ರಣವೀರ್ ಸಿಂಗ್ (Ranveer Singh) ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಅನುಭವ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಸೆಟ್ನಲ್ಲಿ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು, ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಅವರಿಗೆ ತಿಳಿದಿದೆ. ಈ ಮಧ್ಯೆ ರಣವೀರ್ ಸಿಂಗ್ ನಡೆದುಕೊಂಡ ರೀತಿಗೆ ಅನೇಕರು ಸಿಟ್ಟಾಗಿದ್ದಾರೆ. ಅವರು ಈ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ರಣವೀರ್ ಸಿಂಗ್ ಮಾಡಿದ್ದೇನು? ದಕ್ಷಿಣದ ಮಂದಿ ರಣವೀರ್ ಸಿಂಗ್ಗೆ ಬೈದಿದ್ದೇಕೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
‘ಹನುಮಾನ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ಅವರಿಗೆ ರಣವೀರ್ ಸಿಂಗ್ ಜೊತೆ ಸಿನಿಮಾ ಮಾಡೋ ಅವಕಾಶ ಸಿಕ್ಕಿತ್ತು. ಇದನ್ನು ಅವರು ಖುಷಿಯಿಂದ ಒಪ್ಪಿಕೊಂಡರು. ‘ರಾಕ್ಷಸ್’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿತ್ತು. ಅವರು ‘ಹನುಮಾನ್’ ಬಳಿಕ ತೆಲುಗಿನಲ್ಲಿ ‘ಜೈ ಹನುಮಾನ್’ ಮಾಡಬೇಕಿತ್ತು. ಆದರೆ, ರಣವೀರ್ ಸಿಂಗ್ ತೋರಿದ ಆಸಕ್ತಿ ನೋಡಿ ಆ ಸಿನಿಮಾ ಕೆಲಸಗಳನ್ನು ಮುಂದಕ್ಕೆ ಹಾಕಿ ‘ರಾಕ್ಷಸ್’ ಚಿತ್ರದ ಶೂಟ್ ಆರಂಭಿಸಿದರು ಅವರು.
ಕೆಲವು ವರದಿಗಳ ಪ್ರಕಾರ ರಣವೀರ್ ಸಿಂಗ್ ಅವರು ಸಿನಿಮಾದ ಸೆಟ್ಗೆ ಮೂರು ದಿನ ಹೋಗಿ ಬಂದರು. ಅವರು ಶೂಟ್ನಲ್ಲಿ ಭಾಗಿ ಆದರು. ಮೂರನೇ ದಿನ ರಾತ್ರಿ ಮನೆಗೆ ಹೋದವರು, ‘ನಾನು ಈ ಸಿನಮಾದ ಭಾಗವಾಗಲು ಸಾಧ್ಯವಿಲ್ಲ’ ಎಂದು ಮೆಸೇಜ್ ಹಾಕಿದರು. ಸಿನಿಮಾದಿಂದ ಹೊರ ನಡೆಯುತ್ತಿರುವುದು ಏಕೆ ಎನ್ನುವ ಬಗ್ಗೆ ಅವರು ಒಂದೇ ಒಂದು ಶಬ್ದವನ್ನು ಹೇಳಿಲ್ಲ.
ಇದನ್ನೂ ಓದಿ: ಮದುವೆ ಫೋಟೋ ಡಿಲೀಟ್ ಮಾಡಿದ ರಣವೀರ್ ಸಿಂಗ್; ದೀಪಿಕಾ ಜತೆ ಕಿರಿಕ್?
‘ರಣವೀರ್ಗೆ ಈ ಸಿನಿಮಾ ಮಾಡದಂತೆ ಕೆಲವರು ಕಿವಿಮಾತು ಹೇಳಿದ್ದರು’ ಅನ್ನೋದು ನಿರ್ದೇಶಕ ಪ್ರಶಾಂತ್ ಆರೋಪ. ಈ ಮಧ್ಯೆ ಈ ವಿಚಾರವನ್ನು ಕೆಲವರು ಮಾಧ್ಯಮಕ್ಕೆ ಲೀಕ್ ಮಾಡಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ‘ಇದೇನು ಗಂಭೀರ ವಿಚಾರ ಅಲ್ಲವೇ’ ಎಂದು ನಿರ್ದೇಶಕರು ರಣವೀರ್ನ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ‘ರಣವೀರ್ ಸಿಂಗ್ ಮಾಡಿರೋದು ಯಾರೂ ಒಪ್ಪದ ಕೆಲಸ’ ಎಂದು ಕೆಲವರು ಹೇಳಿದ್ದಾರೆ. ದಕ್ಷಿಣ ಭಾರತದವರು ನಟನಿಗೆ ಛೀಮಾರಿ ಹಾಕುತ್ತಿದ್ದಾರೆ. ‘ನಮ್ಮ ನಿರ್ದೇಶಕನ ಕರೆಸಿ ಅವಮಾನ ಮಾಡಲಾಗಿದೆ’ ಎಂದು ಕೂಡ ಹೇಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.