‘ರಾಮಾಯಣ’ದಿಂದ ಸಣ್ಣ ಸಿನಿಮಾಕ್ಕೆ ಹೊಡೆತ, ಚಿತ್ರಮಂದಿರದ ವಿರುದ್ಧ ಎಫ್​​ಐಆರ್​​ಗೆ ಒತ್ತಾಯ

‘ರಾಮಾಯಣ’ ಸಿನಿಮಾದ ಕಾರಣಕ್ಕೆ ಹಲವು ಸಿನಿಮಾಗಳು ಪಕ್ಕಕ್ಕೆ ಸರಿದವೆ. ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಮುಂಚೆ ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಒಳ್ಳೆ ಪ್ರದರ್ಶನ ಕಾಣುತ್ತಿದ್ದವು. ‘ರಾಮಾಯಣ’ ಸಿನಿಮಾ ರಿಲೀಸ್ ಬಳಿಕ ಆ ಸಿನಿಮಾಗಳು ಸಹ ಪಕ್ಕಕ್ಕೆ ತಳ್ಳಲ್ಪಟ್ಟವು. ಅವುಗಳಲ್ಲಿ ಒಂದು ಬಹಳ ಸಣ್ಣ ಸಿನಿಮಾ ‘ಪೈರ್’.

‘ರಾಮಾಯಣ’ದಿಂದ ಸಣ್ಣ ಸಿನಿಮಾಕ್ಕೆ ಹೊಡೆತ, ಚಿತ್ರಮಂದಿರದ ವಿರುದ್ಧ ಎಫ್​​ಐಆರ್​​ಗೆ ಒತ್ತಾಯ
Ramayana Pyre

Updated on: Nov 12, 2026 | 12:23 PM

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾದಿಂದ ಸಣ್ಣ ಸಿನಿಮಾಕ್ಕೆ ಸಮಸ್ಯೆ
  • ‘ರಾಮಾಯಣ’ದಿಂದ ಚಿತ್ರಮಂದಿರ ಕಳೆದುಕೊಂಡ ‘ಪೈರ್’ ಸಿನಿಮಾ
  • ‘ಪೈರ್’ ಸಿನಿಮಾ ಪರವಾಗಿ ಸರ್ಕಾರಕ್ಕೆ ಪತ್ರ

‘ರಾಮಾಯಣ’ ಸಿನಿಮಾ ವಿಶ್ವದಾದ್ಯಂತ ಭಾರಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಭಾರತದಲ್ಲೂ ಸಹ ಅಭೂತಪೂರ್ವ ಬಿಡುಗಡೆಯನ್ನು ಕಂಡಿದ್ದ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಕೇವಲ ಒಂದೇ ವಾರದಲ್ಲಿ 1000 ಕೋಟಿ ಗಳಿಕೆಯ ಗಡಿ ತಲುಪಿದೆ. ‘ರಾಮಾಯಣ’ ಸಿನಿಮಾದ ಕಾರಣಕ್ಕೆ ಹಲವು ಸಿನಿಮಾಗಳು ಪಕ್ಕಕ್ಕೆ ಸರಿದವೆ. ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಮುಂಚೆ ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಒಳ್ಳೆ ಪ್ರದರ್ಶನ ಕಾಣುತ್ತಿದ್ದವು. ‘ರಾಮಾಯಣ’ ಸಿನಿಮಾ ರಿಲೀಸ್ ಬಳಿಕ ಆ ಸಿನಿಮಾಗಳು ಸಹ ಪಕ್ಕಕ್ಕೆ ತಳ್ಳಲ್ಪಟ್ಟವು. ಅವುಗಳಲ್ಲಿ ಒಂದು ಬಹಳ ಸಣ್ಣ ಸಿನಿಮಾ ‘ಪೈರ್’.

ವಿನೋದ್ ಕಾಪ್ರಿ ಅವರ ಹೊಸ ಚಲನಚಿತ್ರವಾದ ‘ಪೈರ್’ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಸಣ್ಣ ಸಿನಿಮಾ ಆದರೂ ಸಹ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಗಳಿಸುತ್ತಿತ್ತು. ಆದರೆ ‘ರಾಮಾಯಣ’ದ ಕಾರಣಕ್ಕೆ ಈಗ ಚಿತ್ರಮಂದಿರಗಳಿಂದ ಎತ್ತಂಗಡಿ ಆಗಿದೆ. ‘ರಾಮಾಯಣ’ ಬಿಡುಗಡೆಯಾದ ಬಳಿಕ ತನ್ನ ಚಿತ್ರದ ಸ್ಕ್ರೀನ್ ಸಂಖ್ಯೆ ಶೇ 75 ರಷ್ಟು ಕಡಿಮೆಯಾಗಿದೆ ಎಂದು ನಿರ್ದೇಶಕರು ಆರೋಪಿಸಿದ್ದಾರೆ. ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದ ಕಾರಣ, ತಮ್ಮ ಚಿತ್ರವನ್ನು ಮತ್ತೆ ಪ್ರದರ್ಶಿಸಲು ಅವಕಾಶ ನೀಡುವಂತೆ ಅವರು ಸಿನಿಮಾ ಮಾಲೀಕರಿಗೆ ಮನವಿ ಮಾಡಿದ್ದರು.

Loading...

ಈಗ, ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ (AICWA) ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ‘ಪೈರ್’ ಸಿನಿಮಾ ಪರವಾಗಿ ಪತ್ರ ಬರೆಯುವ ಮೂಲಕ ಚಿತ್ರತಂಡದ ಬೆಂಬಲಕ್ಕೆ ನಿಂತಿದೆ. ಅಲ್ಲದೆ, ಸ್ಕ್ರೀನ್ ಸಂಖ್ಯೆಯಲ್ಲಿನ ಕಡಿತದ ಕುರಿತು ತನಿಖೆಗೆ ಆಗ್ರಹಿಸಿ ಹಾಗೂ ವಿತರಣಾ ವ್ಯವಸ್ಥೆಯನ್ನು ಬದಲಾಯಿಸುವಂತೆ ಒತ್ತಾಯಿಸಿದೆ.

ಇದನ್ನೂ ಓದಿ:ಒಂದು ವಾರಕ್ಕೆ ‘ರಾಮಾಯಣ’ ಗಳಿಸಿದ್ದೆಷ್ಟು? ಹೊಸ ಇತಿಹಾಸ ಬರೆದ ಯಶ್ ಸಿನಿಮಾ

ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಶ್ಯಾಮ್‌ಲಾಲ್ ಗುಪ್ತಾ ಅವರು ಪತ್ರೆ ಬರೆದಿದ್ದು, ‘ಕೇವಲ 2.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಿನೋದ್ ಕಾಪ್ರಿ ಅವರ ‘ಪೈರ್’ ಚಿತ್ರವು 80 ಸ್ಕ್ರೀನ್‌ಗಳಿಂದ ಸುಮಾರು 400 ಸ್ಕ್ರೀನ್‌ಗಳಿಗೆ ಏರಿಕೆಯಾಗಿತ್ತು, ಆದರೆ ‘ರಾಮಾಯಣ’ ಬಿಡುಗಡೆಯಾದ ನಂತರ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ ಸಹ, ಸ್ಕ್ರೀನ್ ಸಂಖ್ಯೆಯನ್ನು 100ಕ್ಕಿಂತ ಕಡಿಮೆ ಮಾಡಲಾಗಿದೆ ಎಂದಿದ್ದಾರೆ.

ಪತ್ರದಲ್ಲಿ ಕೆಲವು ಬೇಡಿಕೆಗಳನ್ನು ಸಹ ಅವರು ಇರಿಸಿದ್ದು, ‘ಕೇಂದ್ರ ಸರ್ಕಾರದಿಂದ ಭಾರತೀಯ ಚಿತ್ರರಂಗಕ್ಕಾಗಿ ನ್ಯಾಯಯುತ ಪರದೆ ಹಂಚಿಕೆ ನೀತಿ’ ಮತ್ತು ‘ಸ್ವತಂತ್ರ ಹಾಗೂ ಸಣ್ಣ ಬಜೆಟ್ ಚಿತ್ರಗಳನ್ನು ರಕ್ಷಿಸಲು ಕುಂದುಕೊರತೆ ನಿವಾರಣಾ ವ್ಯವಸ್ಥೆ’ ಮಾಡುವಂತೆ ಕೋರಿದೆ. ನಿರ್ದಿಷ್ಟವಾಗಿ ‘ಪೈರ್’ ಕುರಿತು ಮಾತನಾಡುತ್ತಾ, ಸಕಾರಾತ್ಮಕ ಪ್ರೇಕ್ಷಕರ ಪ್ರತಿಕ್ರಿಯೆ ಇದ್ದರೂ ‘ಪೈರ್’ ಚಿತ್ರದ ಸ್ಕ್ರೀನ್‌ಗಳನ್ನು ಸುಮಾರು 400 ರಿಂದ 100 ಕ್ಕಿಂತ ಕಡಿಮೆ ಮಾಡಿದ್ದು ಯಾಕೆ ಎಂಬುದರ ಕುರಿತು ‘ನಿಷ್ಪಕ್ಷಪಾತ ತನಿಖೆ’ ಮಾಡುವಂತೆ ಹಾಗೂ ಉದ್ದೇಶಪೂರ್ವಕವಾಗಿ ‘ಪೈರ್’ ಸಿನಿಮಾವನ್ನು ತೆಗೆದ ಚಿತ್ರಮಂದಿರಗಳ ವಿರುದ್ಧ ಎಫ್​​ಐಆರ್ ದಾಖಲಿಸುವಂತೆ ಒತ್ತಾಯಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us