‘ದೇವರ’ ಚಿತ್ರದ ಮೂರು ದೃಶ್ಯಕ್ಕೆ ಕತ್ತರಿ ಹಾಕಲು ಸೂಚಿಸಿದ ಸೆನ್ಸಾರ್ ಮಂಡಳಿ; ಅಂಥದ್ದೇನಿದೆ?
ಸೆನ್ಸಾರ್ ಮಂಡಳಿ ‘ದೇವರ’ ಚಿತ್ರಕ್ಕೆ U/A ಪ್ರಮಾಣಪತ್ರವನ್ನು ನೀಡಿದೆ. ಸಿನಿಮಾಗೆ ಮೂರು ದೃಶ್ಯಗಳನ್ನು ಕಟ್ ಮಾಡಲು ಹಾಗೂ ಒಂದು ದೃಶ್ಯದಲ್ಲಿ ವಿಎಫ್ಎಕ್ಸ್ ದೃಶ್ಯ ಎಂದು ಉಲ್ಲೇಖಿಸಲು ಸೂಚಿಸಿದೆ. ಮೂರು ದೃಶ್ಯಗಳು ಹೆಚ್ಚು ವೈಲೆನ್ಸ್ ಇಂದ ಕೂಡಿದೆಯಂತೆ.
ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿ ಮಾಡಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ಸೆಪ್ಟೆಂಬರ್ 27ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾಗೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ರಿಲೀಸ್ಗೆ ಕೆಲವು ದಿನಗಳು ಬಾಕಿ ಇರುವಾಗ ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಈ ವೇಳೆ ಮೂರು ಕಡೆಗಳಲ್ಲಿ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿದೆ.
‘ದೇವರ’ ಚಿತ್ರಕ್ಕೆ U/A ಪ್ರಮಾಣಪತ್ರ ನೀಡಲಾಗಿದೆ. ಸಿನಿಮಾಗೆ ಮೂರು ದೃಶ್ಯಗಳನ್ನು ಕಟ್ ಮಾಡಲು ಹಾಗೂ ಒಂದು ದೃಶ್ಯದಲ್ಲಿ ವಿಎಫ್ಎಕ್ಸ್ ದೃಶ್ಯ ಎಂದು ಉಲ್ಲೇಖಿಸಲು ಸೂಚಿಸಿದೆ. ಮೂರು ದೃಶ್ಯಗಳು ಹೆಚ್ಚು ವೈಲೆನ್ಸ್ ಇಂದ ಕೂಡಿದೆಯಂತೆ. ಶಾರ್ಕ್ ದೃಶ್ಯಕ್ಕೆ ‘ಗ್ರಾಫಿಕ್ಸ್ ಶಾರ್ಕ್’ ಎಂದು ಉಲ್ಲೇಖಿಸಲು ಸೂಚಿಸಿದೆ. ಇದಕ್ಕೆ ತಂಡ ಒಪ್ಪಿದೆ ಎನ್ನಲಾಗಿದೆ.
ಯಾವ ದೃಶ್ಯಗಳು?
ವ್ಯಕ್ತಿಯೋರ್ವ ತನ್ನ ಪತ್ನಿಗೆ ಒದೆಯುವುದು, ವ್ಯಕ್ತಿಯ ದೇಹವನ್ನು ಖಡ್ಗದಲ್ಲಿ ಸೀಳುವುದು ಹಾಗೂ ಮಗು ತಾಯಿಗೆ ಒದೆಯುವ ದೃಶ್ಯದ ಬಗ್ಗೆ ಸೆನ್ಸಾರ್ ಮಂಡಳಿ ತಕರಾರು ತೆಗೆದಿದೆ. ಈ ದೃಶ್ಯಗಳಿಂದ ಸಮಾಜದ ಮೇಲೆ ಅಡ್ಡಪರಿಣಾಮ ಉಂಟಾಗಬಹುದು ಎಂದು ಸೆನ್ಸಾರ್ ಮಂಡಳಿ ಅಭಿಪ್ರಾಯಪಟ್ಟಿದೆ.
‘ದೇವರ’ ಅವಧಿ ಎಷ್ಟು?
‘ದೇವರ’ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೊದಲ ಭಾಗದ ರನ್ಟೈಮ್ 177 ನಿಮಿಷದ 58 ಸೆಕೆಂಡ್ ಇದೆ. ಅಂದರೆ ಸಿನಿಮಾ ಸುಮಾರು 3 ಗಂಟೆ ಇರಲಿದೆ. ಈ ಚಿತ್ರದ ಟ್ರೇಲರ್ ನೋಡಿ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ‘ದೇವರ’ ಸಿನಿಮಾದಲ್ಲಿ ಕೇವಲ ಗ್ಲಾಮರ್ಗೆ ಸೀಮಿತವಾದ್ರಾ ಜಾನ್ವಿ ಕಪೂರ್?
ಸಿನಿಮಾ ಬಗ್ಗೆ
‘ದೇವರ’ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಪ್ರಮುಖ ಪಾತ್ರ ಮಾಡಿದ್ದಾರೆ. ಜಾನ್ವಿ ಕಪೂರ್ ಅವರಿಗೆ ಜೊತೆಯಾಗಿದ್ದಾರೆ. ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ವಿಲನ್ ರೋಲ್ ಮಾಡುತ್ತಿದ್ದಾರೆ. ಈ ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್. ಮಿಕ್ಕಿಲಿನೇನಿ ಸುಧಾಕರ್, ಕೊಸರಾಜು ಹರಿ ಕೃಷ್ಣ ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.