ಬಾಲಿವುಡ್​ನ ಈ ಚಿತ್ರಕ್ಕೆ 120 ಕಡೆ ಕತ್ತರಿ ಹಾಕಲು ಹೇಳಿದ ಸೆನ್ಸಾರ್ ಮಂಡಳಿ; ಅಂಥದ್ದೇನಿದೆ?

|

Updated on: Sep 25, 2024 | 2:37 PM

ಪಂಜಾಬಿ '95’ ಚಿತ್ರಕ್ಕೆ ಹನಿ ಟ್ರೆಹಾನ್ ನಿರ್ದೇಶನ ಮಾಡಿದ್ದಾರೆ. ರೋನಿ ಸ್ಕ್ರೂವಾಲಾ ನಿರ್ಮಿಸಿದ್ದಾರೆ. ಈ ಮೊದಲು ಸೆನ್ಸಾರ್ ಮಂಡಳಿಯವರು 85 ಕಡೆ ಕಟ್ ಮಾಡುವಂತೆ ಹೇಳಿದ್ದರು. ಈಗ ಪರಿಷ್ಕರಣಾ ಸಮಿತಿ ಕೂಡ ಸಿನಿಮಾ ವೀಕ್ಷಣೆ ಮಾಡಿದ್ದು, 120 ದೃಶ್ಯಗಳ ಬಗ್ಗೆ ಅಪಸ್ವರ ತೆಗೆದಿದೆ.

ಬಾಲಿವುಡ್​ನ ಈ ಚಿತ್ರಕ್ಕೆ 120 ಕಡೆ ಕತ್ತರಿ ಹಾಕಲು ಹೇಳಿದ ಸೆನ್ಸಾರ್ ಮಂಡಳಿ; ಅಂಥದ್ದೇನಿದೆ?
ಬಾಲಿವುಡ್​ನ ಈ ಚಿತ್ರಕ್ಕೆ 120 ಕಡೆ ಕತ್ತರಿ ಹಾಕಲು ಹೇಳಿದ ಸೆನ್ಸಾರ್ ಮಂಡಳಿ; ಅಂಥದ್ದೇನಿದೆ?
Follow us on

ಸಿನಿಮಾ ನೋಡಿದ ಬಳಿಕ ಸೆನ್ಸಾರ್ ಮಂಡಳಿಯವರು 10 ಕಡೆ ಕತ್ತರಿ ಹಾಕಲು ಹೇಳಿದರೆ ಸಾಕಷ್ಟು ಚರ್ಚೆ ಆಗುತ್ತದೆ. ಹೀಗಿರುವಾಗ ಬರೋಬ್ಬರಿ 120 ದೃಶ್ಯಗಳ ಬಗ್ಗೆ ಪ್ರಶ್ನೆ ಮಾಡಿದರೆ? ಅವುಗಳಿಗೆ ಕತ್ತರಿ ಹಾಕುವಂತೆ ಹೇಳಿದರೆ? ಈಗ ಅಂಥದ್ದೇ ಘಟನೆ ನಡೆದಿದೆ. ದಿಲ್ಜಿತ್ ದೋಸಾಂಜ್ ನಟನೆಯ ‘ಪಂಜಾಬ್ ’95’ ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿಯವರು ಅಪಸ್ವರ ತೆಗೆದಿದ್ದಾರೆ. ಈ ಸಿನಿಮಾದ 120 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಹೇಳಿದೆ. ಸಿನಿಮಾದ ಟೈಟಲ್ ಕೂಡ ಬದಲಿಸುವಂತೆ ನಿರ್ದೇಶಿಸಿದೆ.

‘ಪಂಜಾಬಿ ’95’ ಚಿತ್ರಕ್ಕೆ ಹನಿ ಟ್ರೆಹಾನ್ ನಿರ್ದೇಶನ ಮಾಡಿದ್ದಾರೆ. ರೋನಿ ಸ್ಕ್ರೂವಾಲಾ ನಿರ್ಮಿಸಿದ್ದಾರೆ. ಇದು ನೈಜ ಘಟನೆಗಳನ್ನು ಆಧರಿಸಿದೆ. ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರ ಕಥೆಯನ್ನು ಸಿನಿಮಾ ಹೊಂದಿದೆ. ಪಂಜಾಬ್‌ನ ದಂಗೆಯ ಅವಧಿಯಲ್ಲಿ ನಡೆದ ಕೊಲೆ ಹಾಗೂ ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಜಸ್ವಂತ್ ಪ್ರಯತ್ನಿಸಿದ್ದರು.

ಈ ಮೊದಲು ಸೆನ್ಸಾರ್ ಮಂಡಳಿಯವರು 85 ಕಡೆ ಕಟ್ ಮಾಡುವಂತೆ ಹೇಳಿದ್ದರು. ಈಗ ಪರಿಷ್ಕರಣಾ ಸಮಿತಿ ಕೂಡ ಸಿನಿಮಾ ವೀಕ್ಷಣೆ ಮಾಡಿದ್ದು, 120 ದೃಶ್ಯಗಳ ಬಗ್ಗೆ ಅಪಸ್ವರ ತೆಗೆದಿದೆ. ಒಂದೊಮ್ಮೆ 120 ಕಡೆ ಕತ್ತರಿ ಹಾಕಬೇಕಾದ ಪರಿಸ್ಥಿತಿ ಬಂದರೆ ಸಿನಿಮಾದ ಸತ್ವವೇ ಹೋಗಿ ಬಿಡುತ್ತದೆ ಎಂದು ತಂಡದವರು ಅಭಿಪ್ರಾಯಪಟ್ಟೊದ್ದಾರೆ.

ಜಸ್ವಂತ್ ಸಿಂಗ್ ಖಲ್ರಾ ಎಂದು ಬಿಂಬಿಸಲಾದ ನಾಯಕನ ಮರುನಾಮಕರಣ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಪಾತ್ರಕ್ಕೆ ಸಟ್ಲೆಜ್ ಎಂದು ಹೆಸರು ಇಡುವಂತೆ ಮಂಡಳಿ ಸೂಚಿಸಿದೆ. ತಂಡ ಈ ಬದಲಾವಣೆಯನ್ನು ಬಲವಾಗಿ ವಿರೋಧಿಸಿದೆ. ‘ಖಲ್ರಾ ಅವರು ಸಿಖ್ ಸಮುದಾಯದಲ್ಲಿ ಪೂಜ್ಯ ವ್ಯಕ್ತಿಯಾಗಿದ್ದಾರೆ. ಅವರ ಹೆಸರನ್ನು ಮರುನಾಮಕರಣ ಮಾಡುವುದು ಅವರ ಪರಂಪರೆಗೆ ಅಗೌರವವಾಗುತ್ತದೆ’ ಎಂದು ತಂಡದವರು ವಾದಿಸಿದ್ದಾರೆ.

ಇದನ್ನೂ ಓದಿ: ‘ದೇವರ’ ಚಿತ್ರದ ಮೂರು ದೃಶ್ಯಕ್ಕೆ ಕತ್ತರಿ ಹಾಕಲು ಸೂಚಿಸಿದ ಸೆನ್ಸಾರ್ ಮಂಡಳಿ; ಅಂಥದ್ದೇನಿದೆ?

‘ಪಂಜಾಬ್ ’95’ ಟೈಟಲ್​ ತೆಗೆಯುವಂತೆಯೂ ಸೂಚಿಸಲಾಗಿದೆ. ಈ ಟೈಟಲ್ ಸಾರ್ವಜನಿಕರ ಮೇಲೆ ಸಾಕಷ್ಟು ಪ್ರಭಾವ ಬೀರಬಹುದು ಎಂದು ಸೆನ್ಸಾರ್ ಮಂಡಳಿ ಅಭಿಪ್ರಾಯಪಟ್ಟಿದೆ. ಸಿನಿಮಾ ಉದ್ದಕ್ಕೂ ಪಂಜಾಬ್ ಹಾಗೂ ಜಿಲ್ಲೆಗಳ ಹೆಸರನ್ನು ಉಲ್ಲೇಖ ಮಾಡಬಾರದು ಎಂದು ಸೆನ್ಸಾರ್​ ಮಂಡಳಿ ಹೇಳಿದೆ. ಕೆನಡಾ ಮತ್ತು ಯುಕೆ ಉಲ್ಲೇಖಗಳು ಸೂಕ್ತವಲ್ಲವೆಂದು ಪರಿಗಣಿಸಲಾಗಿದ್ದು, ತೆಗೆದುಹಾಕಬೇಕು ಎಂದು ಸೂಚಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.