- Kannada News Photo gallery Janhvi Kapoor is Only for Songs In Devara Movie Entertainment News In Kannada
‘ದೇವರ’ ಸಿನಿಮಾದಲ್ಲಿ ಕೇವಲ ಗ್ಲಾಮರ್ಗೆ ಸೀಮಿತವಾದ್ರಾ ಜಾನ್ವಿ ಕಪೂರ್?
ಕೆಲವು ದೊಡ್ಡ ಹೀರೋಗಳ ಸಿನಿಮಾಗಳಲ್ಲಿ ನಟಿಯರು ಕೇವಲ ಗ್ಲಾಮರ್ಗೆ ಮಾತ್ರ ಸೀಮಿತ ಆಗುತ್ತಾರೆ. ಈಗ ‘ದೇವರ’ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರನ್ನು ಕೇವಲ ಗ್ಲಾಮರ್ ಗೊಂಬೆಯಾಗಿ ಇರಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
Updated on: Sep 12, 2024 | 8:34 AM

ನಟಿ ಜಾನ್ವಿ ಕಪೂರ್ ಅವರು ದೇವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಇದರಲ್ಲಿ ಜಾನ್ವಿ ಕಪೂರ್ ಅವರು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ.

ಕೆಲವು ದೊಡ್ಡ ಹೀರೋಗಳ ಸಿನಿಮಾಗಳಲ್ಲಿ ನಟಿಯರು ಕೇವಲ ಗ್ಲಾಮರ್ಗೆ ಮಾತ್ರ ಸೀಮಿತ ಆಗುತ್ತಾರೆ. ಈಗ ‘ದೇವರ’ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರನ್ನು ಕೇವಲ ಗ್ಲಾಮರ್ ಗೊಂಬೆಯಾಗಿ ಇರಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಜಾನ್ವಿ ಕಪೂರ್ ಅವರಿಗೆ ಇದು ಟಾಲಿವುಡ್ನಲ್ಲಿ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅವರಿಗೆ ನಟನೆಗೆ ಅವಕಾಶ ಸಿಕ್ಕರೆ ಮತ್ತೊಂದಷ್ಟು ಆಫರ್ಗಳು ಹರಿದುಬರುತ್ತವೆ. ಆದರೆ, ಅವರು ಕೆಲವೇ ದೃಶ್ಯಗಳಿಗೆ ಸೀಮಿತ ಆದರೆ ಎನ್ನುವ ಭಯ ಫ್ಯಾನ್ಸ್ಗೆ ಕಾಡುತ್ತಿದೆ.

ಜಾನ್ವಿ ಕಪೂರ್ ಪಾತ್ರಕ್ಕೆ ನಿಜಕ್ಕೂ ತೂಕ ಇದ್ದರೆ ಅವರನ್ನು ಟ್ರೇಲರ್ನಲ್ಲಿ ತೋರಿಸಬಹುದಿತ್ತಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಜಾನ್ವಿ ಕಪೂರ್ ಅವರ ಪಾತ್ರದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.

ಜಾನ್ವಿ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗ್ಲಾಮರಸ್ ಫೋಟೋಗಳನ್ನು ಹಂಚಿಕಳ್ಳುತ್ತಾ ಇರುತ್ತಾರೆ. ಈ ಫೋಟೋಗಳು ಗಮನ ಸೆಳೆಯುತ್ತವೆ. ಸೆಪ್ಟೆಂಬರ್ 27ರಂದು ‘ದೇವರ’ ರಿಲೀಸ್ ಆಗಲಿದೆ.




