ರಣವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ (Deepika Padukone) ಮುಂಬೈನಲ್ಲಿ ಸೆಟಲ್ ಆಗಿದ್ದಾರೆ. ಸಿನಿಮಾ, ಜಾಹೀರಾತುಗಳಿಂದ ದೊಡ್ಡ ಸಂಭಾವನೆ ಪಡೆಯುವ ಈ ದಂಪತಿ ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಮುಂಬೈನಲ್ಲಿ ಹಲವು ಮನೆಗಳನ್ನು ಇವರು ಹೊಂದಿದ್ದಾರೆ. ಈಗ ಈ ದಂಪತಿ ಬರೋಬ್ಬರಿ 119 ಕೋಟಿ ರೂಪಾಯಿ ಕೊಟ್ಟು ಮುಂಬೈನ ಸಮುದ್ರದ ಅಂಚಿನಲ್ಲಿ ಐಷಾರಾಮಿ ಫ್ಲಾಟ್ ಖರೀದಿ ಮಾಡಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ರಣವೀರ್ ಸಿಂಗ್ ಹಾಗೂ ದೀಪಿಕಾ ಖರೀದಿಸಿದ ಈ ಅಪಾರ್ಟ್ಮೆಂಟ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಅಪಾರ್ಟ್ಮೆಂಟ್ನಿಂದ ಅರಬ್ಬೀ ಸಮುದ್ರ ಕಾಣಿಸಲಿದೆ. ವಿಶೇಷ ಎಂದರೆ ರಣವೀರ್ ಹಾಗೂ ದೀಪಿಕಾ ಬಾಲಿವುಡ್ನ ಸ್ಟಾರ್ ನಟರಾದ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರ ನೆರೆ ಮನೆಯವರಾಗಿದ್ದಾರೆ.
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಮೆರಿಕಕ್ಕೆ ತೆರಳಿದ್ದರು. ರಣವೀರ್ ಸಿಂಗ್ ಅಲ್ಲಿಯೇ ಬರ್ತ್ಡೇ ಆಚರಿಸಿಕೊಂಡಿದ್ದರು. ಈಗ ಮುಂಬೈಗೆ ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರು ಕೈಕೈ ಹಿಡಿದು ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬೆನ್ನಲ್ಲೇ ಇಬ್ಬರೂ ಹೊಸ ಮನೆ ಖರೀದಿಸಿದ ಬಗ್ಗೆ ವರದಿ ಆಗಿದೆ.
ಮುಂಬೈನ ಬಾಂದ್ರಾ ಭಾಗದಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ವಾಸವಾಗಿದ್ದಾರೆ. ಸಮುದ್ರ ತೀರಕ್ಕೆ ಬಾಂದ್ರಾ ತಾಗಿಕೊಂಡಿದೆ. ಈ ಪ್ರದೇಶ ತುಂಬಾ ಐಷಾರಾಮಿಯಾಗಿಯೂ ಇದೆ. ಈ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ಇಲ್ಲಿ ವಾಸ ಮಾಡಲು ಆದ್ಯತೆ ನೀಡುತ್ತಾರೆ. ಸಲ್ಮಾನ್ ಖಾನ್ ಅವರ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ ಹಾಗೂ ಶಾರುಖ್ ಖಾನ್ ಅವರ ಮನ್ನತ್ ಬಂಗಲೆ ಬಾಂದ್ರಾದಲ್ಲಿಯೇ ಇದೆ.
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಅಪಾರ್ಟ್ಮೆಂಟ್ ಒಂದರ 16, 17, 18 ಹಾಗೂ 19ನೇ ಫ್ಲೋರ್ನಲ್ಲಿರುವ ಫ್ಲಾಟ್ಗಳನ್ನು ಖರೀದಿ ಮಾಡಿದ್ದಾರೆ. ಇದರ ಒಟ್ಟೂ ಸುತ್ತಳತೆ 11,266 ಚದರ ಅಡಿ ಇದೆ. ಇನ್ನು 1,300 ಚದರ ಅಡಿಯ ಟೆರೇಸ್ ಕೂಡ ಇದೆ.
ಇದನ್ನೂ ಓದಿ: ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಮಧ್ಯೆ ಇರುವ ವಯಸ್ಸಿನ ಅಂತರವೆಷ್ಟು?
ಸಿನಿಮಾ ವಿಚಾರಕ್ಕೆ ಬರುವುದಾದರೆ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರಕ್ಕೆ ನಾಯಕಿ. ಹೃತಿಕ್ ನಟನೆಯ ‘ಫೈಟರ್’ ಚಿತ್ರಕ್ಕೂ ಅವರು ಹೀರೋಯಿನ್ ಆಗಿದ್ದಾರೆ. ‘ಪ್ರಾಜೆಕ್ಟ್ ಕೆ’ ಸೇರಿ ಇನ್ನೂ ಹಲವು ಚಿತ್ರಗಳು ಅವರ ಕೈಯಲ್ಲಿವೆ. ರಣವೀರ್ ಸಿಂಗ್ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’, ‘ಸರ್ಕಸ್’ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
Published On - 5:26 pm, Mon, 11 July 22