ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣವಾಗಿರುವುದು ಪ್ರಿಯಾಂಕಾ ಅವರ ಸೋಶಿಯಲ್ ಮೀಡಿಯಾ ಅಕೌಂಟ್. ಅಮೆರಿಕದ ಗಾಯಕ ನಿಕ್ ಜೋನಸ್ (Nick Jonas) ಜೊತೆ ಮದುವೆ ಆದ ಬಳಿಕ ಪ್ರಿಯಾಂಕಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಹೆಸರನ್ನು ‘ಪ್ರಿಯಾಂಕಾ ಚೋಪ್ರಾ ಜೋನಸ್’ ಎಂದು ಬದಲಾಯಿಸಿಕೊಂಡಿದ್ದರು. ಆದರೆ ಈಗ ಪತಿಯ ಸರ್ನೇಮ್ ತೆಗೆದುಹಾಕಿದ್ದಾರೆ. ‘ಜೋನಸ್’ ಹೆಸರನ್ನು ಕೈ ಬಿಟ್ಟಿದ್ದಾರೆ. ಮೊದಲಿನಂತೆ ಕೇವಲ ‘ಪ್ರಿಯಾಂಕಾ ಚೋಪ್ರಾ’ ಎಂದಷ್ಟೇ ಇಟ್ಟುಕೊಂಡಿದ್ದಾರೆ. ಹಾಗಾಗಿ ಈ ಜೋಡಿಯ ನಡುವೆ ಬಿರುಕು ಮೂಡಿರಬಹುದು ಎಂದು ಎಲ್ಲರೂ ಊಹಿಸುತ್ತಿದ್ದಾರೆ. ಶೀಘ್ರವೇ ಅವರು ವಿಚ್ಛೇದನ (Divorce) ಪಡೆಯಬಹುದು ಅಂತ ಕೂಡ ಅನೇಕರು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಆ ಎಲ್ಲ ಗಾಳಿ ಸುದ್ದಿಗಳಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ ಪ್ರಿಯಾಂಕಾ. ಅದು ಕೂಡ ಒಂದೇ ಒಂದು ಕಮೆಂಟ್ ಮೂಲಕ!
ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಕಾಲ ಆ್ಯಕ್ಟೀವ್ ಆಗಿರುತ್ತಾರೆ. ಮಂಗಳವಾರ (ನ.23) ಇನ್ಸ್ಟಾಗ್ರಾಮ್ನಲ್ಲಿ ನಿಕ್ ಜೋಸನ್ ಅವರು ಒಂದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರಿಯಾಂಕಾ ಕೂಡ ಕಮೆಂಟ್ ಮಾಡಿದ್ದಾರೆ. ‘Damn! I just died in your arms’ ಎಂದು ಕಮೆಂಟ್ ಮಾಡುವ ಮೂಲಕ ಪತಿಯ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.
ಏಕಾಏಕಿ ಪ್ರಿಯಾಂಕಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಹೆಸರಿನಿಂದ ಪತಿಯ ಸರ್ನೇಮ್ ತೆಗೆದು ಹಾಕಿದ್ದು ಯಾಕೆ ಎಂಬುದಕ್ಕೆ ಸದ್ಯಕ್ಕಂತೂ ಉತ್ತರ ಸಿಕ್ಕಿಲ್ಲ. ಈಗಾಗಲೇ ವಿಚ್ಛೇದನದ ಗಾಸಿಪ್ ಜೋರಾಗಿ ಹಬ್ಬಿದೆ. ಅದಕ್ಕೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ಗಾಳಿ ಸುದ್ದಿ ಹಬ್ಬಿಸಬಾರದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
Viral Video: ವಧು ಮತ್ತು ಸ್ನೇಹಿತೆಯರು ಸೇರಿ ಪ್ರಿಯಾಂಕಾ ಚೋಪ್ರಾ ಹಾಡಿಗೆ ಸಕತ್ ಸ್ಟೆಪ್; ವಿಡಿಯೊ ಫುಲ್ ವೈರಲ್
ಅಮೆರಿಕದಲ್ಲಿ ಪ್ರಿಯಾಂಕಾಗೆ ಲಕ್ಷ್ಮೀ ಪೂಜೆ ಸಂಭ್ರಮ; ಗಮನ ಸೆಳೆದ ಚೋಪ್ರಾ-ನಿಕ್
Published On - 7:59 am, Tue, 23 November 21