AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ಕ್ಕೆ ಆಕ್ಷೇಪ, ಬಾಯ್​​ಕಾಟ್ ಮಾಡುವಂತೆ ಹಿಂದೂ ಸಂಘಟನೆ ಕರೆ

Ramayana movie: ‘ರಾಮಾಯಣ’ ಸಿನಿಮಾ 13 ದಿನಗಳಲ್ಲಿ ವಿಶ್ವ ಬಾಕ್ಸ್ಆಫೀಸ್​​ನಲ್ಲಿ 1500 ಕೋಟಿ ಮೊತ್ತ ಗಳಿಕೆಗೆ ಹತ್ತಿರದಲ್ಲಿದೆ. ಈ ಹಿಂದೆ ರಾಮಾಯಣ ಆಧರಿಸಿದ ‘ಆದಿಪುರುಷ್’ ಸಿನಿಮಾ ರಿಲೀಸ್ ಆದಾಗ ಹಿಂದೂ ಸಂಘಟನೆಗಳು ಸೇರಿದಂತೆ ಹಲವು ಕಡೆಗಳಿಂದ ವಿರೋಧ ಎದುರಿಸಿತ್ತು. ‘ರಾಮಾಯಣ’ಕ್ಕೂ ಅದೇ ಸಮಸ್ಯೆ ಎದುರಾಗಲಿದೆ ಎಂಬ ಅನುಮಾನಗಳಿದ್ದವು. ಆದರೆ ಹಾಗಾಗಿರಲಿಲ್ಲ, ಆದರೆ ಇದೀಗ ಹಿಂದೂ ಸಂಘಟನೆಯೊಂದು ‘ರಾಮಾಯಣ’ ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸಿನಿಮಾ ಅನ್ನು ಬಾಯ್​​ಕಾಟ್ ಮಾಡುವಂತೆ ಕರೆ ನೀಡಿದೆ.

‘ರಾಮಾಯಣ’ಕ್ಕೆ ಆಕ್ಷೇಪ, ಬಾಯ್​​ಕಾಟ್ ಮಾಡುವಂತೆ ಹಿಂದೂ ಸಂಘಟನೆ ಕರೆ
Ramayana Movie
ಮಂಜುನಾಥ ಸಿ.
|

Updated on: Nov 18, 2026 | 5:45 PM

Share

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾಕ್ಕೆ ಸಂಘಟನೆಯ ವಿರೋಧ
  • ಸಿನಿಮಾ ಬಾಯ್​​ಕಾಟ್​​ ಮಾಡುವಂತೆ ಕರೆ
  • ‘ರಾಮಾಯಣ’ ಸಿನಿಮಾಕ್ಕೆ ಆಕ್ಷೇಪ

‘ರಾಮಾಯಣ’ ಸಿನಿಮಾ ರಿಲೀಸ್ ಆಗಿದ್ದು ಸಿನಿಮಾ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿದೇಶಗಳಲ್ಲೂ ಸಹ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡುತ್ತಿದೆ. ಬಿಡುಗಡೆ ಆದ 13 ದಿನಗಳಲ್ಲಿ ವಿಶ್ವ ಬಾಕ್ಸ್ಆಫೀಸ್​​ನಲ್ಲಿ 1500 ಕೋಟಿ ಮೊತ್ತ ಗಳಿಕೆಗೆ ಹತ್ತಿರದಲ್ಲಿದೆ. ಈ ಹಿಂದೆ ರಾಮಾಯಣ ಆಧರಿಸಿದ ‘ಆದಿಪುರುಷ್’ ಸಿನಿಮಾ ರಿಲೀಸ್ ಆದಾಗ ಹಿಂದೂ ಸಂಘಟನೆಗಳು ಸೇರಿದಂತೆ ಹಲವು ಕಡೆಗಳಿಂದ ವಿರೋಧ ಎದುರಿಸಿತ್ತು. ‘ರಾಮಾಯಣ’ಕ್ಕೂ ಅದೇ ಸಮಸ್ಯೆ ಎದುರಾಗಲಿದೆ ಎಂಬ ಅನುಮಾನಗಳಿದ್ದವು. ಆದರೆ ಹಾಗಾಗಿರಲಿಲ್ಲ, ಆದರೆ ಇದೀಗ ಹಿಂದೂ ಸಂಘಟನೆಯೊಂದು ‘ರಾಮಾಯಣ’ ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸಿನಿಮಾ ಅನ್ನು ಬಾಯ್​​ಕಾಟ್ ಮಾಡುವಂತೆ ಕರೆ ನೀಡಿದೆ.

‘ರಾಮಾಯಣ: ಪಾರ್ಟ್ 1’ ಚಿತ್ರವು ಬಾಕ್ಸ್ ಆಫೀಸಿನಲ್ಲಿ ಉತ್ತಮ ಗಳಿಕೆ ಮಾಡುತ್ತಿದ್ದರೂ, ಕೆಲವು ಹಿಂದೂ ಸಂಘಟನೆಗಳ ವಿರೋಧವನ್ನು ಎದುರಿಸಬೇಕಾಗಿ ಬಂದಿದೆ. ‘ಸೃಜನಶೀಲ ಸ್ವಾತಂತ್ರ್ಯ’ದ ನೆಪದಲ್ಲಿ ಕತೆಯನ್ನು ‘ಉದ್ದೇಶಪೂರ್ವಕವಾಗಿ ತಿರುಚಲಾಗಿದೆ’ ಎಂದು ಹಿಂದೂ ಜಾಗೃತಿ ಸಮಿತಿ ಆರೋಪಿಸಿವೆ. ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸಂಘಟನೆಯ ಮುಖಂಡರು, ‘ರಾವಣನ ವೈಭವೀಕರಣ ಮತ್ತು ಮೂಲ ಕತೆಗಳ ಹಲವಾರು ಘಟನೆಗಳನ್ನು ತಿರುಚಲಾಗಿದೆ, ಲಕ್ಷ್ಮಣ ಪಾತ್ರವನ್ನು ಸೂಕ್ತವಾಗಿ ಕಟ್ಟಿಕೊಡದೇ ಇರುವುದು ಮತ್ತು ಶ್ರೀರಾಮ ಹಾಗೂ ಲಕ್ಷ್ಮಣರ ಪರಾಕ್ರಮಕ್ಕೆ ವಿರುದ್ಧವಾದ ದೃಶ್ಯಗಳನ್ನು ಚಿತ್ರದಲ್ಲಿರುವ ಅತ್ಯಂತ ಆಕ್ಷೇಪಾರ್ಹ ಅಂಶಗಳಾಗಿವೆ ಎಂದು ತಿಳಿಸಿದ್ದಾರೆ.

ರಾವಣನನ್ನು ಬಡವರಿಗೆ ಚಿನ್ನದ ಮನೆಗಳನ್ನು ನೀಡಿ, ತುಳಿತಕ್ಕೊಳಗಾದವರ ರಕ್ಷಕನಂತೆ ತೋರಿಸಿರುವ ಬಗ್ಗೆಯೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ರಾಕ್ಷಸ ರಾಜನನ್ನು ನ್ಯಾಯ ಒದಗಿಸುವ ಸಮಾಜವಾದಿಯಂತೆ ಚಿತ್ರಿಸಿರುವುದು ಕಮ್ಯುನಿಸ್ಟ್ ಸಿದ್ಧಾಂತವನ್ನು ಉತ್ತೇಜಿಸುವುದಕ್ಕೆ ಸಮಾನವಾಗಿದೆ. ಸೇವಕಿಯೊಬ್ಬಳಿಗೆ ಕಿರುಕುಳ ನೀಡಿದ್ದಕ್ಕಾಗಿ ರಾವಣನು ಶೂರ್ಪಣಕಳ ಪತಿ ವಿದ್ಯುಜ್ಜಿಹ್ವನನ್ನು ಕೊಲ್ಲುವ ದೃಶ್ಯದ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ರಾಮ ಮತ್ತು ಲಕ್ಷ್ಮಣರು ರಾವಣನ ಸೈನ್ಯದೊಂದಿಗೆ ಯುದ್ಧ ಮಾಡುತ್ತಾ ಓಡಿಹೋಗುವುದು ಮತ್ತು ಸೀತೆ ರಾಕ್ಷಸರೊಂದಿಗೆ ಹೋರಾಡುವುದು ಇನ್ನೂ ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ರಾಮಾಯಣ’: ರಾವಣನ ಹತ್ತು ತಲೆ ಐಡಿಯಾ ಯಶ್​​ ಅವರದ್ದೇ

ಹಿಂದೂ ಜನಜಾಗೃತಿ ಸಮಿತಿ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕರಾದ ಸುನಿಲ್ ಘನಾವತ್ ಈ ಬಗ್ಗೆ ಮಾತನಾಡಿದ್ದು, ಈಗ ಬಿಡುಗಡೆ ಆಗಿರುವ ‘ರಾಮಾಯಣ’ ಸಿನಿಮಾವು ‘ಕಮ್ಯುನಿಸ್ಟ್’ ಅಜೆಂಡಾ ಅನ್ನು ಉತ್ತೇಜಿಸುವಂತಿದೆ ಹಾಗಾಗಿ ಸನಾತನಿ ಹಿಂದೂಗಳು ಚಿತ್ರವನ್ನು ವೀಕ್ಷಿಸದಂತೆ ಮನವಿ ಮಾಡಿದ್ದಾರೆ. ಸಿಬಿಎಫ್​​ಸಿಯು ಹಿಂದೂಗಳನ್ನು ಹೊರತುಪಡಿಸಿ ಎಲ್ಲಾ ಧರ್ಮಗಳ ಅನುಯಾಯಿಗಳ ಭಾವನೆಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದೆ ಎಂದಿದ್ದಾರೆ. ಮುಸ್ಲಿಂ ಗುಂಪುಗಳ ವಿರೋಧ ಎದುರಿಸಿದ ‘ಮೆಸ್ಸೆಂಜರ್ ಆಫ್ ಗಾಡ್’ ಚಿತ್ರವನ್ನು ಅವರು ಉದಾಹರಣೆಯಾಗಿ ನೀಡಿದರು.

ಕ್ರಿಶ್ಚಿಯನ್ನರ ಪ್ರತಿಭಟನೆಯ ನಂತರ ಗೋವಾ ಮತ್ತು ಕೇರಳದಲ್ಲಿ ‘ದಿ ಡಾ ವಿನ್ಸಿ ಕೋಡ್’ ಚಿತ್ರವನ್ನು ಬಿಡುಗಡೆ ಮಾಡಿರಲಿಲ್ಲ. ನಾಯಿಯ ಮದುವೆಯನ್ನು ಪಾದ್ರಿಯೊಬ್ಬರು ನೆರವೇರಿಸುವ ದೃಶ್ಯಕ್ಕೆ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ವಿರೋಧ ವ್ಯಕ್ತಪಡಿಸಿದ ನಂತರ ‘ಕಮಾಲ್ ಧಮಾಲ್ ಮಲಾಮಾಲ್’ ಚಿತ್ರವನ್ನು ಹಿಂಪಡೆಯಲಾಗಿತ್ತು, ಆದರೆ ಸೆನ್ಸಾರ್ ಮಂಡಳಿಯು ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಏಕೆ ಇಷ್ಟು ಸಂವೇದನಾಶೀಲವಾಗಿಲ್ಲ? ಎಂದು ಅವರು ಪ್ರಶ್ನೆದರು.

ಸಂಘಟನೆಯ ವಕ್ತಾರ ಅಭಯ್ ವರ್ತಕ್ ಮಾತನಾಡಿ, ‘ರಾಮಾಯಣ’ ಸಿನಿಮಾನಲ್ಲಿ ಮೂಲ ಗ್ರಂಥದಲ್ಲಿರುವ ಹಲವಾರು ಘಟನೆಗಳನ್ನು ತಿರುಚಲಾಗಿದೆ, ಅದು ಸ್ವೀಕಾರಾರ್ಹವಲ್ಲ, ದೇಶದಲ್ಲಿ ಶ್ರೀರಾಮನ ಭಕ್ತರಾದ ಪ್ರಧಾನ ಮಂತ್ರಿ ಮತ್ತು ಶ್ರೀರಾಮನನ್ನು ಆದರ್ಶವಾಗಿ ಕಾಣುವ ಸರ್ಕಾರವಿರುವ ಈ ಸಮಯದಲ್ಲಿ, ಇಂತಹ ಸೃಜನಶೀಲ ಕೃತಿಗಳ ಮೂಲಕ ಇತಿಹಾಸವನ್ನು ತಿರುಚುತ್ತಿರುವುದು ದುರದೃಷ್ಟಕರ’ ಎಂದು ಅವರು ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ
ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ