AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಲಿಸಿತು ನಿರ್ಮಾಪಕ ನಮಿತ್ ಮಲ್ಹೋತ್ರಾ ಪ್ಲ್ಯಾನ್, ಹೆಚ್ಚಾಯ್ತು ‘ರಾಮಾಯಣ’ ಟಿಕೆಟ್ ಬುಕಿಂಗ್

ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಮುಂಗಡ ಬುಕಿಂಗ್ ಓಪನ್ ಆಗಿ ಈಗಾಗಲೇ ಕೆಲ ದಿನಗಳಾಗಿದೆ. ಸಿನಿಮಾದ ಮುಂಗಡ ಬುಕಿಂಗ್ ನಿಧಾನವಾಗಿ ಸಾಗುತ್ತಿತ್ತು. ಆದರೆ ನಮಿತ್ ಮಲ್ಹೋತ್ರಾ ಮಾಡಿದ ಯೋಜನೆಯಿಂದಾಗಿ ಅಚಾನಕ್ಕಾಗಿ ಟಿಕೆಟ್ ಬುಕಿಂಗ್​​ನಲ್ಲಿ ಭಾರಿ ಏರಿಕೆ ಕಂಡಿದೆ.

ಫಲಿಸಿತು ನಿರ್ಮಾಪಕ ನಮಿತ್ ಮಲ್ಹೋತ್ರಾ ಪ್ಲ್ಯಾನ್, ಹೆಚ್ಚಾಯ್ತು ‘ರಾಮಾಯಣ’ ಟಿಕೆಟ್ ಬುಕಿಂಗ್
Ramayana Movie
ಮಂಜುನಾಥ ಸಿ.
|

Updated on: Oct 31, 2026 | 9:14 AM

Share

ಮುಖ್ಯಾಂಶಗಳು

  • ರಾಮಾಯಣ ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕಿಂಗ್
  • ಅಡ್ವಾನ್ಸ್ ಟಿಕೆಟ್ ಬುಕಿಂಗ್ ನಲ್ಲಿ ಭಾರಿ ಹೆಚ್ಚಳ
  • ಫಲಿಸಿತು ನಿರ್ಮಾಪಕ ನಮಿತ್ ಯೋಜನೆ

ರಣ್​​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಮುಂಗಡ ಬುಕಿಂಗ್ ಓಪನ್ ಆಗಿ ಈಗಾಗಲೇ ಕೆಲ ದಿನಗಳಾಗಿದೆ. ಸಿನಿಮಾದ ಮುಂಗಡ ಬುಕಿಂಗ್ ನಿಧಾನವಾಗಿ ಸಾಗುತ್ತಿತ್ತು. ಆದರೆ ನಮಿತ್ ಮಲ್ಹೋತ್ರಾ ಮಾಡಿದ ಯೋಜನೆಯಿಂದಾಗಿ ಅಚಾನಕ್ಕಾಗಿ ಟಿಕೆಟ್ ಬುಕಿಂಗ್​​ನಲ್ಲಿ ಭಾರಿ ಏರಿಕೆ ಕಂಡಿದೆ.

‘ರಾಮಾಯಣ’ ಸಿನಿಮಾ, ಭಾರತದಿಂದ ವಿಶ್ವಕ್ಕೆ ನೀಡುತ್ತಿರುವ ಕೊಡುಗೆ’ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದರು. ಅದರಂತೆ ವಿದೇಶಗಳಲ್ಲಿ ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿಯೇ ಮಾಡಲಾಗಿತ್ತು. ಅಮೆರಿಕ ಸೇರಿದಂತೆ ಇನ್ನೂ ಕೆಲ ದೇಶಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿ ಕೆಲ ದಿನಗಳಾಗಿದ್ದವು. ಅಮೆರಿಕದಲ್ಲಿ ಸಿನಿಮಾದ ಬುಕಿಂಗ್ ಸಾಧಾರಣವಾಗಿತ್ತು. ಆದರೆ ಇತ್ತೀಚೆಗಷ್ಟೆ ಲಾಸ್ ಏಂಜಲ್ಸ್​​​ನ ಅಕಾಡೆಮಿ ಮ್ಯೂಸಿಯಮ್​​ನಲ್ಲಿ ‘ರಾಮಾಯಣ’ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು.

ಈ ವಿಶೇಷ ಪ್ರದರ್ಶನಕ್ಕೆ ಅಮೆರಿಕದ ಬಲು ಜನಪ್ರಿಯ ಕಂಟೆಂಟ್ ಕ್ರಿಯೇಟರ್​​ಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು. ಯಶ್, ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಇನ್ನೂ ಕೆಲವು ಕಲಾವಿದರು, ತಂತ್ರಜ್ಞರು ಸಹ ಈ ಪ್ರೀಮಿಯರ್ ಶೋನಲ್ಲಿ ಭಾಗಿ ಆಗಿ ಕಂಟೆಂಟ್ ಕ್ರಿಯೇಟರ್​​ಗಳ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಅಂದು ಸಿನಿಮಾ ನೋಡಿದ ಹಲವರು ‘ರಾಮಾಯಣ’ ಸಿನಿಮಾದ ಗುಣಮಟ್ಟವನ್ನು ಕೊಂಡಾಡಿದ ಜೊತೆಗೆ ಸಿನಿಮಾ ಅನ್ನು ‘ಲಾರ್ಡ್ ಆಫ್ ದಿ ರಿಂಗ್ಸ್’ ಸಿನಿಮಾಕ್ಕೆ ಹೋಲಿಕೆ ಮಾಡಿದ್ದರು. ಆ ಪ್ರೀಮಿಯರ್ ಶೋ ಬೆನ್ನಲ್ಲೆ ಅಮೆರಿಕದಲ್ಲಿ ‘ರಾಮಾಯಣ’ ಸಿನಿಮಾದ ಮುಂಗಡ ಬುಕಿಂಗ್ 27% ಹೆಚ್ಚಾಗಿದೆ.

ಇದನ್ನೂ ಓದಿ:ಯಶ್ ಅವರನ್ನು ‘ಬಾಸ್’ ಎಂದ ರಣ್​​ಬೀರ್ ಕಪೂರ್: ವಿಡಿಯೋ ನೋಡಿ

ಅದು ಮಾತ್ರವೇ ಅಲ್ಲದೆ, ಅಮೆರಿಕದಲ್ಲಿ ‘ರಾಮಾಯಣ’ ಸಿನಿಮಾದ ಟಿಕೆಟ್ ದರವನ್ನು ಸಹ ಬೇಕೆಂದೇ ಕಡಿಮೆ ಇರಿಸಿದ್ದಾರೆ ನಿರ್ಮಾಪಕ. ಸಿನಿಮಾದ ಟಿಕೆಟ್ ಬುಕಿಂಗ್ ಹೆಚ್ಚಾಗಲು ಇದೂ ಸಹ ಒಂದು ಪ್ರಮುಖ ಕಾರಣ ಆಗಿದೆ. ನಿನ್ನೆಯಷ್ಟೆ (ಅಕ್ಟೋಬರ್ 30) ಅಮೆರಿಕನಲ್ಲಿ ತೆಲುಗಿನ ‘ಆದರ್ಶ ಕುಟುಂಬಂ 47’ ಸಿನಿಮಾ ರಿಲೀಸ್ ಆಗಿದೆ. ಆದರೆ ಆ ಸಿನಿಮಾದ ಟಿಕೆಟ್ ದರಕ್ಕಿಂತಲೂ ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ದ ಟಿಕೆಟ್ ದರ ಕಡಿಮೆ ಇದೆಯಂತೆ. ಭಾರತೀಯ ಪ್ರೇಕ್ಷಕರು ವಿದೇಶಗಳಲ್ಲಿ ‘ರಾಮಾಯಣ’ ನೋಡಲು ಉತ್ಸುಕತೆ ಪ್ರದರ್ಶಿಸುತ್ತಿರುವುದಕ್ಕೆ ಇದೂ ಒಂದು ಕಾರಣವೇ ಆಗಿದೆ. ‘ರಾಮಾಯಣ’ ಸಿನಿಮಾ ನವೆಂಬರ್ 5 ರಂದು ವಿಶ್ವದಾದ್ಯಂತ ಹಲವಾರು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ