AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pro Kabaddi League 2024: ಪ್ರೊ ಕಬಡ್ಡಿ ಲೀಗ್​: ಬೆಂಗಳೂರು ಬುಲ್ಸ್ ತಂಡದ ವೇಳಾಪಟ್ಟಿ ಇಲ್ಲಿದೆ

Pro Kabaddi League season 11: ಪ್ರೊ ಕಬಡ್ಡಿ ಲೀಗ್​ನ 11ನೇ ಆವೃತ್ತಿಯು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು ಅಕ್ಟೋಬರ್ 18 ರಿಂದ ಶುರುವಾಗಲಿದೆ. ಇನ್ನು ದ್ವಿತೀಯ ಹಂತದ ಪಂದ್ಯಗಳು ನವೆಂಬರ್ 10 ರಿಂದ ಪ್ರಾರಂಭವಾಗಲಿದ್ದು, ತೃತೀಯ ಸುತ್ತಿನ ಮ್ಯಾಚ್​ಗಳು ಡಿಸೆಂಬರ್ 3 ರಿಂದ ಶುರುವಾಗಲಿದೆ. ಈ ಮೂರು ಹಂತದ ಪಂಧ್ಯಗಳು ಹೈದರಾಬಾದ್, ಪುಣೆ ಹಾಗೂ ನೋಯ್ಡಾದಲ್ಲಿ ನಡೆಯಲಿದೆ.

ಝಾಹಿರ್ ಯೂಸುಫ್
|

Updated on: Sep 12, 2024 | 11:48 AM

Share
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್​ನ 11ನೇ ಆವೃತ್ತಿ ಅಕ್ಟೋಬರ್ 18 ರಿಂದ ಶುರುವಾಗಲಿದೆ. ಹೈದಾಬಾದ್​ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದೇ ದಿನ ನಡೆಯಲಿರುವ 2ನೇ ಪಂದ್ಯದಲ್ಲಿ ಯು ಮುಂಬಾ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಸಹ ಸೆಣಸಲಿದೆ.

1 / 5
ಬೆಂಗಳೂರು ಬುಲ್ಸ್ ತಂಡವು ಹೈದರಾಬಾದ್​ನಲ್ಲಿ ಒಟ್ಟು 8 ಪಂದ್ಯಗಳನ್ನಾಡಲಿದೆ. ಅಕ್ಟೋಬರ್ 18 ರಂದು ತೆಲುಗು ಟೈಟಾನ್ಸ್ ತಂಡವನ್ನು ಎದುರಿಸಲಿರುವ ಬುಲ್ಸ್ ಪಡೆ, ಅಕ್ಟೋಬರ್ 20 ರಂದು ಗುಜರಾತ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಅಕ್ಟೋಬರ್ 22 ರಂದು ಯುಪಿ ಯೋಧಾ, ಅಕ್ಟೋಬರ್ 25 ರಂದು ಪುಣೇರಿ ಪಲ್ಟನ್​ ತಂಡಗಳನ್ನು ಎದುರಿಸಲಿದೆ. ಹಾಗೆಯೇ ಅಕ್ಟೋಬರ್ 29 ರಂದು ದಬಾಂಗ್ ಡೆಲ್ಲಿ ತಂಡದ ವಿರುದ್ಧ ಸೆಣಸಲಿದೆ. ಇದಾದ ಬಳಿಕ ನವೆಂಬರ್ 2 ರಂದು ತೆಲುಗು ಟೈಟಾನ್ಸ್, ನವೆಂಬರ್ 4 ರಂದು ತಮಿಳ್ ತಲೈವಾಸ್ ಹಾಗೂ ನವೆಂಬರ್ 9 ರಂದು ಬೆಂಗಾಳ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಕಣಕ್ಕಿಳಿಯಲಿದೆ.

2 / 5
ಇನ್ನು ನೋಯ್ಡಾದಲ್ಲಿ ನಡೆಯಲಿರುವ 2ನೇ ಸುತ್ತಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡದ ಮೊದಲ ಎದುರಾಳಿ ಜೈಪುರ ಪಿಂಕ್ ಪ್ಯಾಂಥರ್ಸ್. ಈ ಪಂದ್ಯವು ನವೆಂಬರ್ 12 ರಂದು ನಡೆಯಲಿದೆ. ಇದಾದ ಬಳಿಕ ನವೆಂಬರ್ 16 ರಂದು ದಬಾಂಗ್ ಡೆಲ್ಲಿ ಹಾಗೂ ನವೆಂಬರ್ 18 ರಂದು ಯು ಮುಂಬಾ ತಂಡಗಳನ್ನು ಎದುರಿಸಲಿದೆ. ಇನ್ನು ನವೆಂಬರ್ 19 ರಂದು ಪಾಟ್ನಾ ಪೈರೇಟ್ಸ್ ತಂಡವನ್ನು ಎದುರಿಸಲಿದೆ. ಹಾಗೆಯೇ ನವೆಂಬರ್ 21, 25 ಮತ್ತು 30 ರಂದು ಕ್ರಮವಾಗಿ ಹರ್ಯಾಣ ಸ್ಟೀಲರ್ಸ್, ಯು ಮುಂಬಾ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳನ್ನು ಎದುರಿಸಲಿದೆ.

3 / 5
ಡಿಸೆಂಬರ್ 3 ರಿಂದ ಶುರುವಾಗಲಿರುವ ಮೂರನೇ ಸುತ್ತಿನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಡಿಸೆಂಬರ್ 10 ರಂದು ನಡೆಯಲಿರುವ ಪಂದ್ಯದಲ್ಲಿ ಬೆಂಗಾಳ್ ವಾರಿಯರ್ಸ್ ವಿರುದ್ಧ ಸೆಣಸಲಿರುವ ಬೆಂಗಳೂರು ಬುಲ್ಸ್, ಡಿಸೆಂಬರ್ 11 ರಂದು ಹರ್ಯಾಣ ಸ್ಟೀಲ್ಟರ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಡಿಸೆಂಬರ್ 13 ರಂದು ಪುಣೇರಿ ಪಲ್ಟನ್ ಹಾಗೂ ಬೆಂಗಳೂರು ಬುಲ್ಸ್ ಮುಖಾಮುಖಿಯಾಗಲಿದೆ. ಡಿಸೆಂಬರ್ 17 ರಂದು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು, ಡಿಸೆಂಬರ್ 22 ರಂದು ತಮಿಳ್ ತಲೈವಾಸ್ ತಂಡಗಳನ್ನು ಎದುರಿಸಲಿದೆ. ಡಿಸೆಂಬರ್ 24 ರಂದು ನಡೆಯಲಿರುವ ಲೀಗ್ ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾಸ್ ತಂಡಗಳು ಮುಖಾಮುಖಿಯಾಗಲಿದೆ.

4 / 5
ಬೆಂಗಳೂರು ಬುಲ್ಸ್ ತಂಡ: ಸುಶೀಲ್, ಅಕ್ಷಿತ್, ಮಂಜೀತ್, ಪಂಕಜ್, ಅಜಿಂಕ್ಯ ಪವಾರ್, ಪರ್ದೀಪ್ ನರ್ವಾಲ್, ಪ್ರಮೋತ್ ಸೈಸಿಂಗ್, ಜೈ ಭಗವಾನ್, ಜತಿನ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಸೌರಭ್ ನಂದಲ್, ಆದಿತ್ಯ ಪೊವಾರ್, ಲಕ್ಕಿ ಕುಮಾರ್, ಪಾರ್ತೀಕ್, ಅರುಳ್ನಂತಬಾಬು, ರೋಹಿತ್ ಕುಮಾರ್, ಅಕ್ಷಿತ್, ಹಸುನ್ ಥೋಂಗ್‌ಕ್ರುಯಾ, ಚಂದ್ರನಾಯಕ್ ಎಂ, ನಿತಿನ್ ರಾವಲ್.

5 / 5
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್

ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು

ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?

ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ

ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ

ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್

ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ

Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!

ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​

‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್