ರಾಜ್ ಕುಂದ್ರಾ ಅವರ ಅಶ್ಲೀಲ ಸಿನಿಮಾ ದಂಧೆ ಪ್ರಕರಣ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ನಿತ್ಯ ಹೊಸಹೊಸ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಈ ಮಧ್ಯೆ ಭಾರತದ ಭದ್ರತೆ ಮತ್ತು ವಿನಿಮಯ ಮಂಡಳಿ (SEBI) ರಾಜ್ ಕುಂದ್ರಾ-ಶಿಲ್ಪಾ ದಂಪತಿಗೆ ಸೇರಿದ ಕಂಪೆನಿಯಿಂದ ಆದ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 3 ಲಕ್ಷ ರೂಪಾಯಿ ದಂಡ ವಿಧಿಸಿದೆ.
ವಿಯಾನ್ ಇಂಡಸ್ಟ್ರೀಸ್ ಕಂಪೆನಿಯನ್ನು ರಾಜ್ ಕುಂದ್ರಾ ಹೊಂದಿದ್ದಾರೆ. ಶಿಲ್ಪಾ ಶೆಟ್ಟಿ ಈ ಕಂಪನಿಯ ನಿರ್ದೇಶಕಿಯಾಗಿದ್ದರು. ಕಳೆದ ವರ್ಷ ಈ ಹುದ್ದೆಗೆ ಶಿಲ್ಪಾ ರಾಜೀನಾಮೆ ನೀಡಿದ್ದರು. 2013ರ ಸೆಪ್ಟೆಂಬರ್ 1 ಮತ್ತು ಡಿಸೆಂಬರ್ 2015ರ ಡಿಸೆಂಬರ್ 23ರ ಮಧ್ಯೆ ನಡೆದ ಈ ಕಂಪೆನಿಯ ವ್ಯವಹಾರಗಳ ಬಗ್ಗೆ ಸೆಬಿ ತನಿಖೆ ನಡೆಸಿದೆ. ಈ ಕಂಪೆನಿಯ ಷೇರುಗಳು ಬಾಂಬೆ ಷೇರು ಮಾರುಕಟ್ಟೆಯಲ್ಲಿ (ಬಿಎಸ್ಇ) ಲಿಸ್ಟ್ ಆಗಿದೆ. ರಿಪು ಸೂದನ್ ಅಲಿಯಾಸ್ ರಾಜ್ ಕುಂದ್ರಾ, ಶಿಲ್ಪಾ ಕುಂದ್ರಾ ಅಲಿಯಾಸ್ ಶಿಲ್ಪಾ ಶೆಟ್ಟಿ ಈ ಕಂಪೆನಿಯ ಪ್ರಮೋಟರ್ಗಳಾಗಿದ್ದಾರೆ.
ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಪ್ರಕರಣದಲ್ಲಿ ಮುಂಬೈ ಪೊಲೀಸ್ ಅಪರಾಧ ವಿಭಾಗವು ಪ್ರತಿದಿನ ಹೊಸಹೊಸ ವಿಚಾರವನ್ನು ಪತ್ತೆ ಮಾಡುತ್ತಿದೆ. ರಾಜ್ ಕುಂದ್ರಾ ಅವರ ಈ ಅಶ್ಲೀಲ ದಂಧೆ ಪ್ರಕರಣಕ್ಕೂ ಉತ್ತರ ಪ್ರದೇಶದ ಕಾನ್ಪುರಕ್ಕೂ ನಂಟು ಸಿಕ್ಕಿದೆ. ಕಾನ್ಪುರ್ ಮಹಿಳೆಯ ಖಾತೆಗೆ ರಾಜ್ ಕುಂದ್ರಾ ಹಣ ವರ್ಗಾವಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಹರ್ಷಿತಾ ಶ್ರೀವಾಸ್ತವ ಎಂಬ ಮಹಿಳೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಈ ಖಾತೆಯನ್ನು ವಶಕ್ಕೆ ಪಡೆಯಲಾಗಿದ್ದು, ಈ ಖಾತೆಯಲ್ಲಿ ಸುಮಾರು 2,32,45,222 ರೂಪಾಯಿ ಇತ್ತು. ಹಾಟ್ ಶಾಟ್ಸ್ ವಾಟ್ಸಾಪ್ ಗ್ರೂಪ್‌ನಲ್ಲಿ ಅರವಿಂದ್ ಕುಮಾರ್ ಶ್ರೀವಾಸ್ತವ ಹೆಸರಿನ ವ್ಯಕ್ತಿ ಇದ್ದಾರೆ. ಈ ಅರವಿಂದ್ ಅವರ ಪತ್ನಿ ಹರ್ಷಿತಾ. ಅರವಿಂದ್ ಕೋಟ್ಯಂತರ ರೂಪಾಯಿಗಳನ್ನು ಹರ್ಷಿತಾಗೆ ಮಾತ್ರವಲ್ಲ, ತಂದೆ ನರ್ವದ ಶ್ರೀವಾಸ್ತವ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದ್ದರು. ಆದರೆ, ಪಾರ್ನ್ ದಂಧೆಯಿಂದ ಗಳಿಸಿದ ಹಣವನ್ನು ಅರವಿಂದ್ ತನ್ನ ಕುಟುಂಬದ ಖಾತೆಗೆ ಏಕೆ ಕಳುಹಿಸುತ್ತಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ರಾಜ್ ಕುಂದ್ರಾ ಕಾಮಕ್ಕೆ ಹೆದರಿ ಶೌಚಾಲಯದಲ್ಲಿ ಅಡಗಿಕೊಂಡಿದ್ದ ನಟಿ; ಪೊಲೀಸ್ ದೂರಿನಲ್ಲಿ ರಹಸ್ಯ ಬಹಿರಂಗ