Rakhi Sawant: ತಾಯಿ ಸತ್ತು ಎರಡೇ ದಿನಕ್ಕೆ ಮದುವೆ ಮುರಿದು ಬೀಳುತ್ತೆ ಅಂತ ರಸ್ತೆಯಲ್ಲಿ ಗಳಗಳನೆ ಅತ್ತ ರಾಖಿ ಸಾವಂತ್​

Rakhi Sawant Viral Video: ‘ನನ್ನನ್ನು ಆದಿಲ್​ ಖಾನ್​ ಉಪಯೋಗಿಸಿಕೊಂಡ. ಅವನಿಗೆ ಪ್ರಚಾರ ಬೇಕಿತ್ತು. ಆದಿಲ್​ನ ಸಂದರ್ಶನ ಮಾಡಬೇಡಿ. ಅವನು ಸುಳ್ಳು ಹೇಳುತ್ತಾನೆ’ ಎಂದಿದ್ದಾರೆ ರಾಖಿ ಸಾವಂತ್​.

Rakhi Sawant: ತಾಯಿ ಸತ್ತು ಎರಡೇ ದಿನಕ್ಕೆ ಮದುವೆ ಮುರಿದು ಬೀಳುತ್ತೆ ಅಂತ ರಸ್ತೆಯಲ್ಲಿ ಗಳಗಳನೆ ಅತ್ತ ರಾಖಿ ಸಾವಂತ್​
ರಾಖಿ ಸಾವಂತ್
Follow us
ಮದನ್​ ಕುಮಾರ್​
|

Updated on: Feb 02, 2023 | 9:13 PM

ನಟಿ ರಾಖಿ ಸಾವಂತ್​ (Rakhi Sawant) ಅವರ ಜೀವನದಲ್ಲಿ ಸಾಕಷ್ಟು ಕಷ್ಟಗಳು ಎದುರಾಗುತ್ತಿವೆ. ಇತ್ತೀಚೆಗಷ್ಟೇ ಅವರ ತಾಯಿ ನಿಧನರಾದರು. ಆ ನೋವು ಇನ್ನೂ ಹಸಿಯಾಗಿರುವಾಗಲೇ ಅವರಿಗೆ ದಾಂಪತ್ಯ ಮುರಿದು ಬೀಳುವ ಭಯ ಕಾಡುತ್ತಿದೆ. ಹಾಗಾಗಿ ಅವರ ಮಧ್ಯರಸ್ತೆಯಲ್ಲಿ ನಿಂತು ಕಣ್ಣೀರು ಹಾಕಿದ್ದಾರೆ. ‘ನನ್ನ ಸಂಸಾರ ಅಪಾಯದಲ್ಲಿದೆ. ಅದನ್ನು ನಾನು ಉಳಿಸಿಕೊಳ್ಳಬೇಕು’ ಎಂದು ರಾಖಿ ಸಾವಂತ್​ ಜೋರಾಗಿ ಅತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಆದಿಲ್​ ಖಾನ್ (Adil Khan)​ ಜೊತೆ ರಾಖಿ ಸಾವಂತ್​ ಮದುವೆ (Rakhi Sawant Marriage) ಆಗಿರುವ ವಿಷಯ ಬಹಿರಂಗ ಆಗಿತ್ತು. ಆದರೆ ಈಗ ಅವರ ಸಂಸಾರದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗಿದೆ. ಎಲ್ಲರ ಎದುರು ರಾಖಿ ಸಾವಂತ್ ಕಣ್ಣೀರು ಹಾಕಿದ್ದಾರೆ. ಅವರ ವಿಡಿಯೋ ವೈರಲ್​ ಆಗಿದೆ.

ಮುಂಬೈನಲ್ಲಿ ರಾಖಿ ಸಾವಂತ್​ ಅವರು ಜಿಮ್​ನಿಂದ ಹೊರಬರುವಾಗ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ‘ನಾನು ಜೀವನದಲ್ಲಿ ತುಂಬ ವಿಚಲಿತಳಾಗಿದ್ದೇನೆ. ನಮ್ಮ ದಾಂಪತ್ಯ ಅಪಾಯದಲ್ಲಿದೆ. ಏನೂ ಅರ್ಥ ಆಗುತ್ತಿಲ್ಲ. ಈಗ ನಾನು ಏನನ್ನೂ ಹೇಳುವಂತಿಲ್ಲ. ಕಾಲ ಬಂದಾಗ ಎಲ್ಲವನ್ನೂ ವಿವರಿಸುತ್ತೇನೆ. ನಾನು ಯಾರಿಗೆ ತೊಂದರೆ ಕೊಟ್ಟಿದ್ದೇನೆ ಅಂತ ದೇವರಲ್ಲಿ ಪ್ರಶ್ನಿಸುತ್ತೇನೆ. ನನ್ನ ತಾಯಿ ನಿಧನರಾದರು. ದೇವರು ನನ್ನನ್ನು ಯಾಕೆ ಸಾಯಿಸಬಾರದು? ಮದುವೆ ಎಂದರೆ ತಮಾಷೆ ಅಲ್ಲ. ನಾನು ನನ್ನ ಸಂಸಾರ ಉಳಿಸಿಕೊಳ್ಳಬೇಕಿದೆ’ ಎಂದು ರಾಖಿ ಸಾವಂತ್​ ಅತ್ತಿದ್ದಾರೆ.

ಇದನ್ನೂ ಓದಿ
Image
Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ
Image
Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​
Image
Rakhi Sawant: ಫಾತಿಮಾ ಅಂತ ಹೆಸರು ಬದಲಿಸಿಕೊಂಡ ರಾಖಿ ಸಾವಂತ್​; ಆದಿಲ್​​ ಜತೆಗಿನ ಶಾದಿ ರಹಸ್ಯ ಬಹಿರಂಗ
Image
Rakhi Sawant: ಮತ್ತೊಂದು ವಿವಾಹ ಆದ ರಾಖಿ ಸಾವಂತ್; ಆದಿಲ್ ಜತೆಗಿನ ಮದುವೆ ಫೋಟೋ ವೈರಲ್

ಇದನ್ನೂ ಓದಿ: Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ

‘ನನ್ನನ್ನು ಆದಿಲ್​ ಉಪಯೋಗಿಸಿಕೊಂಡ. ಅವನಿಗೆ ಪ್ರಚಾರ ಬೇಕಿತ್ತು. ಆದಿಲ್​ನ ಸಂದರ್ಶನ ಮಾಡಬೇಡಿ. ಅವನು ಸುಳ್ಳು ಹೇಳುತ್ತಾನೆ. ಕುರಾನ್​ ಮೇಲೆ ಪ್ರಮಾಣ ಮಾಡಿ ಹೇಳಿದ್ದ ಆ ಹುಡುಗಿಯನ್ನು ಬ್ಲಾಕ್​ ಮಾಡುತ್ತೇನೆ ಅಂತ. ಆದರೆ ಅವನು ಬ್ಲಾಕ್​ ಮಾಡಲಿಲ್ಲ. ಈಗ ಆ ಹುಡುಗಿಯೇ ಅವನಿಗೆ ಬ್ಲಾಕ್​ ಮೇಲ್​ ಮಾಡುತ್ತಿದ್ದಾಳೆ. ಅವಳ ಬಳಿ ಕೆಟ್ಟ ಸಾಕ್ಷಿಗಳು ಇವೆ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ರಾಖಿ ಸಾವಂತ್ ಅವರು ಈ ಮೊದಲು ರಿತೇಷ್ ರಾಜ್ ಅವರನ್ನು ಮದುವೆ ಆಗಿದ್ದರು. ಇಬ್ಬರೂ ‘ಬಿಗ್ ಬಾಸ್ ಹಿಂದಿ ಸೀಸನ್ 15’ಕ್ಕೆ ಒಟ್ಟಿಗೆ ಬಂದಿದ್ದರು. ಇವರ ಸಂಬಂಧ ಮುರಿದುಬಿದ್ದಿತ್ತು. ರಿತೇಷ್ ಅವರಿಂದ ಹಿಂಸೆಗೆ ಒಳಗಾಗಿದ್ದೆ ಎಂದು ರಾಖಿ ಹೇಳಿಕೊಂಡಿದ್ದರು. ಆ ಬಳಿಕ ಆದಿಲ್​ ಖಾನ್​ ಜೊತೆ ಅವರು ಆಪ್ತತೆ ಬೆಳೆಸಿಕೊಂಡು ಮದುವೆಯಾದರು. ಈಗ ಆ ಸಂಬಂಧ ಕೂಡ ಮುರಿದು ಬೀಳುವ ಸಾಧ್ಯತೆ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.