ರಶ್ಮಿಕಾ ಮಂದಣ್ಣ ಸಿನಿಮಾಗೆ ಸೋಲಿನ ಭಯ? ‘ಛಾವ’ ಚಿತ್ರಕ್ಕೆ ಇದೆಂಥ ಪರಿಸ್ಥಿತಿ

ನಟಿ ರಶ್ಮಿಕಾ ಮಂದಣ್ಣ ಅವರು ಸತತ ಗೆಲುವು ಕಂಡಿದ್ದಾರೆ. ಈಗ ಅವರು ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಟ್ರೆಂಡ್ ಬೇರೆ ರೀತಿ ಇದೆ. ಹೌದು, ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟಿಸಿರುವ ‘ಛಾವ’ ಸಿನಿಮಾದ ಪ್ರಮೋಷನ್​ ಹಂತದಲ್ಲೇ ನಿರೀಕ್ಷಿತ ಪ್ರಮಾಣದ ಹೈಪ್ ಕಾಣಿಸುತ್ತಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ..

ರಶ್ಮಿಕಾ ಮಂದಣ್ಣ ಸಿನಿಮಾಗೆ ಸೋಲಿನ ಭಯ? ‘ಛಾವ’ ಚಿತ್ರಕ್ಕೆ ಇದೆಂಥ ಪರಿಸ್ಥಿತಿ
Rashmika Mandanna

Updated on: Feb 11, 2025 | 7:01 PM

ಬಾಲಿವುಡ್​ನಲ್ಲಿ ಈ ವಾರ (ಫೆಬ್ರವರಿ 14) ಬಹುನಿರೀಕ್ಷಿತ ‘ಛಾವ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಈಗಾಗಲೇ ಬುಕಿಂಗ್ ಕೂಡ ಶುರುವಾಗಿದೆ. ಆದರೆ ಮುಂಗಡ ಟಿಕೆಟ್ ಬುಕಿಂಗ್​ನಲ್ಲಿ ಜನರ ಆಸಕ್ತಿ ಅಷ್ಟಾಗಿ ಕಾಣಿಸುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್​ಗಳು ಬುಕ್ ಆಗುತ್ತಿಲ್ಲ. ಹಾಗಾಗಿ ಆರಂಭದಲ್ಲೇ ಈ ಚಿತ್ರಕ್ಕೆ ಸೋಲಿನ ಭಯ ಕಾಣುತ್ತಿದೆ.

ಐತಿಹಾಸಿಕ ಕಥಾಹಂದರವನ್ನು ಇಟ್ಟುಕೊಂಡು ‘ಛಾವ’ ಸಿನಿಮಾ ಮೂಡಿಬಂದಿದೆ. ಛತ್ರಪತಿ ಶಂಬಾಜಿ ಮಹಾರಾಜ್ ಜೀವನವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ವಿಕ್ಕಿ ಕೌಶಲ್ ಅವರು ಶಂಬಾಜಿ ಮಹಾರಾಜ್ ಪಾತ್ರವನ್ನು ನಿಭಾಹಿಸಿದ್ದಾರೆ. ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸ್ಟಾರ್​ ಕಲಾವಿದರು ಇದ್ದರೂ ಕೂಡ ಬುಕ್ ಮೈ ಶೋನಲ್ಲಿ ವೇಗವಾಗಿ ಟಿಕೆಟ್ ಬುಕಿಂಗ್ ಆಗುತ್ತಿಲ್ಲ.

ಪ್ರಚಾರದ ವಿಚಾರದಲ್ಲಿ ‘ಛಾವ’ ಸಿನಿಮಾ ಹಿಂದೆ ಬಿದ್ದಿದೆಯಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ಸೋಶಿಯಲ್ ಮೀಡಿಯಾದಲ್ಲಿ ಕೂಡ ದೊಡ್ಡ ಹೈಪ್ ಕಾಣಿಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ‘ಛಾವ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್​ ಮೇಲೆ ಪೆಟ್ಟು ಬೀಳಲಿದೆ. ಈ ಮೊದಲು ಬಾಲಿವುಡ್​ನಲ್ಲಿ ಅನೇಕ ಐತಿಹಾಸಿಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇನ್ನು ಕೆಲವು ಫ್ಲಾಪ್ ಆಗಿವೆ. ಈಗ ‘ಛಾವ’ ಸಿನಿಮಾದ ಭವಿಷ್ಯ ಏನಾಗಲಿದೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗಿದೆ.

ಇದನ್ನೂ ಓದಿ: ಕಾಲು ನೋವಿನಿಂದ ಸಂಪೂರ್ಣ ಚೇತರಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ‘ಅನಿಮಲ್’ ಮತ್ತು ‘ಪುಷ್ಪ 2’ ಸಿನಿಮಾದಿಂದ ಅಭೂತಪೂರ್ವ ಯಶಸ್ಸು ಕಂಡಿದ್ದಾರೆ. ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಎಷ್ಟೋ ಹೀರೋಗಳಿಗೆ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. ‘ಛಾವ’ ಸಿನಿಮಾದಲ್ಲಿ ಅವರ ಮ್ಯಾಜಿಕ್ ಮರುಕಳುಸುತ್ತಾ ಅಥವಾ ಇಲ್ಲವಾ ಎಂಬುದು ಫೆಬ್ರವರಿ 14ರಂದು ಗೊತ್ತಾಗಲಿದೆ. ಒಂದು ವೇಳೆ ಸಿನಿಮಾದ ಬಿಡುಗಡೆ ಬಳಿಕ ಉತ್ತಮ ವಿಮರ್ಶೆ ಮತ್ತು ಬಾಯಿ ಮಾತಿನ ಪ್ರಚಾರ ಸಿಕ್ಕಿರೆ ಖಂಡಿತಾ ಸಿನಿಮಾ ಗೆಲ್ಲಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us