
ರಣ್ಬೀರ್ ಕಪೂರ್ ಬಾಲಿವುಡ್ನ ಸ್ಟಾರ್ ನಟ. ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು ರಣ್ಬೀರ್ ಕಪೂರ್. ಮಾಸ್-ಕ್ಲಾಸ್ ಎಲ್ಲ ರೀತಿಯ ಪಾತ್ರಗಳಿಗೂ ಜೀವ ತುಂಬಬಲ್ಲ ನಟ. ಒಳ್ಳೆಯ ನಟರಾಗಿರುವ ಜೊತೆಗೆ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು ರಣ್ಬೀರ್ ಕಪೂರ್. ಕಪೂರ್ ಕುಟುಂಬದ ಕುಡಿ ಆಗಿರುವ ರಣ್ಬೀರ್ ಚಿನ್ನದ ಚಮಚ ಕಚ್ಚಿಕೊಂಡು ಹುಟ್ಟಿದವರು. ಅವರ ಮನೆ, ಗಾಡಿಗಳು ಬಿಡಿ, ಧರಿಸುವ ವಾಚುಗಳು ಸಹ ಲಕ್ಷ, ಕೋಟಿಗಳಲ್ಲಿ ಬೆಲೆ ಹೊಂದಿರುತ್ತವೆ. ಇತ್ತೀಚೆಗಷ್ಟೆ ಅಂಥಹುದೇ ಒಂದು ಅಪರೂಪದ ವಾಚನ್ನು ಧರಿಸಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು.
ಹೈದರಾಬಾದ್ನಲ್ಲಿ ಆಯೋಜನೆ ಮಾಡಲಾಗಿದ್ದ ‘ರಾಮಾಯಣ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಣ್ಬೀರ್ ಕಪೂರ್ ನೀಲಿ ಬಣ್ಣದ ಉಡುಗೆ ತೊಟ್ಟು ಅದಕ್ಕೆ ಹೊಂದುವಂಥಹಾ ಕೈಗಡಿಯಾರ ಧರಿಸಿದ್ದರು. ಅವರ ಉಡುಗೆಯ ಜೊತೆಗೆ ಅವರು ತೊಟ್ಟಿದ್ದ ಕೈಗಡಿಯಾರವೂ ಸಹ ಸಖತ್ ಗಮನ ಸೆಳೆಯುತ್ತಿತ್ತು. ಅಂದಹಾಗೆ ಅದು ಸಾಮಾನ್ಯ ಕೈಗಡಿಯಾರವಲ್ಲ ಬದಲಿಗೆ ಲಿಮಿಟೆಡ್ ಎಡಿಷನ್ ಗಡಿಯಾರ. ಕೇವಲ 50 ವಾಚುಗಳನ್ನಷ್ಟೆ ತಯಾರಿಸಿ ಮಾರಾಟ ಮಾಡಲಾಗಿದ್ದು, ಅದರಲ್ಲಿ ಒಂದು ರಣ್ಬೀರ್ ಕಪೂರ್ ಅವರ ಬಳಿ ಇದೆ.
ರಣಬೀರ್ ಕಪೂರ್ ಅವರು ಧರಿಸಿದ್ದು ಜಾಕೋಬ್ ಅಂಡ್ ಕೋ. ಎಪಿಕ್ ಎಕ್ಸ್ ಶೆರ್-ಇ-ಪಂಜಾಬ್ ಎಡಿಷನ್ (Jacob & Co. Epic X Sher-e-Punjab Edition) ವಾಚ್. ಇದು ಸಿಖ್ ಧರ್ಮದಿಂದ ಪ್ರೇರಿತವಾದ ಚಿಹ್ನೆಗಳು ಮತ್ತು ಆಕರ್ಷಕ ನೀಲಿ ಪಟ್ಟಿ ಹೊಂದಿರುವ ಟೈಟಾನಿಯಂ ವಾಚು ಇದಾಗಿದ್ದು ಇದರ ಬೆಲೆ 35.88 ಲಕ್ಷ ರೂಪಾಯಿಗಳು. ವಿಶ್ವಾದ್ಯಂತ ಕೇವಲ 50 ವಾಚುಗಳನ್ನು ಮಾತ್ರವೇ ತಯಾರಿಸಲಾಗಿದೆ, ಹಾಗಾಗಿ ಇದು ಬಲು ಅಪರೂಪದ ವಾಚ್ ಆಗಿದೆ.
ಇದನ್ನೂ ಓದಿ:ಯಶ್ ಅವರನ್ನು ‘ಬಾಸ್’ ಎಂದ ರಣ್ಬೀರ್ ಕಪೂರ್: ವಿಡಿಯೋ ನೋಡಿ
ಟೈಟಾನಿಯಂದಿಂದ ತಯಾರಿಸಲಾಗಿರುವ ಈ ವಾಚಿನ ಪ್ರಮುಖ ವಿಶೇಷತೆಯೆಂದರೆ ಸಿಂಹ, ಖಂಡ ಮತ್ತು ಏಕ್ ಓಂಕಾರದ ಚಿಹ್ನೆಗಳು. ಗುರು ಗೋಬಿಂದ್ ಸಿಂಗ್ ಮತ್ತು ಖಾಲ್ಸಾದ ಸ್ಥಾಪನೆಗೆ ಗೌರವ ಸಲ್ಲಿಸುವ ಕಾರಣಕ್ಕೆ ಈ ವಾಚನ್ನು ವಿಶೇಷವಾಗಿ ತಯಾರಿಸಲಾಗಿದೆ. ಅಂದಹಾಗೆ ರಣ್ಬೀರ್ ಕಪೂರ್ ಅವರ ಬಳಿಕ ಹಲವಾರು ವಾಚುಗಳ ಸಂಗ್ರಹ ಇದೆ. ಅವರ ಸಂಗ್ರಹದಲ್ಲಿ ಕೋಟಿಗಳ ಮೌಲ್ಯದ ವಾಚುಗಳು ಸಹ ಇವೆ. ಬಾಲಿವುಡ್ನ ಹಲವು ನಟರು ವಾಚುಗಳ ಸಂಗ್ರಹದಲ್ಲಿ ಆಸಕ್ತಿ ಹೊಂದಿದ್ದಾರೆ. ದಕ್ಷಿಣದಲ್ಲಿ ಜೂ ಎನ್ಟಿಆರ್ ಮತ್ತು ರಾಮ್ ಚರಣ್ ಅವರುಗಳು ಸಹ ವಾಚುಗಳ ಸಂಗ್ರಹದ ಬಗ್ಗೆ ಆಸಕ್ತಿ ಹೊಂದಿದ್ದಾರೆ.
ರಣ್ಬೀರ್ ಕಪೂರ್ ಅವರ ‘ರಾಮಾಯಣ’ ವಿಷಯಕ್ಕೆ ಮರಳುವುದಾದರೆ ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗಲಿದೆ. ಸಿನಿಮಾನಲ್ಲಿ ರಣ್ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಯನ್ನು ರಣ್ಬೀರ್ ಹೊಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ