AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಶೋನಲ್ಲಿ ಭಾಗಿಯಾದ ‘ರಾಮಾಯಣ’ ಟೀಂ; ಇಲ್ಲಿದೆ ವಿವರ

'ರಾಮಾಯಣ' ಸಿನಿಮಾದಲ್ಲಿ ಸೀತೆಯಾಗಿ ನಟಿಸಿರುವ ಸಾಯಿ ಪಲ್ಲವಿ, ಕೆಬಿಸಿ ಶೋನಲ್ಲಿ ತಮ್ಮ ಅಭಿನಯದ ಅನುಭವ ಹಂಚಿಕೊಂಡಿದ್ದಾರೆ. ಪಾತ್ರವನ್ನು ಒಪ್ಪಿಕೊಳ್ಳುವ ಮುನ್ನ ಸೀತಾ ಮಾತೆಗೆ ಪ್ರಾರ್ಥನೆ ಮಾಡಿದ್ದಾಗಿ ತಿಳಿಸಿದ ಅವರು, ಈ ಪವಿತ್ರ ಪಾತ್ರ ತಮಗೆ ಉತ್ತಮ ಜ್ಞಾನ ಹಾಗೂ ವಿಶೇಷ ಅನುಭವ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವಿಶೇಷ ಶೋನಲ್ಲಿ ಭಾಗಿಯಾದ ‘ರಾಮಾಯಣ’ ಟೀಂ; ಇಲ್ಲಿದೆ ವಿವರ
ರಾಮಾಯಣ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 26, 2026 | 8:01 AM

Share

ಮುಖ್ಯಾಂಶಗಳು

  • ‘ರಾಮಾಯಣ' ಕಥೆಯಲ್ಲಿ ಸೀತೆಯಾದ ಸಾಯಿ ಪಲ್ಲವಿ
  • ಸೀತಾ ಮಾತೆಗೆ ಪ್ರಾರ್ಥಿಸಿ ಶೂಟಿಂಗ್ ಆರಂಭ
  • ಕೆಬಿಸಿ ವೇದಿಕೆಯಲ್ಲಿ ಅಮಿತಾಬ್ ಬಾಲ್ಯದ ದೀಪಾವಳಿ ನೆನಪು

ನಿರೀಕ್ಷಿತ ‘ರಾಮಾಯಣ‘ ಸಿನಿಮಾದ ತಾರಾಗಣವು ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮ ಹೆಚ್ಚಿಸಿದೆ. ಅಮಿತಾಬ್ ಭಚ್ಚನ್ ನಡೆಸಿಕೊಡುವ ಈ ವೇದಿಕೆಯಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರವಿ ದುಬೆ ತಮ್ಮ ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಸೀತಾ ಮಾತೆಯ ಪಾತ್ರಕ್ಕಾಗಿ ತಾವು ಮಾಡಿದ ತಯಾರಿ ಹಾಗೂ ಪ್ರಾರ್ಥನೆಯ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ.

ಕೆಬಿಸಿ ಶೋನಲ್ಲಿ ಅಮಿತಾಭ್ ಬಚ್ಚನ್ ಅವರು ಪ್ರತಿಯೊಬ್ಬ ನಟರಿಗೂ ಈ ಮಹಾಕಾವ್ಯದ ಪಾತ್ರಗಳಿಗೆ ಆಯ್ಕೆಯಾದಾಗ ಉಂಟಾದ ಅನುಭವದ ಬಗ್ಗೆ ಕೇಳಿದರು. ಈ ವೇಳೆ ಮಾತನಾಡಿದ ಸಾಯಿ ಪಲ್ಲವಿ, ತಾವೇನು ಲೆಕ್ಕಾಚಾರ ಹಾಕಿ ಈ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದರು. ಪ್ರತಿಯೊಂದು ಪಾತ್ರ ಮಾಡುವಾಗಲೂ ಅದಕ್ಕೆ ನನ್ನ ಕೊಡುಗೆ ಏನು ಎಂದು ಯೋಚಿಸುತ್ತಿದ್ದೆ. ಆದರೆ ಸೀತಾ ಮಾತೆಯ ಪಾತ್ರ ನನಗೆ ಹೊಸ ಜ್ಞಾನವನ್ನು ನೀಡುತ್ತದೆ ಎಂದು ಭಾವಿಸಿದೆ ಎಂದರು.

ಈ ಸೀತಾ ಮಾತೆಯ ಪಾತ್ರ ಮಾಡುವಾಗ ಸಾಯಿ ಪಲ್ಲವಿ ಅವರು ಯಾವುದೇ ಮುನ್ನೆಚ್ಚರಿಕೆ ಅಥವಾ ಯೋಚನೆ ಇಟ್ಟುಕೊಳ್ಳಲಿಲ್ಲ. ಅವರು ನೇರವಾಗಿ ಸೀತಾ ಮಾತೆಗೆ ಮನಸಾರೆ ಪ್ರಾರ್ಥನೆ ಸಲ್ಲಿಸಿ ಚಿತ್ರೀಕರಣದಲ್ಲಿ ಭಾಗವಹಿಸಿದರು. ಪಾತ್ರದ ಪವಿತ್ರತೆ ಕಾಪಾಡಿಕೊಳ್ಳಲು ಈ ರೀತಿ ಪ್ರಾರ್ಥಿಸಿ ಮುನ್ನಡೆದೆ ಎಂದು ಸಾಯಿ ಪಲ್ಲವಿ ಹೇಳಿಕೊಂಡರು. ಸಾಯಿ ಪಲ್ಲವಿ ಅವರ ಈ ಮಾತುಗಳಿಗೆ ಬಿಗ್ ಬಿ ಹಾಗೂ ಪ್ರೇಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು.

ಇದೇ ಶೋನಲ್ಲಿ ರಣಬೀರ್ ಕಪೂರ್ ಅವರು ಅಮಿತಾ ಬಚ್ಚನ್ ಅವರಿಗೆ ಬಾಲ್ಯದ ದೀಪಾವಳಿ ನೆನಪುಗಳನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಬಿಗ್ ಬಿ, ಪಕ್ಕದ ಮನೆಯವರಿಗಿಂತ ನಮ್ಮ ಮನೆಯ ಪಟಾಕಿ ಹೆಚ್ಚು ಶಬ್ದ ಮಾಡಬೇಕು ಎಂಬ ಸ್ಪರ್ಧೆ ಇರುತ್ತಿತ್ತು ಎಂದು ನೆನಪಿಸಿಕೊಂಡರು. ಈ ತಮಾಷೆಯ ಮಾತನ್ನು ಕೇಳಿ ರಣಬೀರ್, ಸಾಯಿ ಪಲ್ಲವಿ ಹಾಗೂ ರವಿ ದುಬೆ ಜೋರಾಗಿ ನಕ್ಕರು. ಈ ದೀಪಾವಳಿ ವಿಶೇಷ ಸಂಚಿಕೆಯು ಅಕ್ಟೋಬರ್ 29 ಮತ್ತು 30 ರಂದು ಪ್ರಸಾರವಾಗಲಿದೆ.

ಇದನ್ನೂ ಓದಿ: ‘ರಾಮಾಯಣ 2’ ರಿಲೀಸ್ ಮುಂದಕ್ಕೆ ಹೋಗುವ ವಿಷಯ ಮೊದಲೇ ಲೀಕ್ ಮಾಡಿದ್ದು ರಣಬೀರ್?

ನಿರಂಜನ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ನಟ ಯಶ್ ರಾವಣನ ಪಾತ್ರದಲ್ಲಿದ್ದರೆ, ರವಿ ದುಬೆ ಲಕ್ಷ್ಮಣನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರುಣ್ ಗೋವಿಲ್ ಹಾಗೂ ಲಾರಾ ದತ್ತಾ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
ಕುಡಿದ ಮತ್ತಿನಲ್ಲಿ ಆ್ಯಂಬುಲೆನ್ಸ್ ಓಡಿಸುವ ಚಾಲಕ
ಕುಡಿದ ಮತ್ತಿನಲ್ಲಿ ಆ್ಯಂಬುಲೆನ್ಸ್ ಓಡಿಸುವ ಚಾಲಕ
ಪಿಎಸ್ಐ ವಿದ್ಯಾಶ್ರೀ, ಕಾನ್ಸ್‌ಟೇಬಲ್ ಪ್ರವೀಣ್ ಅಮಾನತು
ಪಿಎಸ್ಐ ವಿದ್ಯಾಶ್ರೀ, ಕಾನ್ಸ್‌ಟೇಬಲ್ ಪ್ರವೀಣ್ ಅಮಾನತು
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ