ಮೊದಲ ದಿನ 61 ಕೋಟಿ ರೂಪಾಯಿ ಗಳಿಸಿದ ‘ಅನಿಮಲ್’; ಅತಿ ದೊಡ್ಡ ಗೆಲುವು ಕಂಡ ರಣಬೀರ್, ರಶ್ಮಿಕಾ

|

Updated on: Dec 02, 2023 | 10:32 AM

ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಜೀವನದಲ್ಲಿ ಅತಿದೊಡ್ಡ ಗೆಲುವು ಕಂಡಿದ್ದಾರೆ. ‘ಅನಿಮಲ್’ ಸಿನಿಮಾ ಮೊದಲ ದಿನ 61 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನ ಇಷ್ಟು ದೊಡ್ಡ ಗಳಿಕೆ ಮಾಡುವುದು ಅದು ಸಣ್ಣ ಸಾಧನೆ ಅಲ್ಲ.

ಮೊದಲ ದಿನ 61 ಕೋಟಿ ರೂಪಾಯಿ ಗಳಿಸಿದ ‘ಅನಿಮಲ್’; ಅತಿ ದೊಡ್ಡ ಗೆಲುವು ಕಂಡ ರಣಬೀರ್, ರಶ್ಮಿಕಾ
ರಶ್ಮಿಕಾ-ರಣಬೀರ್
Follow us on

ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಡಿಸೆಂಬರ್ 1ರಂದು ರಿಲೀಸ್ ಆದ ಈ ಸಿನಿಮಾ ಮೊದಲ ದಿನ 60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನದಲ್ಲೇ ಮೊದಲ ದಿನ ಇಷ್ಟು ದೊಡ್ಡ ಗಳಿಕೆ ಆಗಿದ್ದು ಇದೇ ಮೊದಲು. ಮುಂದಿನ ದಿನಗಳಲ್ಲಿ ಸಿನಿಮಾ ಅಬ್ಬರದ ಗಳಿಕೆ ಮಾಡುವ ಸಾಧ್ಯತೆ ಇದೆ.

ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಹಿಂದಿ, ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಆರಂಭಿಕ ವರದಿಗಳ ಪ್ರಕಾರ ಈ ಚಿತ್ರ ಹಿಂದಿಯಲ್ಲಿ 50.50 ಕೋಟಿ ರೂಪಾಯಿ ಬಾಚಿಕೊಂಡಿದೆ. ತೆಲುಗು ವರ್ಷನ್​ನಿಂದ 10 ಕೋಟಿ ರೂಪಾಯಿ ಆಗಿದೆ. ಉಳಿದ ಭಾಷೆಗಳಿಂದ 50 ಲಕ್ಷ ರೂಪಾಯಿ ಗಳಿಕೆ ಆಗಿದೆ.

ರಣಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಮೊದಲ ದಿನ 36 ಕೋಟಿ ರೂಪಾಯಿ, ‘ಸಂಜು’ ಸಿನಿಮಾ 34.75 ಕೋಟಿ ರೂಪಾಯಿ ಗಳಿಸಿತ್ತು. ಈಗ ‘ಅನಿಮಲ್’ ಸಿನಿಮಾ ಮೊದಲ ದಿನ 50 ಕೋಟಿ ರೂಪಾಯಿ (ಹಿಂದಿ ವರ್ಷನ್ ಮಾತ್ರ) ಗಳಿಸಿದೆ.  ಈ ಮೂಲಕ ರಣಬೀರ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ವಿದೇಶಗಳಲ್ಲೂ ‘ಅನಿಮಲ್’ ಸಿನಿಮಾ ರಿಲೀಸ್ ಆಗಿದೆ. ವಿಶ್ವದ ಗಳಿಕೆಯ ಲೆಕ್ಕಾಚಾರವೂ ಸಿಕ್ಕರೆ ಸಿನಿಮಾದ ಒಟ್ಟೂ ಗಳಿಕೆ ಮತ್ತಷ್ಟು ಹೆಚ್ಚಲಿದೆ. ಇನ್ನು, ಸಿನಿಮಾಗೆ ಅನೇಕರು ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ಸಾಕಷ್ಟು ವೈಲೆನ್ಸ್ ತೋರಿಸಲಾಗಿದೆ ಎಂದು ಅನೇಕರು ಆರೋಪ ಮಾಡಿದ್ದಾರೆ. ಈ ಕಾರಣದಿಂದಲೇ ಸಿನಿಮಾಗೆ ಸೆನ್ಸಾರ್​ನಿಂದ ಎ ಪ್ರಮಾಣಪತ್ರ ಸಿಕ್ಕಿದೆ. ಸಿನಿಮಾದ ಅವಧಿ 3 ಗಂಟೆ 21 ನಿಮಿಷ ಇದೆ. ಈ ಬಗ್ಗೆ ಹೆಚ್ಚಿನ ಮಂದಿ ತಕರಾರು ತೆಗೆದಿದ್ದಾರೆ.

ಇದನ್ನೂ ಓದಿ: ಹೇಗಿದೆ ರಶ್ಮಿಕಾ-ರಣಬೀರ್​ ನಟನೆಯ ‘ಅನಿಮಲ್​’ ಸಿನಿಮಾ? ಇಲ್ಲಿದೆ ಟ್ವಿಟರ್​ ವಿಮರ್ಶೆ

‘ಅನಿಮಲ್’ ಸಿನಿಮಾಗೆ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಣಬೀರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ನಟಿಸಿದ್ದಾರೆ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಅನುಭವ ಸಂದೀಪ್ ರೆಡ್ಡಿ ಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ