ಬಿಗ್​ ಬಜೆಟ್​ ಹಿಂದಿ ಚಿತ್ರದಿಂದ ರಣವೀರ್​ ಸಿಂಗ್​ ಔಟ್​; ಅಲ್ಲು ಅರ್ಜುನ್​, ಜೂ. ಎಟಿಆರ್​ಗೆ ಚಾನ್ಸ್​?

ಟಾಲಿವುಡ್​ನ ಸ್ಟಾರ್​ ನಟರಿಗೆ ಈಗ ಬಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಾಗಿದೆ. ಒಂದು ಬಹುನಿರೀಕ್ಷಿತ ಸಿನಿಮಾಗೆ ಹಿಂದಿ ಹೀರೋಗಳ ಬದಲು ಅಲ್ಲು ಅರ್ಜುನ್​ ಮತ್ತು ಜೂ. ಎನ್​ಟಿಆರ್​ ಅವರನ್ನು ಪರಿಗಣಿಸಲಾಗುತ್ತಿದೆ.

ಬಿಗ್​ ಬಜೆಟ್​ ಹಿಂದಿ ಚಿತ್ರದಿಂದ ರಣವೀರ್​ ಸಿಂಗ್​ ಔಟ್​; ಅಲ್ಲು ಅರ್ಜುನ್​, ಜೂ. ಎಟಿಆರ್​ಗೆ ಚಾನ್ಸ್​?
ಜೂ. ಎನ್​ಟಿಆರ್​, ರಣವೀರ್​ ಸಿಂಗ್​, ಅಲ್ಲು ಅರ್ಜುನ್​
Follow us
ಮದನ್​ ಕುಮಾರ್​
|

Updated on:Apr 16, 2023 | 10:49 AM

ನಟ ರಣವೀರ್​ ಸಿಂಗ್​ (Ranveer Singh) ಅವರಿಗೆ ಈಗ ಟೈಮ್​ ಚೆನ್ನಾಗಿಲ್ಲ. ಒಂದಷ್ಟು ವರ್ಷಗಳ ಹಿಂದೆ ‘ಪದ್ಮಾವತ್​’, ‘ಬಾಜಿರಾವ್​ ಮಸ್ತಾನಿ’ ಮುಂತಾದ ಸೂಪರ್​ ಹಿಟ್​ ಸಿನಿಮಾ ನೀಡಿದ್ದ ಅವರು ಇತ್ತೀಚೆಗಿನ ವರ್ಷಗಳಲ್ಲಿ ಸತತ ಸೋಲು ಕಾಣುತ್ತಿದ್ದಾರೆ. ‘83’, ‘ಜಯೇಶ್​ ಭಾಯ್​ ಜೋರ್ದಾರ್​’, ‘ಸರ್ಕಸ್​’ ಸಿನಿಮಾಗಳ ಮೂಲಕ ಅವರು ಹ್ಯಾಟ್ರಿಕ್​ ಸೋಲು ಕಂಡಿದ್ದಾರೆ. ಇದರಿಂದ ಅವರ ವೃತ್ತಿಜೀವನದ ಮೇಲೆ ಹೊಡೆತ ಬಿದ್ದಿದೆ. ಮೂಲಗಳ ಪ್ರಕಾರ ರಣವೀರ್​ ಸಿಂಗ್​ ನಟಿಸಬೇಕಿದ್ದ ಒಂದು ಬಿಗ್​ ಬಜೆಟ್​ ಪ್ರಾಜೆಕ್ಟ್​ ಈಗ ತೆಲುಗು ನಟರ ಪಾಲಾಗುತ್ತಿದೆ. ರಣವೀರ್​ ಸಿಂಗ್​ ಬದಲಿಗೆ ಜೂನಿಯರ್​ ಎನ್​ಟಿಆರ್​ (Jr NTR) ಅಥವಾ ಅಲ್ಲು ಅರ್ಜುನ್​ (Allu Arjun) ಅವರು ಅವಕಾಶ ಬಾಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಾಲಿವುಡ್​ ಮತ್ತು ಟಾಲಿವುಡ್​ ಅಂಗಳದಲ್ಲಿ ಗುಸುಗುಸು ಕೇಳಿಬಂದಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ದಿ ಇಮ್ಮಾರ್ಟಲ್​ ಅಶ್ವತ್ಥಾಮ’ ಸಿನಿಮಾಗೆ ವಿಕ್ಕಿ ಕೌಶಲ್​ ಹೀರೋ ಆಗಬೇಕಿತ್ತು. ಆದರೆ ಅವರನ್ನು ಚಿತ್ರದಿಂದ ಹೊರಗಿಡಲಾಯಿತು. ಬಳಿಕ ರಣವೀರ್​ ಸಿಂಗ್​ ಹೆಸರು ಕೇಳಿಬಂತು. ಈಗ ಅವರೂ ಕೂಡ ಚಿತ್ರತಂಡದಿಂದ ಔಟ್​ ಆಗಿದ್ದಾರೆ ಎನ್ನಲಾಗುತ್ತಿದೆ. ರಣವೀರ್​ ಸಿಂಗ್​ ಬದಲಿಗೆ ಟಾಲಿವುಡ್​ ನಟರಿಗೆ ಮಣೆಹಾಕಲು ನಿರ್ಧರಿಸಲಾಗುತ್ತಿದೆ.

ಇದನ್ನೂ ಓದಿ: ರಣವೀರ್​ ಸಿಂಗ್​ ನಟನೆಯ ‘ಸರ್ಕಸ್​’ ಕರಾಬು ಎಂದ ಫ್ಯಾನ್ಸ್​; ಸೋಲಿನ ಸಾಲಿಗೆ ಮತ್ತೊಂದು ಸಿನಿಮಾ

ಇದನ್ನೂ ಓದಿ
Image
‘ಸೈಮಾ’ ಅವಾರ್ಡ್ಸ್​ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಅಲ್ಲು ಅರ್ಜುನ್​; ವಿಡಿಯೋ ನೋಡಿ
Image
Pushpa 2: ಮತ್ತೆ ಫೀಲ್ಡ್​ಗೆ ಇಳಿದ ಪುಷ್ಪರಾಜ್​; ಇಲ್ಲಿದೆ ರಶ್ಮಿಕಾ, ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​
Image
Allu Arjun: ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್​ ಲುಕ್​ ಹೀಗಿರುತ್ತಾ? ವೈರಲ್​ ಆಗಿದೆ ಹೊಸ ಫೋಟೋ
Image
ಅಲ್ಲು ಅರ್ಜುನ್​ಗೆ ಬಾಡಿ ಶೇಮಿಂಗ್; ‘ವಡಾಪಾವ್ ಲುಕ್​’ ಎಂದು ಟೀಕಿಸಿದ ಫ್ಯಾನ್ಸ್​

ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಪೈಪೋಟಿ ನೀಡಲು ಜಿಯೋ ಸ್ಟುಡಿಯೋಸ್​ ಸಜ್ಜಾಗಿದೆ. ಹಲವು ಪ್ರಾಜೆಕ್ಟ್​ಗಳನ್ನು ಈ ಸಂಸ್ಥೆ ಘೋಷಿಸಿದೆ. ಬಹುನಿರೀಕ್ಷಿತ ‘ದಿ ಇಮ್ಮಾರ್ಟಲ್​ ಅಶ್ವತ್ಥಾಮ’ ಸಿನಿಮಾವನ್ನು ಈ ಸಂಸ್ಥೆ ನಿರ್ಮಾಣ ಮಾಡಲಿದೆ. ಮೊದಲು ಬೇರೆ ನಿರ್ಮಾಪಕರು ಇದ್ದರು. ಆದರೆ ಹಣಕಾಸಿನ ತೊಂದರೆಯಿಂದ ಅವರು ಹಿಂದೆ ಸರಿದ ಬಳಿಕ ಈ ಸಿನಿಮಾವನ್ನು ನಿರ್ಮಿಸುವ ಹೊಣೆಯನ್ನು ಜಿಯೋ ಸ್ಟುಡಿಯೋಸ್ ಹೊತ್ತುಕೊಂಡಿದೆ.

ಇದನ್ನೂ ಓದಿ: ರಣವೀರ್​ ಸಿಂಗ್​-ದೀಪಿಕಾ ಬೇರೆ ಆಗ್ತಾರಾ? ಫ್ಯಾನ್ಸ್​ ಆತಂಕಕ್ಕೆ ಕಾರಣವಾಯ್ತು ಆ ಒಂದು ಟ್ವೀಟ್​

‘ದಿ ಇಮ್ಮಾರ್ಟಲ್​ ಅಶ್ವತ್ಥಾಮ’ ಚಿತ್ರಕ್ಕೆ ‘ಉರಿ’ ಸಿನಿಮಾ ಖ್ಯಾತಿಯ ಅದಿತ್ಯ ಧಾರ್​ ಅವರು ನಿರ್ದೇಶನ ಮಾಡಲಿದ್ದಾರೆ. ಹೀರೋ ಆಯ್ಕೆಯ ವಿಚಾರದಲ್ಲಿ ಅವರ ಮತ್ತು ನಿರ್ಮಾಣ ಸಂಸ್ಥೆ ನಡುವೆ ಚಕಮಕಿ ನಡೆಯುತ್ತಿದೆ. ಜೂನಿಯರ್​ ಎನ್​ಟಿಆರ್​ ಅಥವಾ ಅಲ್ಲು ಅರ್ಜುನ್​ ಹೀರೋ ಆಗಿ ನಟಿಸಿದರೆ ಉತ್ತಮ ಎಂಬುದು ನಿರ್ಮಾಣ ಸಂಸ್ಥೆಯ ಅಭಿಪ್ರಾಯ ಎನ್ನಲಾಗಿದೆ. ಅಂತಿಮವಾಗಿ ಯಾರು ಆಯ್ಕೆ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ‘ವಾರ್​ 2’ ಚಿತ್ರಕ್ಕಾಗಿ ಬಾಲಿವುಡ್ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಜೂನಿಯರ್ ಎನ್​ಟಿಆರ್

‘ಪುಷ್ಪ’ ಸಿನಿಮಾದ ಗೆಲುವಿನ ಬಳಿಕ ಅಲ್ಲು ಅರ್ಜುನ್​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಅದೇ ರೀತಿ ‘ಆರ್​ಆರ್​ಆರ್​’ ಸಿನಿಮಾ ಸೂಪರ್​ ಹಿಟ್​ ಆಗಿ, ಆಸ್ಕರ್​ ಪ್ರಶಸ್ತಿಯನ್ನೂ ಬಾಚಿಕೊಂಡ ಬಳಿಕ ಜೂನಿಯರ್​ ಎನ್​ಟಿಆರ್​ ಖ್ಯಾತಿ ಹೆಚ್ಚಾಗಿದೆ. ಈ ಸ್ಟಾರ್​ ನಟರಿಗೆ ಈಗ ಬಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:49 am, Sun, 16 April 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್