Ram Charan: ಅಕ್ಷಯ್​ ಕುಮಾರ್​ ಸಿನಿಮಾದ ಹಾಡಿಗೆ ರಾಮ್​ ಚರಣ್​ ಬಿಂದಾಸ್​ ಡ್ಯಾನ್ಸ್​; ವಿಡಿಯೋ ವೈರಲ್​

Main Khiladi Tu Anari: ‘ಸೆಲ್ಫಿ’ ಚಿತ್ರದ ಟ್ರೇಲರ್​ ಗಮನ ಸೆಳೆದಿದೆ. ‘ಮೈ ಕಿಲಾಡಿ ತು ಅನಾಡಿ..’ ಹಾಡಿನಿಂದ ಈ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಕ್ಕಿದೆ. ಇದೇ ಹಾಡಿಗೆ ರಾಮ್​ ಚರಣ್​ ರೀಲ್ಸ್​ ಮಾಡಿದ್ದಾರೆ.

Ram Charan: ಅಕ್ಷಯ್​ ಕುಮಾರ್​ ಸಿನಿಮಾದ ಹಾಡಿಗೆ ರಾಮ್​ ಚರಣ್​ ಬಿಂದಾಸ್​ ಡ್ಯಾನ್ಸ್​; ವಿಡಿಯೋ ವೈರಲ್​
ರಾಮ್ ಚರಣ್, ಗಣೇಶ್ ಆಚಾರ್ಯ, ಅಕ್ಷಯ್ ಕುಮಾರ್

Updated on: Feb 15, 2023 | 2:04 PM

ನಟ ರಾಮ್​ ಚರಣ್​ (Ram Charan) ಅವರು ‘ಆರ್​ಆರ್​ಆರ್​’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಈಗ ಅವರು ಅಕ್ಷಯ್​ ಕುಮಾರ್​ (Akshay Kumar) ನಟನೆಯ ಹೊಸ ಸಿನಿಮಾದ ಪ್ರಚಾರಕ್ಕೆ ಸಾಥ್​ ನೀಡಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಗಣೇಶ್​ ಆಚಾರ್ಯ ಜೊತೆ ಸೇರಿ ‘ಸೆಲ್ಫಿ’ (Selfiee Movie) ಸಿನಿಮಾದ ‘ಮೈ ಕಿಲಾಡಿ ತು ಅನಾಡಿ..’ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಸ್ವತಃ ಅಕ್ಷಯ್​ ಕುಮಾರ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಗಣೇಶ್​ ಆಚಾರ್ಯ ಮತ್ತು ರಾಮ್​ ಚರಣ್​ ಅವರು ಒಟ್ಟಿಗೆ ಡ್ಯಾನ್ಸ್​ ಮಾಡಿದ್ದು ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ.

ಅಕ್ಷಯ್​ ಕುಮಾರ್​ ಅವರ ‘ಸೆಲ್ಫಿ’ ಸಿನಿಮಾ ಫೆಬ್ರವರಿ 24ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಇಮ್ರಾನ್​ ಹಷ್ಮಿ ಕೂಡ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್​ನಲ್ಲಿ ‘ಮೈ ಕಿಲಾಡಿ ತು ಅನಾಡಿ..’ ಹಾಡು ಮೂಡಿಬಂದಿದೆ. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಹೆಜ್ಜೆ ಹಾಕಿ ರೀಲ್ಸ್ ಮಾಡಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆ ಆಗಿರುವುದು ಗಣೇಶ್​ ಆಚಾರ್ಯ ಮತ್ತು ರಾಮ್​ ಚರಣ್​.

ಇದನ್ನೂ ಓದಿ
Akshay Kumar: ಸತತ ಸೋಲು ಕಂಡರೂ ಅಕ್ಷಯ್​ ಕುಮಾರ್​ ನಂ.1; ಇದು ಯಾವ ಲೆಕ್ಕಾಚಾರ?
Cuttputlli: ಒಟಿಟಿಯಲ್ಲಿ ಅಕ್ಷಯ್​ ಕುಮಾರ್​ ಚಿತ್ರಕ್ಕೆ ಗೆಲುವು; ಪೂರ್ತಿ ಬದಲಾಗುತ್ತಾ ಸ್ಟಾರ್​ ನಟನ ಭವಿಷ್ಯದ ಪ್ಲ್ಯಾನ್​?
Akshay Kumar: ವರದಕ್ಷಿಣೆ ಪಿಡುಗಿಗೆ ಅಕ್ಷಯ್​ ಕುಮಾರ್ ಪ್ರೋತ್ಸಾಹ? ಸರ್ಕಾರಿ ಜಾಹೀರಾತಿನಲ್ಲಿ ದೊಡ್ಡ ಎಡವಟ್ಟು
Cuttputlli: ತಪ್ಪು ತಿದ್ದಿಕೊಂಡ ಅಕ್ಷಯ್​ ಕುಮಾರ್​; ಒಂದು ನಿರ್ಧಾರದಿಂದ ಆಯ್ತು ನೂರಾರು ಕೋಟಿ ರೂ. ಲಾಭ

ಇದನ್ನೂ ಓದಿ: Ram Charan: ‘ಆರ್​ಆರ್​ಆರ್​’ ಗೆದ್ದ ಬಳಿಕ ರಾಮ್​ ಚರಣ್​ ಸಖತ್​ ಬ್ಯುಸಿ; ಕೈಯಲ್ಲಿವೆ ಬಹುನಿರೀಕ್ಷಿತ​ ಚಿತ್ರಗಳು

ವಿಶಾಖಪಟ್ಟಣದಲ್ಲಿ ರಾಮ್​ ಚರಣ್​ ಅವರ 15ನೇ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ಆ ಚಿತ್ರದ ಹಾಡಿಗೆ ಗಣೇಶ್​ ಆಚಾರ್ಯ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಅದೇ ಗ್ಯಾಪ್​ನಲ್ಲಿ ಅವರಿಬ್ಬರು ‘ಮೈ ಕಿಲಾಡಿ ತು ಅನಾಡಿ..’ ಹಾಡಿಗೆ ರೀಲ್ಸ್​ ಮಾಡಿ ಗಮನ ಸೆಳೆದಿದ್ದಾರೆ. ಅಕ್ಷಯ್​ ಕುಮಾರ್​ ಅಭಿಮಾನಿಗಳು ಇದನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Oscar 2023: ‘ಆಸ್ಕರ್​ ಪ್ರಶಸ್ತಿ ನನಗೆ ಮುಟ್ಟಲು ಕೊಡಿ ಪ್ಲೀಸ್’: ರಾಮ್​ ಚರಣ್​ ಬಳಿ ಶಾರುಖ್​ ಖಾನ್​ ಮನವಿ​

1994ರಲ್ಲಿ ‘ಮೇ ಕಿಲಾಡಿ ತು ಅನಾಡಿ’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಟೈಟಲ್​ ಟ್ರ್ಯಾಕ್​ಗೆ ಅನು ಮಲಿಕ್​ ಸಂಗೀತ ನೀಡಿದ್ದರು. ಅದೇ ಹಾಡನ್ನು ಈಗ ಸಂಗೀತ ನಿರ್ದೇಶಕ ತನಿಷ್ಕ್​ ಬಾಗ್ಚಿ ಅವರು ರೀ-ಕ್ರಿಯೇಟ್​ ಮಾಡಿದ್ದಾರೆ. ಈ ಹೊಸ ವರ್ಷನ್​ನಲ್ಲಿ ಅಕ್ಷಯ್​ ಕುಮಾರ್​ ಮತ್ತು ಇಮ್ರಾನ್​ ಹಷ್ಮಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಹಾಡು ತುಂಬ ಫೇಮಸ್​ ಆಗಿದೆ. ಟೈಗರ್​ ಶ್ರಾಫ್​, ಸಲ್ಮಾನ್​ ಖಾನ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ರೀಲ್ಸ್​ ಮಾಡಿದ್ದಾರೆ.

2022ರಲ್ಲಿ ಅಕ್ಷಯ್​ ಕುಮಾರ್​ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. 2023ರಲ್ಲಿ ರಿಲೀಸ್​ ಆಗುತ್ತಿರುವ ಅವರ ಮೊದಲ ಸಿನಿಮಾ ‘ಸೆಲ್ಫಿ’. ಈ ಮೂಲಕ ಅವರು ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಇದರ ಟ್ರೇಲರ್​ ಗಮನ ಸೆಳೆದಿದೆ. ‘ಮೈ ಕಿಲಾಡಿ ತು ಅನಾಡಿ..’ ಹಾಡಿನಿಂದ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:04 pm, Wed, 15 February 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us