Rashmika Mandanna: ರಶ್ಮಿಕಾ ಮಂದಣ್ಣ ಈ ಸ್ಮೈಲ್​​ಗೆ ಕಾರಣವಾಗಿದ್ದು ಆ ಒಂದು ಡ್ಯಾನ್ಸ್ ಸ್ಟೆಪ್

| Updated By: ರಾಜೇಶ್ ದುಗ್ಗುಮನೆ

Updated on: May 13, 2024 | 3:04 PM

ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಫ್ಯಾನ್ಸ್ ಕಂಡರೆ ರಶ್ಮಿಕಾ ಒಂದು ಹಾಯ್ ಹೇಳುತ್ತಾರೆ. ಸೆಲ್ಫಿ ಕೇಳಿದರೆ ಹಿಂದೆ-ಮುಂದೆ ಯೋಚಿಸದೇ ಪೋಸ್ ಕೊಡುತ್ತಾರೆ. ಈ ಕಾರಣಕ್ಕೆ ಕೆಲವರಿಗೆ ಅವರು ಇಷ್ಟ ಆಗುತ್ತಾರೆ. ಪಾಪರಾಜಿಗಳಿಗೆ ರಶ್ಮಿಕಾ ಮಂದಣ್ಣ ಸಖತ್ ಇಷ್ಟ. ಅವರು ಎಂದಿಗೂ ಪೋಸ್ ಕೊಡದೆ ಹೋಗಿಯೇ ಇಲ್ಲ.

Rashmika Mandanna: ರಶ್ಮಿಕಾ ಮಂದಣ್ಣ ಈ ಸ್ಮೈಲ್​​ಗೆ ಕಾರಣವಾಗಿದ್ದು ಆ ಒಂದು ಡ್ಯಾನ್ಸ್ ಸ್ಟೆಪ್
ರಶ್ಮಿಕಾ
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಕನ್ನಡದಿಂದ ಆರಂಭವಾದ ಅವರ ಜರ್ನಿ ಈಗ ಹಿಂದಿ ಚಿತ್ರರಂಗದವರೆಗೆ ಹೋಗಿದೆ. ಬಾಲಿವುಡ್​ನ ಸೂಪರ್​ಸ್ಟಾರ್ ಸಲ್ಮಾನ್ ಖಾನ್ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ನಗು ನಗುತ್ತಾ ಮಾತನಾಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಪಾಪರಾಜಿಯೊಬ್ಬರ ಡ್ಯಾನ್ಸ್ ಸ್ಟೆಪ್.

ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಫ್ಯಾನ್ಸ್ ಕಂಡರೆ ರಶ್ಮಿಕಾ ಒಂದು ಹಾಯ್ ಹೇಳುತ್ತಾರೆ. ಸೆಲ್ಫಿ ಕೇಳಿದರೆ ಹಿಂದೆ-ಮುಂದೆ ಯೋಚಿಸದೇ ಪೋಸ್ ಕೊಡುತ್ತಾರೆ. ಈ ಕಾರಣಕ್ಕೆ ಕೆಲವರಿಗೆ ಅವರು ಇಷ್ಟ ಆಗುತ್ತಾರೆ. ಪಾಪರಾಜಿಗಳಿಗೆ ರಶ್ಮಿಕಾ ಮಂದಣ್ಣ ಸಖತ್ ಇಷ್ಟ. ಅವರು ಎಂದಿಗೂ ಪೋಸ್ ಕೊಡದೆ ಹೋಗಿಯೇ ಇಲ್ಲ. ಈ ಕಾರಣಕ್ಕೆ ಅವರು ಸಾಕಷ್ಟು ಇಷ್ಟ ಆಗುತ್ತಾರೆ. ಈಗ ರಶ್ಮಿಕಾ ಮಂದಣ್ಣ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಕಾರಿನಲ್ಲಿ ಕುಳಿತಿದ್ದಾರೆ. ಪಾಪರಾಜಿ ಓರ್ವ ಬಂದು ಮೊಬೈಲ್​ನಲ್ಲಿ ಡ್ಯಾನ್ಸ್  ಸ್ಟೆಪ್ ತೋರಿಸಿದ್ದಾರೆ. ಅದನ್ನು ನೋಡಿ ರಶ್ಮಿಕಾ ಮಂದಣ್ಣ ಅವರು ಖುಷಿಯಿಂದ ನಕ್ಕಿದ್ದಾರೆ. ಅಂದಹಾಗೆ, ಅವರು ಡ್ಯಾನ್ಸ್ ಮಾಡಿದ್ದು ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾದ ಹಾಡಿಗೇ ಇರಬಹುದು ಎಂದು ಕೆಲವರು ಊಹಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಸ್ಮೈಲ್ ಅನೇಕರಿಗೆ ಇಷ್ಟ ಆಗಿದೆ.

ರಶ್ಮಿಕಾ ಮಂದಣ್ಣ ಅವರ ಬೇಡಿಕೆ ಇತ್ತೀಚೆಗೆ ಹೆಚ್ಚಿದೆ. ಸಲ್ಮಾನ್ ಖಾನ್ ನಟನೆಯ, ಎಆರ್​ ಮುರುಗದಾಸ್ ನಿರ್ದೇಶನದ ‘ಸಿಕಂದರ್’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದು ಇತ್ತೀಚೆಗೆ ಈ ಬಗ್ಗೆ ಘೋಷಣೆ ಆಗಿದೆ. ರಶ್ಮಿಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಕೆಲವರು ರಶ್ಮಿಕಾ ಅವರನ್ನು ಟ್ರೋಲ್ ಮಾಡಿದ್ದಾರೆ. ಆದರೆ, ಇದಕ್ಕೆಲ್ಲ ರಶ್ಮಿಕಾ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಇದನ್ನೂ ಓದಿ: ‘ಸಿಕಂದರ್​’ ಮಾತ್ರವಲ್ಲ, ರಶ್ಮಿಕಾ ಮಂದಣ್ಣ ಕೈಯಲ್ಲಿವೆ 5 ಹೈವೋಲ್ಟೇಜ್​ ಸಿನಿಮಾಗಳು

ಇದಲ್ಲದೆ, ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿಯೂ ರಶ್ಮಿಕಾ ಮಂದಣ್ಣ ತೊಡಗಿಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇನ್ನೂ ಕೆಲವರು ಪ್ರಮುಖ ಸ್ಟಾರ್​ಗಳ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:54 am, Mon, 13 May 24