ಕಿಯಾರಾ-ಸಿದ್ದಾರ್ಥ್ ಬಳಿಕ ಹಸೆಮಣೆ ಏರಲು ರೆಡಿ ಆದ ರಾಕುಲ್; ನಿರ್ಮಾಪಕನ ಜೊತೆ ಮದುವೆ

| Updated By: ರಾಜೇಶ್ ದುಗ್ಗುಮನೆ

Updated on: Feb 14, 2023 | 2:41 PM

ನಟಿ ರಾಕುಲ್ ಪ್ರೀತ್​ ಸಿಂಗ್​ಗೆ ಬಾಲಿವುಡ್​ನಲ್ಲಿ ದೊಡ್ಡ ಬೇಡಿಕೆ ಇದೆ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಅನೇಕ ಸ್ಟಾರ್​ ನಟರ ಜತೆ ರಾಕುಲ್​ ತೆರೆಹಂಚಿಕೊಂಡಿದ್ದಾರೆ

ಕಿಯಾರಾ-ಸಿದ್ದಾರ್ಥ್ ಬಳಿಕ ಹಸೆಮಣೆ ಏರಲು ರೆಡಿ ಆದ ರಾಕುಲ್; ನಿರ್ಮಾಪಕನ ಜೊತೆ ಮದುವೆ
ರಾಕುಲ್-ಜಾಕಿ
Follow us on

ಬಾಲಿವುಡ್​ನಲ್ಲಿ ಸದ್ಯ ಮದುವೆಯ ಟ್ರೆಂಡ್ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಹಸೆಮಣೆ ಏರುತ್ತಿದ್ದಾರೆ. 2021ರಲ್ಲಿ ವಿಕ್ಕಿ ಕೌಶಲ್ (Vicky Kaushal) ಹಾಗೂ ಕತ್ರಿನಾ (Katrina Kaif) ಮದುವೆ ಆದರು. 2022ರಲ್ಲಿ ಆಲಿಯಾ ಭಟ್​-ರಣಬೀರ್ ಕಪೂರ್ ಮದುವೆ ಆದರು. ಈ ವರ್ಷದ ಆರಂಭದಲ್ಲೇ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಹಸೆಮಣೆ ಏರಿದ್ದಾರೆ. ಈಗ ಬಾಲಿವುಡ್​ ನಟಿ ರಾಕುಲ್ ಪ್ರೀತ್ ಸಿಂಗ್ ಹಸೆಮಣೆ ಏರೋಕೆ ರೆಡಿ ಆಗಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ನಟಿ ರಾಕುಲ್ ಪ್ರೀತ್​ ಸಿಂಗ್​ಗೆ ಬಾಲಿವುಡ್​ನಲ್ಲಿ ದೊಡ್ಡ ಬೇಡಿಕೆ ಇದೆ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಅನೇಕ ಸ್ಟಾರ್​ ನಟರ ಜತೆ ರಾಕುಲ್​ ತೆರೆಹಂಚಿಕೊಂಡಿದ್ದಾರೆ. ಸದ್ಯ, ರಾಕುಲ್​ ವೈಯಕ್ತಿಕ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ಜಾಕಿ ಭಗ್ನಾನಿ ಜತೆ ರಾಕುಲ್ ಡೇಟಿಂಗ್​ ನಡೆಸುತ್ತಿದ್ದಾರೆ. ಇಬ್ಬರೂ ಅನೇಕ ಬಾರಿ ಸುತ್ತಾಟ ನಡೆಸುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಈಗ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ.

ಫೆಬ್ರವರಿ 7ರಂದು ಕಿಯಾರಾ ಹಾಗೂ ಸಿದ್ದಾರ್ಥ್ ಮದುವೆ ಆದರು. ಮುಂಬೈನಲ್ಲಿ ಇವರು ಭಾನುವಾರ (ಫೆಬ್ರವರಿ 12) ರಿಸೆಪ್ಷನ್ ಆಯೋಜನೆ ಮಾಡಿದ್ದರು. ಇದಕ್ಕೆ ರಾಕುಲ್ ಹಾಗೂ ಜಾಕಿ ಒಟ್ಟಾಗಿ ಆಗಮಿಸಿ ಪೋಸ್ ನೀಡಿದ್ದರು. ಮೊದಲೆಲ್ಲ ಕದ್ದುಮುಚ್ಚಿ ಓಡಾಡುತ್ತಿದ್ದ ಜೋಡಿ, ಈಗ ಯಾವುದೇ ಅಂಜಿಕೆ ಇಲ್ಲದೆ ಓಪನ್ ಆಗಿ ಸುತ್ತಾಟ ನಡೆಸುತ್ತಿದ್ದಾರೆ.

ಮೇ ತಿಂಗಳಲ್ಲಿ ಈ ಜೋಡಿ ಮದುವೆ ಆಗಲಿದೆ ಎನ್ನಲಾಗುತ್ತಿದೆ. ಸದ್ಯ ಈ ವಿಚಾರದಲ್ಲಿ ಈ ಜೋಡಿ ಸ್ಪಷ್ಟನೆ ನೀಡುವ ಕೆಲಸ ಮಾಡಿಲ್ಲ. ಈ ಮೊದಲು ಕಿಯಾರಾ ಹಾಗೂ ಸಿದ್ದಾರ್ಥ್ ಕೂಡ ಮದುವೆ ವಿಚಾರದಲ್ಲಿ ಸೈಲೆಂಟ್ ಆಗಿದ್ದರು. ನಂತರ ಮದುವೆ ಆಗಿ ಸರ್​ಪ್ರೈಸ್ ನೀಡಿದ್ದರು. ರಾಕುಲ್ ಕೂಡ ಹಾಗೆಯೇ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರಾಕುಲ್ ಪ್ರೀತ್ ಸಿಂಗ್​ ಕ್ಯೂಟ್​ನೆಸ್​ಗೆ ಫಿದಾ ಆದ ಅಭಿಮಾನಿಗಳು..!

ರಾಕುಲ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಚತ್ರಿವಾಲಿ’ ಸಿನಿಮಾದಲ್ಲಿ. ಈ ಚಿತ್ರಕ್ಕೆ ತೇಜಸ್ ಪ್ರಭಾ ವಿಜಯ್ ನಿರ್ದೇಶನ ಮಾಡಿದ್ದರು. ಬಾಕ್ಸ್ ಆಫೀಸ್​ನಲ್ಲಿ ಹಿಟ್ ಆಗಲು ಈ ಸಿನಿಮಾ ವಿಫಲ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ