ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಹೊಂದಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ತೆರೆಕಂಡ ‘ಅನಿಮಲ್’ ಸಿನಿಮಾ (Animal Movie) ಸೂಪರ್ ಹಿಟ್ ಆದ ಬಳಿಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ಈಗ ಅವರು ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಇಷ್ಟೆಲ್ಲ ಡಿಮ್ಯಾಂಡ್ ಹೊಂದಿರುವ ರಶ್ಮಿಕಾ ಮಂದಣ್ಣ ಅವರು ಎಷ್ಟು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕಾಡುತ್ತಿದೆ. ಅವರು 4.5 ಕೋಟಿ ರೂಪಾಯಿ (Rashmika Mandanna Remuneration) ಪಡೆಯುತ್ತಾರೆ ಎಂಬ ಸುದ್ದಿ ಹಬ್ಬಿದೆ. ಅದಕ್ಕೆ ಈಗ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇನ್ಮೇಲೆ ತಾವು ಇಷ್ಟೇ ಕೇಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಬಗ್ಗೆ ಮಾಧ್ಯಮ ಸಂಸ್ಥೆಯೊಂದು ವರದಿ ಪ್ರಕಟ ಮಾಡಿದೆ. ‘ರಶ್ಮಿಕಾ ಅವರು ಅನಿಮಲ್ ಸಿನಿಮಾದ ಯಶಸ್ಸಿನ ಬಳಿಕ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಆಪ್ತ ಮೂಲಗಳ ಪ್ರಕಾರ ಪ್ರತಿ ಸಿನಿಮಾಗೆ ಅವರು ಈಗ 4ರಿಂದ 4.5 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ’ ಎಂದು ಪೋಸ್ಟ್ ಮಾಡಲಾಗಿದೆ. ಅದು ರಶ್ಮಿಕಾ ಗಮನಕ್ಕೆ ಬಂದಿದೆ. ಅದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ಇದನ್ನೆಲ್ಲ ಯಾರು ಹೇಳುತ್ತಾರೆ ಅಂತ ನನಗೆ ಆಶ್ಚರ್ಯ ಆಗುತ್ತದೆ. ಇದನ್ನು ನೋಡಿದ ಬಳಿಕ ನಿಜಕ್ಕೂ ನಾನು ಈ ಮಾತನ್ನು ಪರಿಗಣಿಸಬೇಕು ಎನಿಸುತ್ತಿದೆ. ಯಾಕೆ ಎಂದು ನಿರ್ಮಾಪಕರು ಪ್ರಶ್ನಿಸಿದರೆ, ಮಾಧ್ಯಮದವರು ಇದನ್ನೆಲ್ಲ ಹೇಳುತ್ತಿದ್ದಾರೆ ಸರ್, ಅವರ ಮಾತುಗಳಿಗೆ ತಕ್ಕಂತೆ ನಾನು ಬದುಕಬೇಕಲ್ಲವೇ? ನಾನೇನು ಮಾಡಲಿ ಅಂತ ಕೇಳುತ್ತೇನೆ’ ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ. ಈ ಮಾತುಗಳನ್ನು ಅವರು ತಮಾಷೆಗೆ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ:
BUZZ⚠️#RashmikaMandanna Increased her Remuneration again after #Animal success 🏃
From inside reports, Currently she’s charging around 4Cr – 4.5cr per film pic.twitter.com/amyyz5iTEP
— Filmy Bowl (@FilmyBowl) February 6, 2024
ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಹೆಚ್ಚುತ್ತಿರುವುದಂತೂ ನಿಜ. ಆದರೆ ಅದು ಎಷ್ಟು ಎಂಬುದನ್ನು ಅವರು ಬಾಯಿಬಿಟ್ಟಿಲ್ಲ. ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ಪಡೆದ ರಶ್ಮಿಕಾ ಅವರು ನಂತರ ಪರಭಾಷೆಗೆ ಕಾಲಿಟ್ಟರು. ಅಲ್ಲಿ ಅವರಿಗೆ ದೊಡ್ಡ ದೊಡ್ಡ ಸಿನಿಮಾಗಳು ಸಿಗಲಾರಂಭಿಸಿದವು. ವಿಜಯ್ ದೇವರಕೊಂಡ, ದಳಪತಿ ವಿಜಯ್, ಅಮಿತಾಭ್ ಬಚ್ಚನ್, ಸಿದ್ದಾರ್ಥ್ ಮಲ್ಹೋತ್ರಾ, ರಣಬೀರ್ ಕಪೂರ್, ಅಲ್ಲು ಅರ್ಜುನ್, ಮಹೇಶ್ ಬಾಬು ಅವರಂತಹ ಸ್ಟಾರ್ ಕಲಾವಿದರ ಜೊತೆ ನಟಿಸಿ ಅವರು ಸೈ ಎನಿಸಿಕೊಂಡರು.
ಇದನ್ನೂ ಓದಿ: ‘ವಿಜು ಮತ್ತು ನಾನು ಒಟ್ಟಿಗೆ ಬೆಳೆದವರು’: ದೇವರಕೊಂಡ ಬಗ್ಗೆ ರಶ್ಮಿಕಾ ಓಪನ್ ಮಾತು
ಸದ್ಯ ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಲಿದೆ ಎಂಬ ನಿರೀಕ್ಷೆ ಇದೆ. ಆಗಸ್ಟ್ 15ರಂದು ‘ಪುಷ್ಪ 2’ ಬಿಡುಗಡೆ ಆಗಲಿದೆ. ಆ ಚಿತ್ರ ಬ್ಲಾಕ್ ಬಸ್ಟರ್ ಆದರೆ ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನ ಮತ್ತೊಂದು ಹಂತಕ್ಕೆ ಮೇಲೇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ