ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಅನೇಕ ಗಾಸಿಪ್ಗಳು ಹಬ್ಬುತ್ತ ಇರುತ್ತವೆ. ಅದರಲ್ಲೂ ಲವ್, ಬ್ರೇಕಪ್, ಮದುವೆ, ವಿಚ್ಛೇದನದ (Divorce) ವಿಚಾರದಲ್ಲಿ ವದಂತಿಗಳಿಗೆ ಲೆಕ್ಕವೇ ಇಲ್ಲ. ಇತ್ತೀಚೆಗೆ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ಅವರ ದಾಂಪತ್ಯದ ಬಗ್ಗೆ ಗಾಸಿಪ್ ಮಂದಿಗೆ ಆಸಕ್ತಿ ಕೆರಳಿದೆ. ಈ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ವದಂತಿ ಹಬ್ಬಿಸಲಾಗಿದೆ. ಆದಷ್ಟು ಬೇಗ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ ಅವರು ಡಿವೋರ್ಸ್ ಪಡೆಯಬಹುದು ಎಂದೆಲ್ಲ ಗಾಳಿಸುದ್ದಿ ಹರಡಿಸಲಾಗಿತ್ತು. ಆದರೆ ಆ ವದಂತಿಯನ್ನು ರಣವೀರ್ ಸಿಂಗ್ ತಳ್ಳಿ ಹಾಕಿದ್ದಾರೆ. ಪತ್ನಿ ಜೊತೆಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಜುಲೈ 6ರಂದು ರಣವೀರ್ ಸಿಂಗ್ ಅವರ ಜನ್ಮದಿನ. ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಆದರೆ ದೀಪಿಕಾ ಪಡುಕೋಣೆ ಅವರ ಕಡೆಯಿಂದ ಯಾವುದೇ ವಿಶ್ ಬರಲಿಲ್ಲ. ಇದು ನೆಟ್ಟಿಗರ ಅನುಮಾನಕ್ಕೆ ಕಾರಣ ಆಯಿತು. ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ವಿಶ್ ಮಾಡಿಕೊಳ್ಳುತ್ತಿದ್ದ ಈ ದಂಪತಿ ಈಗ ಸೈಲೆಂಟ್ ಆಗಿದ್ದು ನೋಡಿ ಎಲ್ಲರಿಗೂ ಅನುಮಾನ ಮೂಡಿತು. ಆದರೆ ಸ್ವಲ್ಪ ಸಮಯದಲ್ಲೇ ಅದು ಕ್ಲಿಯರ್ ಆಯಿತು.
ಇದನ್ನೂ ಓದಿ: Asin: ಡಿವೋರ್ಸ್ ವದಂತಿಗೆ ತೆರೆ ಎಳೆದ ನಟಿ ಆಸಿನ್; ನಿಟ್ಟುಸಿರು ಬಿಟ್ಟ ಅಭಿಮಾನಿಗಳು
ಪತಿ ರಣವೀರ್ ಸಿಂಗ್ ಜನ್ಮದಿನಕ್ಕೆ ಶುಭ ಕೋರಲು ದೀಪಿಕಾ ಪಡುಕೋಣೆ ಮರೆತಿದ್ದರು ಎನಿಸುತ್ತದೆ. ಒಂದು ದಿನ ತಡವಾಗಿ, ಅಂದರೆ ಜುಲೈ 7ರ ರಾತ್ರಿ ದೀಪಿಕಾ ಅವರು ಪತಿಗೆ ಹುಟ್ಟುಹಬ್ಬದ ವಿಶ್ ಮಾಡಿದರು. ಅಲ್ಲಿಗೆ ಎಲ್ಲರ ಅನುಮಾನಕ್ಕೆ ತೆರೆ ಬಿತ್ತು. ಅದೂ ಸಾಲದೆಂಬಂತೆ ಈಗ ರಣವೀರ್ ಸಿಂಗ್ ಕೂಡ ಪತ್ನಿಗೆ ಧನ್ಯವಾದ ತಿಳಿಸುವ ಮೂಲಕ ಎಲ್ಲ ವದಂತಿಗಳಿಗೆ ಪೂರ್ಣವಿರಾಮ ಹಾಕಿದ್ದಾರೆ.
ಇದನ್ನೂ ಓದಿ: Ranveer Singh: ‘ವೈರಲ್ ಆದ ಆ ಫೋಟೋ ನಂದಲ್ಲ’: ವಿಚಾರಣೆ ವೇಳೆ ಶಾಕಿಂಗ್ ವಿಚಾರ ತಿಳಿಸಿದ ರಣವೀರ್ ಸಿಂಗ್
ದೀಪಿಕಾ ಪಡುಕೋಣೆ ಜೊತೆ ಖುಷಿಯಾಗಿ ಕಾಲ ಕಳೆದ ಫೋಟೋವನ್ನು ರಣವೀರ್ ಸಿಂಗ್ ಅವರು ಶೇರ್ ಮಾಡಿಕೊಂಡಿದ್ದಾರೆ. ‘ಹುಟ್ಟುಹಬ್ಬದ ಶುಭ ಕೋರಿದ್ದಕ್ಕೆ ಧನ್ಯವಾದಗಳು’ ಎಂಬ ಕ್ಯಾಪ್ಷನ್ನೊಂದಿಗೆ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ದಂಪತಿ ನಡುವೆ ಯಾವುದೇ ಕಿರಿಕ್ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.