ಮೃತ ಸ್ಟಾರ್ ಹೀರೋ ನನ್ನ ಪತಿ ಎಂದು ಹೇಳಿಕೊಂಡು ಬಂದ ನಟಿ; ಮುಂದೇನಾಯ್ತು?

ಬಾಲಿವುಡ್ ದಿಗ್ಗಜ ರಾಜೇಶ್ ಖನ್ನಾ ಪತ್ನಿ ಸ್ಥಾನಕ್ಕಾಗಿ ನಟಿ ಅನಿತಾ ಅಡ್ವಾಣಿ ನಡೆಸಿದ ಕಾನೂನು ಹೋರಾಟಕ್ಕೆ ಬಾಂಬೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಲಿವಿನ್ ರಿಲೇಶನ್‌ಶಿಪ್ ಅನ್ನು ವಿವಾಹ ಸಂಬಂಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ದಿಂಡೋಶಿ ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದ ಅನಿತಾ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮೃತ ಸ್ಟಾರ್ ಹೀರೋ ನನ್ನ ಪತಿ ಎಂದು ಹೇಳಿಕೊಂಡು ಬಂದ ನಟಿ; ಮುಂದೇನಾಯ್ತು?
ಅನಿತಾ-ರಾಜೇಶ್

Updated on: Apr 02, 2026 | 7:45 AM

ಬಾಲಿವುಡ್​​ನಲ್ಲಿ ಹಲವು ವರ್ಷಗಳ ಕಾಲ ಮಿಂಚಿದವರು ರಾಜೇಶ್​ ಖನ್ನಾ. ಅವರು ಮೃತಪಟ್ಟು ಹಲವು ವರ್ಷಗಳೇ ಕಳೆದಿವೆ. ಆದರೆ, ಅವರ ಮೇಲೆ ಇರುವ ಒಂದು ವಿವಾದ ಮಾತ್ರ ಈಗಲೂ ಸುದ್ದಿ ಆಗುತ್ತಿದೆ. ‘ರಾಜೇಶ್ ಖನ್ನಾ ನನ್ನ ಪತಿ’ ಎಂದು ನಟಿ ಅನಿತಾ ಅಡ್ವಾಣಿ ಅವರು ಹೇಳಿಕೊಂಡಿದ್ದರು. ಅದರೆ, ಕೋರ್ಟ್ಅಲ್ಲಿ ಅವರಿಗೆ ಹಿನ್ನಡೆ ಆಗಿದೆ. ಅವರಿಗೆ ಪತ್ನಿಯ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

‘ಕಾನೂನಾತ್ಮಕವಾಗಿ ರಾಜೇಶ್ ಖನ್ನಾ ನಿಮ್ಮ ಪತಿ ಆಗಲು ಸಾಧ್ಯವಿಲ್ಲ’ ಎಂದು ದಿಂಡೋಶಿ ಸೆಷನ್ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಅನಿತಾ ಅಡ್ವಾಣಿ ಬಾಂಬೇ ಹೈಕೋರ್ಟ್​ ಅಲ್ಲಿ ಪ್ರಶ್ನೆ ಮಾಡಿದ್ದರು. ಅಲ್ಲಿಯೂ ಅನಿತಾಗೆ ಹಿನ್ನಡೆ ಆಗಿದೆ.

ಅನಿತಾ ಅವರು ಬಾಂಬೇ ಹೈಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ರಾಜೇಶ್ ಪರವಾಗಿ ಅವರ ಮಗಳು ಟ್ವಿಂಕಲ್ ಖನ್ನಾ, ಅಳಿತ ಅಕ್ಷಯ್ ಕುಮಾರ್ ಹಾಗೂ ಪತ್ನಿ ಡಿಂಪಲ್ ಕಪಾಡಿಯಾ ವಕಲೀರೊಬ್ಬರನ್ನು ನೇಮಿಸಿದ್ದರು. ಅನಿತಾ ಅಡ್​ವಾಣಿ ಅವರನ್ನು ರಾಜೇಶ್ ಪತ್ನಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ವಾದಿಸಲಾಯಿತು. ಇದನ್ನು ಕೋರ್ಟ್ ಪುರಸ್ಕರಿಸಿದೆ.

‘ನನ್ನ ಹಾಗೂ ರಾಜೇಶ್ ಮಧ್ಯೆ ಪತ್ನಿ ರೀತಿಯ ಸಂಬಂಧ ಇತ್ತು. ಅದು ಮದುವೆ ರೀತಿಯೇ ಆಗಿತ್ತು. ರಾಜೇಶ್ ನಿಧನದ ನಂತರ ನನ್ನನ್ನು ಮನೆಯಿಂದ ಹೊರಕ್ಕೆ ಹಾಕಲಾಯಿತು’ ಎಂದು ಅನಿತಾ ಆರೋಪಿಸಿದ್ದಾರೆ. ಲಿವಿನ್​ ರಿಲೇಶನ್​ಶಿಪ್​ಗೆ ಮದುವೆಯ ಸ್ಥಾನ ಕೊಡಲು ಸಾಧ್ಯವಿಲ್ಲ ಎಂಬುದು ಕೋರ್ಟ್ ಅಭಿಪ್ರಾಯ.

ಇದನ್ನೂ ಓದಿ: ‘ನೀನು ಅಕ್ಷಯ್​ ಕುಮಾರ್​​ನ ಮದ್ವೆ ಆಗ್ತೀಯಾ’; ಟ್ವಿಂಕಲ್​ ಖನ್ನಾ ಕೈ ನೋಡಿ ಭವಿಷ್ಯ ನುಡಿದಿದ್ದ ಜ್ಯೋತಿಷಿ

ರಾಜೇಶ್ ಖನ್ನಾ ಭಾರತ ಚಿತ್ರರಂಗದ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರು 1965ರಲ್ಲಿ 1969 ಮತ್ತು 1971 ರ ನಡುವೆ, ಅವರು ಸತತ 15 ಹಿಟ್ ಚಿತ್ರಗಳನ್ನು ನೀಡಿದರು. ಇದು ಹಿಂದಿ ಚಿತ್ರರಂಗದಲ್ಲಿ ದಾಖಲೆಯಾಗಿದೆ. ಅವರು ಮೂರು ಫಿಲ್ಮ್‌ಫೇರ್ (ಅತ್ಯುತ್ತಮ ನಟ) ಪ್ರಶಸ್ತಿಗಳನ್ನು ಗೆದ್ದರು. ಅವರು ಕೆಲ ವರ್ಷ ರಾಜಕೀಯದಲ್ಲೂ ಇದ್ದರು. 1973ರಲ್ಲಿ ಡಿಂಪಲ್ ಕಪಾಡಿಯಾ ಅವರನ್ನು ರಾಜೇಶ್ ವಿವಾಹ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us