ಕರಣ್ ಜೋಹರ್ (Karan Johar) ಅವರು ಬಾಲಿವುಡ್ನ ಪ್ರಭಾವಿ ವ್ಯಕ್ತಿ. ಅನೇಕರಿಗೆ ಅವರೇ ಗಾಡ್ ಫಾದರ್. ಸ್ಟಾರ್ ಕಿಡ್ಗಳನ್ನು ಲಾಂಚ್ ಮಾಡುವಲ್ಲಿ ಕರಣ್ ಜೋಹರ್ ಫೇಮಸ್. ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿರುವ ಅವರು ಹಲವರಿಗೆ ಅವಕಾಶ ನೀಡುತ್ತಾರೆ. ನಿರ್ದೇಶಕನಾಗಿ, ನಿರೂಪಕನಾಗಿಯೂ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಅವರು 50ನೇ ವರ್ಷಕ್ಕೆ ಕಾಲಿಟ್ಟರು. ಕರಣ್ ಜೋಹರ್ ಬರ್ತ್ಡೇ (Karan Johar Birthday) ಪಾರ್ಟಿ ಎಂದರೆ ಬಿ-ಟೌನ್ ಸೆಲೆಬ್ರಿಟಿಗಳ ಪಾಲಿಗೆ ಏನೋ ಒಂಥರಾ ಕ್ರೇಜ್. ಪ್ರತಿ ವರ್ಷ ಅವರು ಭರ್ಜರಿಯಾಗಿ ಔಟಣ ಕೂಟ ಏರ್ಪಡಿಸುತ್ತಾರೆ. ಅದರಲ್ಲಿ ಅನೇಕ ಮಂದಿ ಸೆಲೆಬ್ರಿಟಿಗಳು ಭಾಗಿ ಆಗುತ್ತಾರೆ. ಈ ಬಾರಿ ನಟಿ ರಶ್ಮಿಕಾ ಮಂದಣ್ಣ ಅವರಿಗೂ ಈ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಆದರೆ ಕರಣ್ ಜೋಹರ್ ಒಂದು ಕಂಡೀಷನ್ ಹಾಕಿದ್ದರು ಎನ್ನಲಾಗಿದೆ. ಏನದು? ಯಾವುದೇ ಬಾಡಿಗಾರ್ಡ್ಸ್ ಇಲ್ಲದೇ ಈ ಪಾರ್ಟಿಗೆ ಬರಬೇಕು. ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಮಾತ್ರವಲ್ಲದೇ ಬಾಲಿವುಡ್ನ ಎಲ್ಲ ಸೆಲೆಬ್ರಿಟಿಗಳಿಗೂ ಕರಣ್ ಜೋಹರ್ ಈ ಕಂಡೀಷನ್ ಹಾಕಿದ್ದರು ಎಂದು ‘ಪಿಂಕ್ ವಿಲ್ಲಾ’ ವೆಬ್ಸೈಟ್ ವರದಿ ಮಾಡಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೊರಗಡೆ ಹೋಗುವಾಗ ಬಾಡಿಗಾರ್ಡ್ಸ್ ಇಟ್ಟುಕೊಳ್ಳುತ್ತಾರೆ. ಜನಜಂಗುಳಿ ಪ್ರದೇಶಗಳಲ್ಲಿ ಅಭಿಮಾನಿಗಳು ಮುಗಿಬೀಳುತ್ತಾರೆ ಎಂಬ ಕಾರಣಕ್ಕೆ ಬಾಡಿಗಾರ್ಡ್ಸ್ ಇಲ್ಲದೇ ಯಾರೂ ಕೂಡ ವಿಶೇಷ ಸಮಾರಂಭಗಳಿಗೆ ತೆರಳುವುದಿಲ್ಲ. ಆದರೆ ಈ ಬಾರಿ ಕರಣ್ ಜೋಹರ್ ಅವರು ಎಲ್ಲರಲ್ಲೂ ಒಂದು ಮನವಿ ಮಾಡಿಕೊಂಡಿದ್ದರು. ಬಾಡಿಗಾರ್ಡ್ಸ್ ಇಲ್ಲದೇ ಬಂದರೆ ವಾತಾವರಣ ಚೆನ್ನಾಗಿ ಇರುತ್ತದೆ ಎಂಬುದು ಅವರ ಅಭಿಪ್ರಾಯ. ಅವರ ಮನವಿಗೆ ಎಲ್ಲರೂ ಸ್ಪಂದಿಸಿದರು ಎನ್ನಲಾಗಿದೆ. ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್, ಶಾರುಖ್ ಖಾನ್ ಮುಂತಾದವರು ಕೂಡ ಅಂಗರಕ್ಷಕರನ್ನು ತಮ್ಮೊಂದಿಗೆ ಕರೆತರದೇ ಪಾರ್ಟಿಯಲ್ಲಿ ಪಾಲ್ಗೊಂಡರು ಎಂದು ವರದಿ ಪ್ರಕಟ ಆಗಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಖಂಡಿತಾ ಇಷ್ಟ ಆಗಲಿದೆ ರಕ್ಷಿತ್ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ; ಕಾರಣ ಏನು?
ರಶ್ಮಿಕಾ ಮಂದಣ್ಣ ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ನಿಂದಲೂ ಅವರಿಗೆ ಹಲವು ಅವಕಾಶಗಳು ಹರಿದು ಬರುತ್ತಿವೆ. ‘ಮಿಷನ್ ಮಜ್ನು’, ‘ಗುಡ್ಬೈ’ ಚಿತ್ರಗಳಲ್ಲಿ ನಟಿಸುವ ಮೂಲಕ ಅವರು ಬಾಲಿವುಡ್ ಮಂದಿಗೆ ಹೆಚ್ಚು ಹತ್ತಿರ ಆಗುತ್ತಿದ್ದಾರೆ. ಹಾಗಾಗಿ ಅವರಿಗೆ ಕರಣ್ ಜೋಹರ್ ಬರ್ತ್ಡೇ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಇತ್ತ ದಕ್ಷಿಣ ಭಾರತದಲ್ಲೂ ರಶ್ಮಿಕಾ ತುಂಬ ಬ್ಯುಸಿ ಆಗಿದ್ದಾರೆ. ಅವರು ನಟಿಸುತ್ತಿರುವ ‘ಪುಷ್ಪ 2’ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮನೆ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.