AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗಕ್ಕೆ ಕಾಲಿಡುವ ಬಯಕೆ ವ್ಯಕ್ತಪಡಿಸಿದ ಖ್ಯಾತ ಕ್ರಿಕೆಟಿಗ

ಕ್ರಿಕೆಟ್ ಹಾಗೂ ಚಿತ್ರರಂಗಕ್ಕೆ ಬಹಳ ಹತ್ತಿರದ ನಂಟು. ಹಲವು ಕ್ರಿಕೆಟ್ ಆಟಗಾರರು ಸಿನಿಮಾ ತಾರೆಯರನ್ನು ವಿವಾಹವಾಗಿದ್ದಾರೆ. ಕೆಲವು ಕ್ರಿಕೆಟಿಗರು ನಟರಾಗಿ, ನಿರ್ಮಾಪಕರೂ ಆಗಿದ್ದಾರೆ. ಇದೀಗ ಜನಪ್ರಿಯ ಕ್ರಿಕೆಟಿಗರೊಬ್ಬರು ಸಿನಿಮಾ ನಟನಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗಕ್ಕೆ ಕಾಲಿಡುವ ಬಯಕೆ ವ್ಯಕ್ತಪಡಿಸಿದ ಖ್ಯಾತ ಕ್ರಿಕೆಟಿಗ
ಮಂಜುನಾಥ ಸಿ.
|

Updated on: May 25, 2024 | 3:16 PM

Share

ಸಿನಿಮಾ ಹಾಗೂ ಕ್ರಿಕೆಟ್​ಗೆ (Cricket) ಬಹಳ ಹತ್ತಿರದ ನಂಟು. ಹಲವು ಕ್ರಿಕೆಟ್ ಆಟಗಾರರು ಸಿನಿಮಾ ತಾರೆಯರನ್ನು ಮದುವೆಯಾಗಿದ್ದಾರೆ. ಸಿನಿಮಾ ಉದ್ಯಮದವರು ಹಾಗೂ ಕ್ರಿಕೆಟಿಗರು ಸಾಕಷ್ಟು ಹತ್ತಿರದ ಬಂಧ ಹೊಂದಿದ್ದಾರೆ. ಹಲವು ಕ್ರಿಕೆಟ್ ತಾರೆಯರು ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಸಿನಿಮಾಗಳ ಕಡೆ ಬಂದಿದ್ದು ಇದೆ. ಕೆಲವರು ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಇದರ ನಡುವೆ ಇದೀಗ ಜನಪ್ರಿಯ ಕ್ರಿಕೆಟ್ ತಾರೆಯೊಬ್ಬರು ಕ್ರಿಕೆಟ್​ನಲ್ಲಿ ಸಕ್ರಿಯರಾಗಿರುವಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಯಕೆ ವ್ಯಕ್ತಪಡಿಸಿದ್ದಾರೆ.

ಗಂಭೀರ್ ಬಳಿಕ ಭಾರತ ತಂಡದ ಓಪನರ್ ಆಗಿ ದೊಡ್ಡ ಹೆಸರು ಮಾಡಿದ, ತಂಡವನ್ನು ಹಲವು ಬಾರಿ ಗೆಲ್ಲಿಸಿಕೊಟ್ಟ ಎಡಗೈ ಬ್ಯಾಟ್ಸ್​ಮನ್ ಶಿಖರ್ ಧವನ್ ಇದೀಗ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್​ನಲ್ಲಿ ಈಗಲೂ ಆಡುತ್ತಿರುವ, ಒಳ್ಳೆಯ ಪ್ರದರ್ಶನವನ್ನೇ ತೋರುತ್ತಿರುವ ಶಿಖರ್ ಧವನ್ ಸಿನಿಮಾ ನಟನೆಗೆ ಮನಸ್ಸು ಮಾಡಿದ್ದಾರೆ. ಈಗಾಗಲೇ ಜಿಯೋ ಸಿನಿಮಾಸ್​ನಲ್ಲಿ ಶೋ ಒಂದನ್ನು ಪ್ರಾರಂಭಿಸಿ ಮನೊರಂಜನಾ ಉದ್ಯಮಕ್ಕೆ ಕಾಲಿಟ್ಟಿರುವ ಶಿಖರ್, ಇದೀಗ ನಟನೆಯನ್ನೂ ಒಂದು ಕೈ ನೋಡುವ ಉಮೇದಿನಲ್ಲಿದ್ದಾರೆ.

ಇದನ್ನೂ ಓದಿ:‘ತಪ್ಪು ನನ್ನದೇ’: ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಸೋಲಿಗೆ ಕಾರಣ ತಿಳಿಸಿದ ಆಮಿರ್ ಖಾನ್​

ಆಮಿರ್ ಖಾನ್ ನಟಿಸಿ, ನಿರ್ದೇಶನವನ್ನೂ ಮಾಡಲಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾದ ಸೆಟ್​ನಲ್ಲಿ ಶಿಖರ್ ಧವನ್ ಕಾಣಿಸಿಕೊಂಡಿದ್ದು, ಈ ಸಿನಿಮಾದಲ್ಲಿ ಆಮಿರ್ ಖಾನ್ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈ ಬಗ್ಗೆ ಮಾತನಾಡಿರುವ ಧವನ್, ‘ಆಮಿರ್ ಖಾನ್ ನನ್ನ ಹಿರಿಯಣ್ಣನಂತೆ, ಅವರೊಟ್ಟಿಗೆ ಕೆಲ ಸಮಯ ಕಳೆಯಲೆಂದು ನಾನು ಸೆಟ್​ಗೆ ಹೋಗಿದ್ದೆ. ಒಂದೊಮ್ಮೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತ ಬಿಡುವುದಿಲ್ಲ. ನನಗೆ ಕ್ಯಾಮೆರಾ ಮುಂದೆ ಇರುವುದು ಇಷ್ಟ’ ಎಂದಿದ್ದಾರೆ.

ಶಿಖರ್ ಧವನ್​ ಸಿನಿಮಾದಲ್ಲಿ ನಟಿಸಿಲ್ಲ ಎಂದೇನೂ ಇಲ್ಲ. ಈ ಹಿಂದೆ ಸೊನಾಕ್ಷಿ ಸಿನ್ಹ ಹಾಗೂ ಹುಮಾ ಖುರೇಶಿ ನಟಿಸಿದ್ದ ಹಿಂದಿ ಸಿನಿಮಾ ‘ಡಬಲ್ ಎಕ್ಸ್​ಎಲ್’ ನಲ್ಲಿ ಶಿಖರ್ ಧವನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಜಿಯೋ ಸಿನಿಮಾಸ್​ ಒಟಿಟಿಯಲ್ಲಿ ‘ಧವನ ಕರೇಂಗೆ’ ಹೆಸರಿನ ಟಾಕ್ ಶೋ ಪ್ರಾರಂಭ ಮಾಡುತ್ತಿದ್ದಾರೆ. ಈ ಟಾಕ್ ಶೋಗೆ ಕ್ರಿಕೆಟ್ ಹಾಗೂ ಸಿನಿಮಾ ರಂಗದ ಹಲವು ಅತಿಥಿಗಳನ್ನು ಸಹ ಕರೆತರಲಿದ್ದಾರೆ. ಹಾಗೆಯೇ ಚಿತ್ರರಂಗಕ್ಕೆ ನಟನಾಗಿ ಎಂಟ್ರಿ ಕೊಡುವ ಉಮೇದು ಸಹ ಧವನ್​ಗೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ