Swatantrya Veer Savarkar: ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಟ್ರೇಲರ್​ ಬಿಡುಗಡೆ; ಇದು ಬೇರೆಯದೇ ಕಥೆ

|

Updated on: Mar 05, 2024 | 8:40 PM

ಬಹುನಿರೀಕ್ಷಿತ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ವಿನಾಯಕ್​ ದಾಮೋದರ್​ ಸಾವರ್ಕರ್​ ಅವರ ಬಯೋಪಿಕ್​ ಆಗಿರುವ ಈ ಸಿನಿಮಾಗೆ ರಣದೀಪ್​ ಹೂಡಾ ಅವರು ನಿರ್ದೇಶನ ಮಾಡಿದ್ದಾರೆ. ಸಾವರ್ಕರ್​ ಪಾತ್ರದಲ್ಲಿ ರಣದೀಪ್​ ನಟಿಸಿದ್ದಾರೆ. ಮಾರ್ಚ್​ 22ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್​ ಮೂಲಕ ಹೈಪ್​ ಹೆಚ್ಚಾಗಿದೆ.

Swatantrya Veer Savarkar: ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಟ್ರೇಲರ್​ ಬಿಡುಗಡೆ; ಇದು ಬೇರೆಯದೇ ಕಥೆ
ರಣದೀಪ್​ ಹೂಡಾ
Follow us on

ನಟ ರಣದೀಪ್​ ಹೂಡಾ (Randeep Hooda) ನಟಿಸಿರುವ ‘ಸ್ವಾತಂತ್ರ್ಯ ವೀರ ಸಾವರ್ಕರ್​’ (Swatantrya Veer Savarkar) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತಿಹಾಸದ ಪುಟಗಳಲ್ಲಿ ಸಾವರ್ಕರ್​ ಕುರಿತಾಗಿ ಬೇರೆ ಬೇರೆ ಮಾಹಿತಿಗಳು ಲಭ್ಯವಿದೆ. ಈ ಸಿನಿಮಾದಲ್ಲಿ ರಣದೀಪ್​ ಹೂಡಾ ಅವರು ತೋರಿಸಲು ಹೊರಟಿರುವ ಕಥೆಯೇ ಬೇರೆ. ಅದರ ಸುಳಿವನ್ನು ಅವರು ಟ್ರೇಲರ್​ನಲ್ಲಿ ನೀಡಿದ್ದಾರೆ. ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾದ ಟ್ರೇಲರ್​ (Swatantrya Veer Savarkar Trailer) ಬಿಡುಗಡೆ ಆಗಿದೆ. ರಣದೀಪ್​ ಹೂಡಾ ಅವರ ವೃತ್ತಿ ಜೀವನದಲ್ಲಿ ಇದು ತುಂಬ ಡಿಫರೆಂಟ್​ ಸಿನಿಮಾ ಆಗಲಿದೆ ಎಂಬುದರ ಸೂಚನೆ ಟ್ರೇಲರ್​ನಲ್ಲಿ ಸಿಕ್ಕಿದೆ. ಇತಿಹಾಸದಲ್ಲಿ ಈವರೆಗೂ ಹೆಚ್ಚಾಗಿ ಕೇಳಿರದ ವಿವರಗಳು ಈ ಸಿನಿಮಾದಲ್ಲಿ ಬಿತ್ತರ ಆಗಲಿವೆ.

ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್​ ದಾಮೋದರ್​ ಸಾವರ್ಕರ್​ ಅವರ ಜೀವನವನ್ನು ಆಧರಿಸಿ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದಲ್ಲಿ ಸಾವರ್ಕರ್​ ಪಾತ್ರವನ್ನು ರಣದೀಪ್​ ಹೂಡಾ ನಿಭಾಯಿಸಿದ್ದಾರೆ. ಈ ಸಿನಿಮಾಗೆ ಅವರೇ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.

ಸಾವರ್ಕರ್ ವಿಚಾರದಲ್ಲಿ ಸ್ಪೀಕರ್ ಯುಟಿ ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಎಸ್​ಡಿಪಿಐ ಮುಖಂಡ ಅರೆಸ್ಟ್

ಮಾರ್ಚ್​ 22ರಂದು ಹಿಂದಿ ಮತ್ತು ಮರಾಠಿಯಲ್ಲಿ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾ ಬಿಡುಗಡೆ ಆಗಲಿದೆ. ಸಾವರ್ಕರ್​ ಜೀವನದ ವಿವಿಧ ಕಾಲಘಟ್ಟವನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ರಣದೀಪ್​ ಹೂಡಾ ಅವರು ವಿವಿಧ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಖಡಕ್​ ಆದಂತಹ ಡೈಲಾಗ್​ಗಳು ಈ ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ. ಮಹಾತ್ಮ ಗಾಂಧಿ, ಡಾ. ಬಿ.ಆರ್​. ಅಂಬೇಡ್ಕರ್​, ಬಾಲ ಗಂಗಾಧರ್​ ತಿಲಕ್​, ಜವಹರ್​ ಲಾಲ್​ ನೆಹರು, ಮೊಹಮ್ಮದ್​ ಅಲಿ ಜಿನ್ನಾ, ಸುಭಾಷ್​ ಚಂದ್ರ ಬೋಸ್​, ಮದನ್​ ಲಾಲ್​ ಧಿಂಗ್ರ, ಭಗತ್​ ಸಿಂಗ್​ ಮುಂತಾದ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾದಲ್ಲ ಇರಲಿವೆ.

‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾದ ಟ್ರೇಲರ್:

‘ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅಂತ ನಾವೆಲ್ಲರೂ ಓದಿದ್ದೇವೆ. ಇದು ಆ ರೀತಿಯ ಕಥೆ ಅಲ್ಲ…’ ಎಂಬ ಹಿನ್ನೆಲೆ ಧ್ವನಿಯೊಂದಿಗೆ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾದ ಟ್ರೇಲರ್ ಆರಂಭ ಆಗುತ್ತದೆ. ಹಿಂಸೆಯ ವಿಚಾರದಲ್ಲಿ ಮಹಾತ್ಮ ಗಾಂಧಿ ಮತ್ತು ಸಾವರ್ಕರ್​ ಅವರಿಗೆ ಇದ್ದ ಭಿನ್ನಾಭಿಪ್ರಾಯವನ್ನು ಕೂಡ ಈ ಟ್ರೇಲರ್​ನಲ್ಲಿ ತೋರಿಸಲಾಗಿದೆ. ಟ್ರೇಲರ್​ನಲ್ಲಿ ಧರ್ಮದ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಈ ಎಲ್ಲ ಕಾರಣಗಳಿಂದ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾ ಕೌತುಕ ಮೂಡಿಸಿದೆ. ಅಂಕಿತಾ ಲೋಖಂಡೆ ಕೂಡ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.