ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಮದುವೆ ನಂತರ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಮಗಳು ಜನಿಸಿದ ಮೇಲಂತೂ ಅವರು ಕುಟುಂಬಕ್ಕಾಗಿ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. 2022ರ ಏಪ್ರಿಲ್ 14ರಂದು ಆಲಿಯಾ ಭಟ್ (Alia Bhatt) ಜೊತೆ ರಣಬೀರ್ ಕಪೂರ್ ಮದುವೆ ನೆರವೇರಿತು. ಅದೇ ವರ್ಷ ನವೆಂಬರ್ನಲ್ಲಿ ಅವರಿಗೆ ಹೆಣ್ಣು ಮಗು (Ranbir Kapoor Daughter) ಜನಿಸಿತು. ಮಗಳಿಗೆ ರಾಹಾ ಎಂದು ಹೆಸರು ಇಟ್ಟಿದ್ದಾರೆ. ಈವರೆಗೂ ಮಗಳ ಫೋಟೋವನ್ನು ಈ ದಂಪತಿ ರಿವೀಲ್ ಮಾಡಿಲ್ಲ. ಮುದ್ದಿನ ಪುತ್ರಿಯ ಜೊತೆಗೆ ಹೆಚ್ಚು ಕಾಲ ಕಳೆಯಬೇಕು ಎಂಬ ಆಸೆ ರಣಬೀರ್ ಕಪೂರ್ ಅವರಿಗೆ ಇದೆ. ಹಾಗಾಗಿ ಅವರು ಹೆಚ್ಚಿನ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ‘ಅನಿಮಲ್’ ಚಿತ್ರ ತೆರೆಕಂಡ ಬಳಿಕ ಅವರು ನಟನೆಯಿಂದ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ರಣಬೀರ್ ಕಪೂರ್ ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಎಲ್ಲವನ್ನೂ ಒಪ್ಪಿಕೊಳ್ಳುವ ಧಾವಂತ ಅವರಿಗೆ ಇಲ್ಲ. ಶ್ರದ್ಧಾ ಕಪೂರ್ ಜೊತೆ ಅವರು ನಟಿಸಿರುವ ‘ತು ಜೂಟಿ ಮೈ ಮಕ್ಕಾರ್’ ಸಿನಿಮಾ ಮಾರ್ಚ್ 8ರಂದು ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಆಗಸ್ಟ್ ತಿಂಗಳಲ್ಲಿ ‘ಅನಿಮಲ್’ ಸಿನಿಮಾ ರಿಲೀಸ್ ಆಗಲಿದೆ. ಆ ಬಳಿಕ ರಣಬೀರ್ ಕಪೂರ್ ಫುಲ್ ಬಿಡುವು ಮಾಡಿಕೊಳ್ಳಲಿದ್ದಾರೆ.
ಇದನ್ನೂ ಓದಿ: Ranbir Kapoor: ಸೌರವ್ ಗಂಗೂಲಿ, ಕಿಶೋರ್ ಕುಮಾರ್ ಬಯೋಪಿಕ್ ಬಗ್ಗೆ ಬಾಯ್ಬಿಟ್ಟ ನಟ ರಣಬೀರ್ ಕಪೂರ್
ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ರಣಬೀರ್ ಕಪೂರ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಯಾವುದೇ ಹೊಸ ಸಿನಿಮಾಗೆ ಸಹಿ ಮಾಡಿಲ್ಲ. ಮುಂಬರುವ ದಿನಗಳಲ್ಲಿ ಹೊಸ ಕಥೆ ಕೇಳುತ್ತೇನೆ. ಆದರೆ ಸಿನಿಮಾ ಒಪ್ಪಿಕೊಳ್ಳುವಲ್ಲಿ ನನಗೆ ಅವಸರ ಇಲ್ಲ. ಮನೆಯಲ್ಲಿ ಮಗಳು ಇದ್ದಾಳೆ. ಆಕೆಯ ಜೊತೆ ಒಂದು ವರ್ಷ ಸುಮ್ಮನೆ ಕಾಲ ಕಳೆದರೂ ನನಗೆ ಖುಷಿ ಎನಿಸುತ್ತದೆ. ‘ಅನಿಮಲ್’ ಮತ್ತು ‘ಬ್ರಹ್ಮಾಸ್ತ್ರ 2’ ಹೊರತಾಗಿ ನನ್ನ ಕೈಯಲ್ಲಿ ಬೇರೆ ಯಾವುದೇ ಸಿನಿಮಾಗಳು ಇಲ್ಲ’ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
ಇದನ್ನೂ ಓದಿ: Ranbir Kapoor: ಸೆಲ್ಫಿ ಕೇಳಲು ಬಂದ ಅಭಿಮಾನಿಯ ಮೊಬೈಲ್ ಎಸೆದ ರಣಬೀರ್ ಕಪೂರ್; ವಿಡಿಯೋ ವೈರಲ್
ಹಿಂದಿಯಲ್ಲಿ ‘ಧೂಮ್’ ಸರಣಿಯ ಚಿತ್ರಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ‘ಧೂಮ್ 4’ ಸಿನಿಮಾದಲ್ಲಿ ರಣಬೀರ್ ಕಪೂರ್ ನಟಿಸಬಹುದು ಎಂಬ ಗಾಸಿಪ್ ಹರಿದಾಡುತ್ತಿದೆ. ಅಲ್ಲದೇ ರಾಮಾಯಣ ಕಥೆಯಾಧಾರಿತ ಸಿನಿಮಾದಿಂದಲೂ ಅವರಿಗೆ ಆಫರ್ ಹೋಗಿದೆ ಎಂಬ ಮಾತು ಕೇಳಿಬಂದಿದೆ. ಆದರೆ ಆ ಎಲ್ಲ ಗಾಸಿಪ್ಗಳನ್ನು ರಣಬೀರ್ ಕಪೂರ್ ಅವರು ತಳ್ಳಿ ಹಾಕಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.