ಅಡ್ವಾನ್ಸ್ ಬುಕಿಂಗ್​​ನಿಂದ 20 ಕೋಟಿ ರೂಪಾಯಿ ಗಳಿಸಿದ ರಾಮಾಯಾಣ

ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಬಿಡುಗಡೆಗೆ ಹತ್ತು ದಿನಗಳು ಬಾಕಿ ಇರುವಾಗಲೇ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಇಪ್ಪತ್ತು ಕೋಟಿ ರೂಪಾಯಿ ಗಳಿಕೆ ದಾಟಿದೆ. ಕನ್ನಡ ಮತ್ತು ತೆಲುಗು ಆವೃತ್ತಿಗಳಿಗೆ ಭರ್ಜರಿ ಬೇಡಿಕೆ ವ್ಯಕ್ತವಾಗಿದ್ದು, ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ.

ಅಡ್ವಾನ್ಸ್ ಬುಕಿಂಗ್​​ನಿಂದ 20 ಕೋಟಿ ರೂಪಾಯಿ ಗಳಿಸಿದ ರಾಮಾಯಾಣ
ರಾಮಾಯಣ ಸಿನಿಮಾ
Edited By:

Updated on: Oct 26, 2026 | 11:05 AM

ಬಾಲಿವುಡ್‌ನ ಬಹುನಿರೀಕ್ಷಿತ ಹಾಗೂ ಅತ್ಯಂತ ವೆಚ್ಚದ ಕಥೆಯಾದ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ‘ ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ರಣಬೀರ್ ಕಪೂರ್ ರಾಮನಾಗಿ ಹಾಗೂ ನಟ ಯಶ್ ರಾವಣನಾಗಿ ಕಣಕ್ಕಿಳಿಯುತ್ತಿರುವ ಈ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಭರ್ಜರಿಯಾಗಿ ಸಾಗಿದ್ದು, ತೆರೆಕಾಣಲು ಇನ್ನೂ ಹತ್ತು ದಿನಗಳು ಬಾಕಿ ಇರುವಾಗಲೇ ಜಾಗತಿಕ ಮಟ್ಟದಲ್ಲಿ ಬರೋಬ್ಬರಿ ಇಪ್ಪತ್ತು ಕೋಟಿ ರೂಪಾಯಿಗಳ ಕಲೆಕ್ಷನ್ ದಾಟಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

ದೇಶಾದ್ಯಂತ ರಾಮಾಯಣ ಚಿತ್ರದ ಪ್ರಿ-ಸೇಲ್ಸ್ ಆರಂಭವಾದ ಕೆಲವೇ ದಿನಗಳಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಭಾರತದ ಮಾರುಕಟ್ಟೆಯೊಂದರಲ್ಲೇ ಹತ್ತು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಮುಂಗಡ ಬುಕಿಂಗ್ ಆಗಿದ್ದು, ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಹಿಂದಿ ಭಾಷೆಯ ಶೋಗಳು ಮುಂಚೂಣಿಯಲ್ಲಿದ್ದರೂ, ಪ್ರಾದೇಶಿಕ ಭಾಷೆಗಳಾದ ಕನ್ನಡ ಹಾಗೂ ತೆಲುಗು ಆವೃತ್ತಿಗಳ ಟಿಕೆಟ್ ಮಾರಾಟ ಕೂಡ ಈಗ ಗರಿಗೆದರಿದೆ.

ಕನ್ನಡ ಆವೃತ್ತಿಯು ಈಗಾಗಲೇ ಸುಮಾರು ನೂರು ಸ್ಕ್ರೀನ್‌ಗಳಲ್ಲಿ ಮುಕ್ತಗೊಂಡಿದ್ದು, ಒಂದು ಕೋಟಿ ರೂಪಾಯಿಗಳ ಗಡಿ ದಾಟಿದೆ. ಕೆಲವು ಪ್ರಮುಖ ಕೇಂದ್ರಗಳಲ್ಲಿ ಬೆಳಗಿನ ಶೋಗಳಿಗೆ ಶೇಕಡಾ ಎಂಭತ್ತರಷ್ಟು ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ. ಕನ್ನಡದಲ್ಲೂ ಕೆಲವು ಶೋಗಳು ಹೌಸ್​ಫುಲ್ ಆಗುತ್ತಿವೆ.

ವಿದೇಶಗಳಲ್ಲೂ ಸಹ ರಾಮಾಯಣ ಸಿನಿಮಾದ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉತ್ತರ ಅಮೆರಿಕದಲ್ಲಿ ಬಿಡುಗಡೆಗೂ ಮುನ್ನವೇ ಅಂದರೆ ನವೆಂಬರ್ ನಾಲ್ಕರಂದು ಪೇಯ್ಡ್ ಪ್ರಿವ್ಯೂ ಪ್ರದರ್ಶನಗಳು ನಡೆಯಲಿದ್ದು, ಅಲ್ಲಿಯೂ ಲಕ್ಷಾಂತರ ಡಾಲರ್ ಮೌಲ್ಯದ ಟಿಕೆಟ್ ಮಾರಾಟವಾಗಿವೆ. ಸಾಗರೋತ್ತರ ಮಾರುಕಟ್ಟೆಯಿಂದಲೇ ಕೋಟ್ಯಂತರ ರೂಪಾಯಿ ಮುಂಗಡ ಕಲೆಕ್ಷನ್ ಹರಿದುಬರುತ್ತಿದ್ದು, ಚಿತ್ರದ ಒಟ್ಟು ಬಿಸಿನೆಸ್ ಗಗನಕ್ಕೇರುತ್ತಿದೆ.

ಇದನ್ನೂ ಓದಿ: ವಿಶೇಷ ಶೋನಲ್ಲಿ ಭಾಗಿಯಾದ ‘ರಾಮಾಯಣ’ ಟೀಂ; ಇಲ್ಲಿದೆ ವಿವರ

ಈ ಮಹತ್ವಾಕಾಂಕ್ಷೆಯ ಚಿತ್ರವು ಎರಡು ಭಾಗಗಳಲ್ಲಿ ವಿಶ್ವದಾದ್ಯಂತ ನವೆಂಬರ್ ಐದರಂದು ಅದ್ಧೂರಿಯಾಗಿ ತೆರೆಕಾಣಲಿದೆ. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಹಾಗೂ ಸನ್ನಿ ಡಿಯೋಲ್ ಸೇರಿದಂತೆ ದಿಗ್ಗಜ ನಟರ ತಾರಾಗಣವಿರುವ ಈ ಸಿನಿಮಾಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಮುಂಗಡ ಬುಕಿಂಗ್‌ನ ಈ ವೇಗ ನೋಡಿದರೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ದಾಖಲೆಗಳು ಉಡೀಸ್ ಆಗುವುದು ಖಚಿತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us