‘ಪಠಾಣ್’ ಕಲೆಕ್ಷನ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಟ್ವೀಟ್; ಕೆಜಿಎಫ್ ವಿಚಾರದ ಬಗ್ಗೆ ಆರ್ಜಿವಿ ಉಲ್ಲೇಖ
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾಸ್ ಅಂಶಗಳು, ಹೀರೋಯಿಸಂ ಹೆಚ್ಚಿರುತ್ತದೆ. ಇದಕ್ಕಾಗಿ ಇಲ್ಲಿನ ಸಿನಿಮಾಗಳು ಗೆಲ್ಲುತ್ತವೆ ಅನ್ನೋದು ಅನೇಕರ ವಾದ. ‘ಪಠಾಣ್’ ಚಿತ್ರದಲ್ಲಿ ಸಾಕಷ್ಟು ಫೈಟಿಂಗ್ ಇದೆ. ಆದರೆ, ಇದು ಆರ್ಜಿವಿಗೆ ಇಷ್ಟವಾಗಿಲ್ಲ.
‘ಕೆಜಿಎಫ್ 2’ ಸಿನಿಮಾ (KGF Chapter 2) 2022ರಲ್ಲಿ ತೆರೆಗೆ ಬಂದು ಬಾಕ್ಸ್ ಆಫೀಸ್ನಲ್ಲಿ ಸುನಾಮಿಯನ್ನೇ ಎಬ್ಬಿಸಿತ್ತು. ವಿಶ್ವಾದ್ಯಂತ 1300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಈ ಚಿತ್ರ ಹಿಂದಿ ಒಂದರಲ್ಲೇ 430 ಕೋಟಿ ರೂ. ಬಾಚಿಕೊಂಡಿತ್ತು. ಕಳೆದ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ‘ಕೆಜಿಎಫ್ 2’ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ದಾಖಲೆಯನ್ನು ಮುರಿಯಲು ಬಾಲಿವುಡ್ ಮಂದಿಗೆ ಈವರೆಗೆ ಸಾಧ್ಯವಾಗಿರಲಿಲ್ಲ. ಆದರೆ, ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ (Pathaan Movie) ಒಂದೊಂದೇ ದಾಖಲೆಯನ್ನು ಸರಿಗಟ್ಟುತ್ತಿದೆ. ಈ ಬಗ್ಗೆ ಆರ್ಜಿವಿ ಮಾತನಾಡಿದ್ದಾರೆ.
‘ಒಟಿಟಿ ಯುಗದಲ್ಲಿ ಥಿಯೇಟರ್ ಕಲೆಕ್ಷನ್ ಮೊದಲಿನಷ್ಟು ಆಗೋದು ಇನ್ನುಮುಂದೆ ಅನುಮಾನವೇ. ಶಾರುಖ್ ಖಾನ್ ಮರೆಯಾಗುತ್ತಿರುವ ಸ್ಟಾರ್. ದಕ್ಷಿಣದ ರೀತಿ ಮಾಸ್ ಮಸಾಲ ಕಮರ್ಷಿಯಲ್ ಹಿಟ್ ಸಿನಿಮಾಗಳನ್ನು ನೀಡಲು ಬಾಲಿವುಡ್ನವರಿಗೆ ಸಾಧ್ಯವಿಲ್ಲ. ಕೆಜಿಎಫ್ 2 ದಾಖಲೆಯನ್ನು ಮುರಿಯಲು ಅವರಿಗೆ ಒಂದು ವರ್ಷ ಬೇಕಾಗಬಹುದು ಎನ್ನುವ ತಪ್ಪು ಕಲ್ಪನೆಗಳನ್ನು ಪಠಾಣ್ ಚಿತ್ರ ಮುರಿದು ಹಾಕಿದೆ’ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾಸ್ ಅಂಶಗಳು, ಹೀರೋಯಿಸಂ ಹೆಚ್ಚಿರುತ್ತದೆ. ಇದಕ್ಕಾಗಿ ಇಲ್ಲಿನ ಸಿನಿಮಾಗಳು ಗೆಲ್ಲುತ್ತವೆ ಅನ್ನೋದು ಅನೇಕರ ವಾದ. ‘ಪಠಾಣ್’ ಚಿತ್ರದಲ್ಲಿ ಸಾಕಷ್ಟು ಫೈಟಿಂಗ್ ಇದೆ. ಆದರೆ, ಇದು ಆರ್ಜಿವಿಗೆ ಇಷ್ಟವಾಗಿಲ್ಲ. ‘ಎರಡು ಸ್ಟಾರ್ಗಳು ಒಟ್ಟಿಗೆ ನಿಲ್ಲುತ್ತಾರೆ. ಒಂದೇ ಸಮಯಕ್ಕೆ ಏಟು ಕೊಡುತ್ತಾರೆ. ಈ ಸ್ಟೈಲ್ ನನಗೆ ಇಷ್ಟವಾಗಿಲ್ಲ’ ಎಂದು ಆರ್ಜಿವಿ ಹೇಳಿದ್ದಾರೆ.
ಇದನ್ನೂ ಓದಿ: ‘ಬಾಲಿವುಡ್ಗೆ ಅಪರಿಚಿತನಾಗಿದ್ದ ಯಶ್ 500 ಕೋಟಿ ರೂ. ಬಿಸ್ನೆಸ್ ಮಾಡುವಾಗ ಪಠಾಣ್ ಯಶಸ್ಸು ಯಾವ ಲೆಕ್ಕ?’ ಆರ್ಜಿವಿ
‘ಪಠಾಣ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಏಳೇ ದಿನಕ್ಕೆ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದನ್ನೂ ಆರಜಿವಿ ಟೀಕೆ ಮಾಡಿದ್ದಾರೆ. ‘ಬಾಲಿವುಡ್ನಲ್ಲಿ ಯಾರಿಗೂ ಗೊತ್ತಿಲ್ಲದ ಯಶ್ ಸಿನಿಮಾ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಾಗ ಶಾರುಖ್ ಖಾನ್ ಸಿನಿಮಾ ಅಷ್ಟೇ ಕಲೆಕ್ಷನ್ ಮಾಡೋದು ದೊಡ್ಡ ವಿಷಯ ಅಲ್ಲ’ ಎಂದು ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:37 am, Thu, 2 February 23