‘ಡಾನ್ 3’ ಚಿತ್ರದಲ್ಲಿ ಶಾರುಖ್ ಬದಲು ರಣವೀರ್ ಸಿಂಗ್? ಈಗಲಾದರೂ ಸಿಗುತ್ತಾ ಗೆಲುವು?

ಶಾರುಖ್ ಖಾನ್ ‘ಡಾನ್’ ಫ್ರಾಂಚೈಸ್​ನಿಂದ ಹೊರ ನಡೆದಿರುವುದು ನಿರ್ದೇಶಕ ಫರ್ಹಾನ್ ಅಖ್ತರ್ ಅವರಿಗೆ ಬೇಸರ ತಂದಿದೆ. ಹಾಗಂತ ಅವರು ‘ಡಾನ್ 3’ ಚಿತ್ರವನ್ನು ಕೈಬಿಡುವ ನಿರ್ಧಾರಕ್ಕೆ ಬಂದಿಲ್ಲ.

‘ಡಾನ್ 3’ ಚಿತ್ರದಲ್ಲಿ ಶಾರುಖ್ ಬದಲು ರಣವೀರ್ ಸಿಂಗ್? ಈಗಲಾದರೂ ಸಿಗುತ್ತಾ ಗೆಲುವು?
ರಣವೀರ್-ಶಾರುಖ್

Updated on: May 19, 2023 | 11:01 AM

ಒಂದು ಸಿನಿಮಾ ಹಿಟ್ ಆದರೆ ಅದಕ್ಕೆ ಸೀಕ್ವೆಲ್​ಗಳನ್ನು ಮಾಡೋದು ಕಾಮನ್. ‘ಡಾನ್’ ಸರಣಿ ಹಿಟ್ ಆಗಿರುವುದರಿಂದ ‘ಡಾನ್ 2’ ಬಂತು. ‘ಡಾನ್ 3’ ಸಿನಿಮಾ (Don 3) ಮಾಡಲು ಸದ್ಯ ನಿರ್ದೇಶಕ ಫರ್ಹಾನ್ ಅಖ್ತರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮೊದಲೇ ಹೇಳಿದಂತೆ ‘ಡಾನ್ 3’ ಚಿತ್ರದಲ್ಲಿ ಶಾರುಖ್ ಖಾನ್ ನಟಿಸುತ್ತಿಲ್ಲ. ಅವರು ಈಗಾಗಲೇ ಸರಣಿಯಿಂದ ಹೊರ ನಡೆದಿದ್ದಾರೆ. ಈ ಜಾಗಕ್ಕೆ ರಣವೀರ್ ಸಿಂಗ್ (Ranveer Singh) ಅವರನ್ನು ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ರಣವೀರ್ ಸಿಂಗ್ ಅಭಿಮಾನಿಗಳಿಗೆ ಖುಷಿ ಆಗಿದೆ.

ಮೊದಲ ಚಿತ್ರದಲ್ಲಿ ನಟಿಸಿದವರು ಸೀಕ್ವೆಲ್​ನಲ್ಲೂ ನಟಿಸಬೇಕು ಎನ್ನುವ ನಿಯಮ ಏನೂ ಇಲ್ಲ. ‘ಭೂಲ್ ಭುಲಯ್ಯ’ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರು. ಅದರ ಸೀಕ್ವೆಲ್​ನಲ್ಲಿ ಕಾರ್ತಿಕ್​ ಆರ್ಯನ್ ನಟಿಸಿದರು. ಹೀರೋ ಬದಲಾದ ಹೊರತಾಗಿಯೂ ಎರಡನೇ ಪಾರ್ಟ್ ಗೆದ್ದಿದೆ. ಅದೇ ರೀತಿ ‘ಡಾನ್ 3’ ಚಿತ್ರದಲ್ಲಿ ಶಾರುಖ್ ಖಾನ್ ಬದಲು ರಣವೀರ್ ಸಿಂಗ್ ನಟಿಸಲಿದ್ದಾರೆ. ಹೀರೋ ಬದಲಾವಣೆ ಸೋಲು-ಗೆಲುವನ್ನು ನಿರ್ಧರಿಸುವುದಿಲ್ಲ ಎನ್ನುವ ನಂಬಿಕೆ ನಿರ್ದೇಶಕರದ್ದು.

ಶಾರುಖ್ ಖಾನ್ ‘ಡಾನ್’ ಫ್ರಾಂಚೈಸ್​ನಿಂದ ಹೊರ ನಡೆದಿರುವುದು ನಿರ್ದೇಶಕ ಫರ್ಹಾನ್ ಅಖ್ತರ್ ಅವರಿಗೆ ಬೇಸರ ತಂದಿದೆ. ಹಾಗಂತ ಅವರು ‘ಡಾನ್ 3’ ಚಿತ್ರವನ್ನು ಕೈಬಿಡುವ ನಿರ್ಧಾರಕ್ಕೆ ಬಂದಿಲ್ಲ. ಬಾಲಿವುಡ್​ನ ಎ ಸ್ಟಾರ್ ಹೀರೋಗಳನ್ನು ಇಟ್ಟುಕೊಂಡು ಅವರು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಇದಕ್ಕೆ ರಣವೀರ್ ಸಿಂಗ್ ಸೂಕ್ತ ಎಂದು ಅವರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಜೆಟ್​ ಹಿಂದಿ ಚಿತ್ರದಿಂದ ರಣವೀರ್​ ಸಿಂಗ್​ ಔಟ್​; ಅಲ್ಲು ಅರ್ಜುನ್​, ಜೂ. ಎಟಿಆರ್​ಗೆ ಚಾನ್ಸ್​?

ರಣವೀರ್ ಸಿಂಗ್ ಅವರಿಗೆ ಇತ್ತೀಚೆಗೆ ಗೆಲುವು ಕೈ ಹಿಡಿಯುತ್ತಿಲ್ಲ. ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ‘83’ ಸಿನಿಮಾ ವಿಮರ್ಶೆಯಲ್ಲಿ ಗೆದ್ದರೂ ಹಣ ಮಾಡಲಿಲ್ಲ. ‘ಜಯೇಶ್​ಭಾಯ್ ಜೋರ್ದಾರ್’ ಸಿನಿಮಾ ಕೂಡ ಹೀನಾಯ ಸೋಲು ಕಂಡಿತು. ಈಗ ಅವರಿಗೆ ತುರ್ತಾಗಿ ಒಂದು ಗೆಲುವು ಬೇಕಿದೆ. ಹೀಗಾಗಿ, ಒಳ್ಳೊಳ್ಳೆಯ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us