Rakhi Sawant: ಬೀದಿಗೆ ಬಂತು ಆದಿಲ್​ ಖಾನ್​-ರಾಖಿ ಸಾವಂತ್​ ಮದುವೆ ಗಲಾಟೆ; ಪತಿ ಮೇಲೆ ಅನೈತಿಕ ಸಂಬಂಧದ ಆರೋಪ

Rakhi Sawant Viral Video: ‘ಮೊದಲಿಗೆ ನನ್ನ ಜೊತೆ ಮದುವೆ ಆಗಿದ್ದನ್ನು ಆದಿಲ್​ ಖಾನ್​ ಒಪ್ಪಿಕೊಳ್ಳಲಿಲ್ಲ. ನಂತರ ಮಾಧ್ಯಮದ ಭಯದಿಂದ ಒಪ್ಪಿಕೊಂಡ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

Rakhi Sawant: ಬೀದಿಗೆ ಬಂತು ಆದಿಲ್​ ಖಾನ್​-ರಾಖಿ ಸಾವಂತ್​ ಮದುವೆ ಗಲಾಟೆ; ಪತಿ ಮೇಲೆ ಅನೈತಿಕ ಸಂಬಂಧದ ಆರೋಪ
ರಾಖಿ ಸಾವಂತ್

Updated on: Feb 03, 2023 | 8:24 PM

ವಿವಾದಗಳಿಂದಲೇ ಪ್ರಚಾರ ಪಡೆದ ನಟಿ ರಾಖಿ ಸಾವಂತ್ (Rakhi Sawant) ಅವರು ಪ್ರತಿ ದಿನ ಕಣ್ಣೀರು ಹಾಕುತ್ತಿದ್ದಾರೆ. ಮದುವೆ ಕಾರಣದಿಂದ ಅವರು ನೋವು ಅನುಭವಿಸುವಂತಾಗಿದೆ. ಈ ಹಿಂದೆ ರಿತೇಶ್​ ಎಂಬುವವರ ಜೊತೆ ರಾಖಿ ಸಾವಂತ್ ವಿವಾಹ ನೆರವೇರಿತ್ತು. ಆದರೆ ಅದು ಮುರಿದು ಬಿತ್ತು. ಕಳೆದ ವರ್ಷ ಆದಿಲ್​ ಖಾನ್​ (Adil Khan​) ಜೊತೆ ರಾಖಿ ಸಾವಂತ್ ಅವರು ಸೀಕ್ರೆಟ್​ ಆಗಿ​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆದರೆ ಈಗ ಆ ಮದುವೆ (Rakhi Sawant Wedding) ಕೂಡ ಮುರಿದು ಬೀಳುವ ಸಾಧ್ಯತೆ ದಟ್ಟವಾಗಿದೆ. ಪತಿ ಆದಿಲ್​ ಖಾನ್​ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದಾರೆ ರಾಖಿ ಸಾವಂತ್​. ಅವರು ಕಣ್ಣೀರು ಹಾಕುತ್ತ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ.

ಪಾಪರಾಜಿಗಳು ರಾಖಿ ಸಾವಂತ್​ ಅವರ ಹಿಂದೆ ಬಿದ್ದಿದ್ದಾರೆ. ಹೋದಲ್ಲಿ ಬಂದಲ್ಲಿ ಅವರ ಸಂಸಾರದ ಗಲಾಟೆಯ ವಿಚಾರವನ್ನೇ ಕೇಳಲಾಗುತ್ತಿದೆ. ಈ ವೇಳೆ ಪತಿ ಆದಿಲ್​ ಖಾನ್​ ಬಗೆಗಿನ ಹಲವು ವಿಷಯಗಳನ್ನು ರಾಖಿ ಸಾವಂತ್​ ಬಹಿರಂಗ ಪಡಿಸಿದ್ದಾರೆ. ಇತ್ತೀಚೆಗಷ್ಟೇ ರಾಖಿ ತಾಯಿ ನಿಧನರಾದರು. ಆ ದುಃಖ ಮರೆಯುವುದಕ್ಕೂ ಮುನ್ನವೇ ಅವರ ಸಂಸಾರದ ಗಲಾಟೆ ಬೀದಿಗೆ ಬಂದಿದೆ.

ಇದನ್ನೂ ಓದಿ
Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ
Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​
Rakhi Sawant: ಫಾತಿಮಾ ಅಂತ ಹೆಸರು ಬದಲಿಸಿಕೊಂಡ ರಾಖಿ ಸಾವಂತ್​; ಆದಿಲ್​​ ಜತೆಗಿನ ಶಾದಿ ರಹಸ್ಯ ಬಹಿರಂಗ
Rakhi Sawant: ಮತ್ತೊಂದು ವಿವಾಹ ಆದ ರಾಖಿ ಸಾವಂತ್; ಆದಿಲ್ ಜತೆಗಿನ ಮದುವೆ ಫೋಟೋ ವೈರಲ್

ಇದನ್ನೂ ಓದಿ: Rakhi Sawant: ತಾಯಿ ಸತ್ತು ಎರಡೇ ದಿನಕ್ಕೆ ಮದುವೆ ಮುರಿದು ಬೀಳುತ್ತೆ ಅಂತ ರಸ್ತೆಯಲ್ಲಿ ಗಳಗಳನೆ ಅತ್ತ ರಾಖಿ ಸಾವಂತ್​

ಕಳೆದ ವರ್ಷ ರಾಖಿ ಸಾವಂತ್​ ಅವರು ಮರಾಠಿ ಬಿಗ್​ ಬಾಸ್​ ಶೋಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರ ಪತಿ ಆದಿಲ್​ ಖಾನ್​ ಬೇರೊಬ್ಬ ಯುವತಿಯ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡರು ಎಂದು ಹೇಳಲಾಗುತ್ತಿದೆ. ಆ ಯುವತಿಗೆ ಈಗ ರಾಖಿ ಸಾವಂತ್​ ಎಚ್ಚರಿಕೆ ನೀಡುತ್ತಿದ್ದಾರೆ. ಹೇಗಾದರೂ ಮಾಡಿ ತಮ್ಮ ಸಂಸಾರವನ್ನು ಉಳಿಸಿಕೊಳ್ಳಬೇಕು ಎಂದು ಅವರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ

‘ಈಗ ನಾನು ಆ ಹುಡುಗಿಯ ಹೆಸರು ಹೇಳಲ್ಲ. ಸಮಯ ಬಂದಾಗ ಎಲ್ಲ ಫೋಟೋಗಳನ್ನು ಬಹಿರಂಗಪಡಿಸುತ್ತೇನೆ. ಆಕೆಯ ಜೊತೆಗಿನ ಸಂಬಂಧದ ಕಾರಣದಿಂದಾಗಿ ನಾನು ಮದುವೆ ಬಗ್ಗೆ ಮೌನವಾಗಿರುವಂತೆ ಆದಿಲ್​ ಖಾನ್​ ಒತ್ತಾಯಿಸಿದ. ಅಲ್ಲಿಯವರೆಗೆ ನಾನು ಸೈಲೆಂಟ್​ ಆಗಿದ್ದೆ. ಮೊದಲಿಗೆ ನನ್ನ ಜೊತೆ ಮದುವೆ ಆಗಿದ್ದನ್ನೇ ಆತ ಒಪ್ಪಿಕೊಳ್ಳಲಿಲ್ಲ. ನಂತರ ಮಾಧ್ಯಮದ ಭಯದಿಂದ ಒಪ್ಪಿಕೊಂಡ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಆ ಯುವತಿಯ ಕಾರಣದಿಂದ ಆದಿಲ್​ ಖಾನ್​ ವಿಚ್ಚೇದನ ನೀಡಿದರೆ ಅದನ್ನು ತಾವು ಒಪ್ಪುವುದಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ. ‘ಬೇರೆ ಹುಡುಗಿಯರ ರೀತಿ ನಾನು ಸುಮ್ಮನೆ ಇರುವುದಿಲ್ಲ. ನೀನು ಬೆದರಿಕೆ ಹಾಕಿದರೆ ನಾನು ಅದನ್ನು ಸಹಿಸುವುದಿಲ್ಲ’ ಎಂದು ರಾಖಿ ಸಾವಂತ್​ ಅವರು ಆ ಯುವತಿಗೆ ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us