‘ಧುರಂಧರ್ 2’ ಕನ್ನಡ ಟ್ರೇಲರ್: ಕರ್ನಾಟಕದಲ್ಲಿ ಮೋಡಿ ಮಾಡುತ್ತಾ ರಣವೀರ್ ಸಿಂಗ್ ಸಿನಿಮಾ?

ಮಾರ್ಚ್ 7ರಂದು ಹಿಂದಿಯಲ್ಲಿ ಮಾತ್ರ ‘ಧುರಂಧರ್ 2’ ಟ್ರೇಲರ್ ರಿಲೀಸ್ ಮಾಡಲಾಗಿತ್ತು. ಒಂದು ದಿನ ತಡವಾಗಿ ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಬಾರಿ ದಕ್ಷಿಣ ಭಾರತದಲ್ಲಿ ಹೆಚ್ಚು ಕಲೆಕ್ಷನ್ ಮಾಡುವ ಗುರಿಯನ್ನು ಈ ಸಿನಿಮಾ ಹೊಂದಿದೆ.

‘ಧುರಂಧರ್ 2’ ಕನ್ನಡ ಟ್ರೇಲರ್: ಕರ್ನಾಟಕದಲ್ಲಿ ಮೋಡಿ ಮಾಡುತ್ತಾ ರಣವೀರ್ ಸಿಂಗ್ ಸಿನಿಮಾ?
Ranveer Singh

Updated on: Mar 08, 2026 | 2:15 PM

ಕಳೆದ ವರ್ಷ ‘ಧುರಂಧರ್’ ಸಿನಿಮಾ ಕೇವಲ ಹಿಂದಿಯಲ್ಲಿ ಬಿಡುಗಡೆ ಆಗಿತ್ತು. ಹಾಗಿದ್ದರೂ ಕೂಡ ಆ ಸಿನಿಮಾಗೆ ದೇಶಾದ್ಯಂತ ಮೆಚ್ಚುಗೆ ಸಿಕ್ಕಿತ್ತು. ಈಗ ಅದರ ಸೀಕ್ವೆಲ್ ಬರುತ್ತಿದೆ. ‘ಧುರಂಧರ್ 2’ (Dhurandhar 2) ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ ಎಂಬುದು ವಿಶೇಷ. ಹಿಂದಿ ಜೊತೆಗೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲು ಪ್ಲ್ಯಾನ್ ಮಾಡಲಾಗಿದೆ. ಮಾರ್ಚ್ 19ರಂದು ಈ ಸಿನಿಮಾ ರಿಲೀಸ್ ಆಗಲಿದೆ.

ಮಾರ್ಚ್ 18ರ ಸಂಜೆಯೇ ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶುರುವಾಗಲಿದೆ. ಈ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಟಿಕೆಟ್ ಬುಕಿಂಗ್ ಶುರುವಾದ ಕೆಲವೇ ಗಂಟೆಗಳಲ್ಲಿ ಬಹುಕೋಟಿ ರೂಪಾಯಿ ಬೆಲೆಯ ಟಿಕೆಟ್​ಗಳು ಮಾರಾಟ ಆಗಿವೆ. ಬಾಕ್ಸ್ ಆಫೀಸ್​​ನಲ್ಲಿ ಮೊದಲ ದಿನವೇ ಈ ಸಿನಿಮಾ ಹೊಸ ಇತಿಹಾಸ ಬರೆಯುವ ಲಕ್ಷಣ ಕಾಣಿಸುತ್ತಿದೆ.

‘ಧುರಂಧರ್ 2’ ಸಿನಿಮಾಗೆ ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್, ಸಂಜಯ್ ದತ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಅರ್ಜುನ್ ರಾಮ್​ಪಾಲ್ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಮೊದಲ ಪಾರ್ಟ್ ಭಾರಿ ಕಲೆಕ್ಷನ್ ಮಾಡಿದ್ದರಿಂದ ಸೀಕ್ವೆಲ್ ಮೇಲೆ ನಿರೀಕ್ಷೆ ಜಾಸ್ತಿ ಇದೆ. ಟ್ರೇಲರ್ ನೋಡಿದ ಬಳಿಕ ನಿರೀಕ್ಷೆ ಡಬಲ್ ಆಗಿದೆ.

‘ಧುರಂಧರ್ 2’ ಕನ್ನಡ ಟ್ರೇಲರ್:

Dhurandhar The Revenge Official Kannada Trailer | Ranveer S | Aditya D | In Cinemas 19 March 2026

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾದ ಜೊತೆ ‘ಟಾಕ್ಸಿಕ್’ ಸಿನಿಮಾ ಕೂಡ ಬಿಡುಗಡೆ ಆಗಬೇಕಿತ್ತು. ಆದರೆ ಇಸ್ರೇಲ್, ಅಮೆರಿಕಾ, ಇರಾನ್ ನಡುವಿನ ಯುದ್ಧದ ಪರಿಣಾಮದಿಂದಾಗಿ ‘ಟಾಕ್ಸಿಕ್’ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಯಿತು. ಆದ್ದರಿಂದ ‘ಧುರಂಧರ್ 2’ ಸಿನಿಮಾಗೆ ದೊಡ್ಡ ಅನುಕೂಲ ಆಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಅಡ್ವಾನ್ಸ್ ಬುಕಿಂಗ್: ಬೆಂಗಳೂರಿನಲ್ಲಿ ಗಗನಕ್ಕೇರಿದ ಟಿಕೆಟ್ ಬೆಲೆ

ಕರ್ನಾಟಕದಲ್ಲಿ ‘ಧುರಂಧರ್ 2’ ಸಿನಿಮಾಗೆ ಟಫ್ ಸ್ಪರ್ಧೆ ನೀಡಲು ಯಾವುದೇ ಸಿನಿಮಾಗಳು ಇಲ್ಲ. ಹಾಗಾಗಿ ಕರ್ನಾಟಕದ ಮಾರುಕಟ್ಟೆಯಲ್ಲಿ ಈ ಚಿತ್ರಕ್ಕೆ ಬಾರಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಟಿಕೆಟ್ ಬೆಲೆ ಗಗನಕ್ಕೇರಿದೆ. ಆದರೂ ಕೂಡ ಜನರು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ. ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಮಾಯಿ ಆಗಲಿದೆ ಎಂಬುದಕ್ಕೆ ಈ ಮೂಲಕ ಸುಳಿವು ಸಿಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us