
ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ. ಈ ಸಿನಿಮಾ ವಿಶ್ವ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ಬಾಲಿವುಡ್ಗೆ ಬೂಸ್ಟ್ ಸಿಕ್ಕಿದೆ. ಕೆಲವರು ‘ಬ್ರಹ್ಮಾಸ್ತ್ರ’ ಬಗ್ಗೆ ಟೀಕೆ ಮಾಡಿದ ಹೊರತಾಗಿಯೂ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಮೊದಲ ದಿನ ಈ ಸಿನಿಮಾ ವಿಶ್ವಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಬಾಲಿವುಡ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಮೊದಲ ದಿನದ ಕಲೆಕ್ಷನ್ನಲ್ಲಿ ಸಿನಿಮಾ ಗೆಲುವು ಕಂಡಿದೆ.
ರಣಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಹಲವು ವಿಶೇಷತೆಗಳೊಂದಿಗೆ ತೆರೆಗೆ ಬಂತು. ರಣಬೀರ್ ಹಾಗೂ ಆಲಿಯಾ ಒಟ್ಟಾಗಿ ನಟಿಸಿದ ಮೊದಲ ಸಿನಿಮಾ ಇದು. ರಣಬೀರ್ ಹಾಗೂ ಆಲಿಯಾ ಕೆಮಿಸ್ಟ್ರಿ ಹೇಗಿದೆ ಎಂದು ತಿಳಿದುಕೊಳ್ಳಲು ಫ್ಯಾನ್ಸ್ ಕಾತುರರಾಗಿದ್ದರು. ಈ ಚಿತ್ರ ಹಿಂದಿ ಮಾತ್ರವಲ್ಲದೆ ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್ ಆಗಿದ್ದು ವಿಶೇಷ. ರಾಜಮೌಳಿ ಅವರು ದಕ್ಷಿಣ ಭಾರತದಲ್ಲಿ ಸಿನಿಮಾ ಹಂಚಿಕೆ ಜವಾಬ್ದಾರಿ ಹೊತ್ತುಕೊಂಡಿದ್ದರು. ಈ ಕಾರಣದಿಂದಲೂ ಸಿನಿಮಾಗೆ ಮೈಲೇಜ್ ಸಿಕ್ಕಿದೆ.
ಅಡ್ವಾನ್ಸ್ ಬುಕಿಂಗ್ನಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ಕಮಾಲ್ ಮಾಡಿತ್ತು. ಮೊದಲ ದಿನ ಈ ಚಿತ್ರ ಅಡ್ವಾನ್ಸ್ ಬುಕಿಂಗ್ನಿಂದ 11 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಒಂದು ವರ್ಗದ ಜನರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ ಕಾರಣ ಸಿನಿಮಾವನ್ನು ದೊಡ್ಡ ಸಂಖ್ಯೆಯಲ್ಲಿ ವೀಕ್ಷಿಸಲಾಗಿದೆ. ಹೀಗಾಗಿ, ಮೊದಲ ದಿನದ ಕಲೆಕ್ಷನ್ 75 ಕೋಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ.
ಇಂದು (ಸೆಪ್ಟೆಂಬರ್ 10) ಹಾಗೂ ನಾಳೆ (ಸೆಪ್ಟೆಂಬರ್ 11) ವೀಕೆಂಡ್ ಆದ್ದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ‘ಬ್ರಹ್ಮಾಸ್ತ್ರ’ ಸಿನಿಮಾವನ್ನು ಬೈಕಾಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಶುರುವಾಗಿತ್ತು. ಆದರೆ, ಇದನ್ನೂ ಮೀರಿ ಸಿನಿಮಾ ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ.
ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್ನಲ್ಲಿ ‘ಬ್ರಹ್ಮಾಸ್ತ್ರ’ ಕಮಾಲ್; ಆದರೆ, ‘ಕೆಜಿಎಫ್ 2’ ಸಮೀಪವೂ ಬರಲಿಲ್ಲ ರಣಬೀರ್ ಸಿನಿಮಾ ಕಲೆಕ್ಷನ್
‘ಬ್ರಹ್ಮಾಸ್ತ್ರ’ ಸಿನಿಮಾ ನೋಡಿದ ಮೊದಲ ದಿನ ಕೆಲವರು ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ನೀಡಿದರು. ಸಿನಿಮಾದ ವಿಎಫ್ಎಕ್ಸ್ ಬಗ್ಗೆ ಟೀಕೆ ಮಾಡಿದ್ದರು. ಆದರೆ, ಒಂದು ವರ್ಗದ ಜನರಿಗೆ ಸಿನಿಮಾ ಇಷ್ಟ ಆಗಿದೆ. ಈ ಕಾರಣದಿಂದ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.
Published On - 9:04 am, Sat, 10 September 22