಕೂಡ ಇದ್ದಾರೆ. ಮಾದಕ ವ್ಯಸನದಿಂದ ಪ್ರತೀಕ್ ಸದಾ ಸುದ್ದಿಯಲ್ಲಿರುತ್ತಾರೆ. ಇಂಡಸ್ಟ್ರಿಗೆ ಬಂದ ಮೇಲೆ ಪ್ರತೀಕ್ ಡ್ರಗ್ಸ್ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪ್ರತೀಕ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲೇ ಡ್ರಗ್ಸ್ ಚಟಕ್ಕೆ ಬಿದ್ದಿದ್ದರು ಎಂದು ವಿವರಿಸಿದ್ದಾರೆ.

ಪ್ರತೀಕ್ ಬಾಲಿವುಡ್ ಇಂಡಸ್ಟ್ರಿಗೆ ಬಂದ ನಂತರ ಡ್ರಗ್ಸ್ ಚಟಕ್ಕೆ ಬಿದ್ದಿದ್ದರು ಎನ್ನಲಾಗಿದೆ. ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಖ್ಯಾತಿಯು ಅವರ ಮೇಲೆ ಪರಿಣಾಮ ಬೀರಿತು ಮತ್ತು ಅವರು ಡ್ರಗ್ಸ್ ಸೇವಿಸಲು ಪ್ರಾರಂಭಿಸಿದರು ಎಂದು ಹೇಳಲಾಗಿತ್ತು. ಆದರೆ ಇದೀಗ ಪ್ರತೀಕ್ ಅವರೇ ಈ ಎಲ್ಲಾ ಚರ್ಚೆಗಳಿಗೆ ತೆರೆ ಎಳೆದಿದ್ದು, ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. 12ನೇ ವಯಸ್ಸಿನಿಂದಲೇ ಮಾದಕ ವ್ಯಸನಿಯಾಗಿದ್ದೆ ಎಂದು ಅವರು ವಿವರಿಸಿದ್ದಾರೆ.

ಮಾದಕ ವ್ಯಸನದ ಹಿಂದಿನ ಕಾರಣ ಚಿತ್ರರಂಗವಲ್ಲ, ಆದರೆ ಅವರ ಮನೆಯ ಪರಿಸ್ಥಿತಿ ಎಂದು ಪ್ರತೀಕ್ ಬಹಿರಂಗಪಡಿಸಿದರು. ‘ನಾನು ಚಿತ್ರರಂಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ಹಣ ಹಾಗೂ ಖ್ಯಾತಿಯಿಂದ ಡ್ರಗ್ಸ್​ಗೆ ಒಳಗಾದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಇಲ್ಲ, ಇದು ನಿಜವಲ್ಲ. ನಾನು ಹದಿಮೂರು ವರ್ಷದವನಿದ್ದಾಗಿನಿಂದ ಡ್ರಗ್ಸ್ ಬಳಸುತ್ತಿದ್ದೆ. ವಾಸ್ತವವಾಗಿ, ನಾನು 12 ನೇ ವಯಸ್ಸಿನಲ್ಲಿ ಡ್ರಗ್ಸ್ ತೆಗೆದುಕೊಳ್ಳಲು ಪ್ರಾರಂಭಿಸಿದೆ’ ಎಂದಿದ್ದಾರೆ ಪ್ರತೀಕ್.

‘ನಾನು ತುಂಬಾ ನರ್ವಸ್ ಆಗಿದ್ದೆ. ಹಾಗಂತ ಇದಕ್ಕೆಲ್ಲಾ ಚಿತ್ರರಂಗ ಕಾರಣವಲ್ಲ. ದುರದೃಷ್ಟವಶಾತ್ ನಾನು ತುಂಬಾ ವಿಭಿನ್ನವಾಗಿ ಬೆಳೆದಿದ್ದೇನೆ. ನನ್ನ ಕುಟುಂಬದ ಸಮಸ್ಯೆ ತುಂಬಾ ಜಟಿಲವಾಗಿತ್ತು. ಹಾಗಾಗಿ ನಾನು ಡ್ರಗ್ಸ್ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಹಣ ಮತ್ತು ಖ್ಯಾತಿಯ ಕಾರಣದಿಂದ ನಾನು ಅವರಿಗೆ ಬೀಳಲಿಲ್ಲ. ಅದಕ್ಕೂ ಮೊದಲು ನಾನು ಅದಕ್ಕೆ ವ್ಯಸನಿಯಾಗಿದ್ದೆ’ ಎಂದಿದ್ದಾರೆ.

ಇದನ್ನೂ ಓದಿ: ಮದುವೆ ನಂತರವೂ ಬೇರೆ ಸಂಬಂಧ ಇಟ್ಟುಕೊಂಡಿದ್ದ ಬಾಲಿವುಡ್‌ ನಟರು

ದಿವಂಗತ ನಟಿ ಸ್ಮಿತಾ ಪಾಟೀಲ್ ಮತ್ತು ನಟ ರಾಜ್ ಬಬ್ಬರ್ ಅವರ ಪುತ್ರ ಪ್ರತೀಕ್. ಅವರ ತಂದೆ-ತಾಯಿಗೆ ಚಿತ್ರರಂಗದಲ್ಲಿ ಬೇಡಿಕೆ ಇತ್ತು. ಪ್ರತೀಕ್ ಈ ವರ್ಷ ಪ್ರಿಯಾ ಬ್ಯಾನರ್ಜಿಯೊಂದಿಗೆ ಮದುವೆ ಆದರು. ಅವರು ಶೀಘ್ರದಲ್ಲೇ ಸಲ್ಮಾನ್ ಅವರ ಮುಂಬರುವ ಚಿತ್ರ ‘ಸಿಖಂದರ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us