‘ಫೈಟರ್’ ಚಿತ್ರಕ್ಕೆ ಸಿಕ್ತು ವಿಶೇಷ ವ್ಯಕ್ತಿಯ ಮೆಚ್ಚುಗೆ; ಹೃತಿಕ್ ರೋಷನ್​ಗೆ ಖುಷಿಯೋ ಖುಷಿ

|

Updated on: Feb 08, 2024 | 10:40 AM

Fighter Movie: ‘ಫೈಟರ್’ ಚಿತ್ರ ಭಾರತದ ಚಿತ್ರರಂಗದ ಪಾಲಿಗೆ ಹೊಸ ಪ್ರಯೋಗ. ಆಗಸದಲ್ಲಿ ಫೈಟರ್ ಜೆಟ್​ಗಳ ಮೂಲಕ ಫೈಟ್ ಮಾಡೋ ರೀತಿಯ ಚಿತ್ರಗಳು ಭಾರತದಲ್ಲಿ ಸಿದ್ಧವಾಗಿರಲಿಲ್ಲ. ಅಂಥ ಹೊಸ ಅನುಭವವನ್ನು ನಿರ್ದೇಶಕ ಸಿದ್ದಾರ್ಥ್ ಆನಂದ್ ಕಟ್ಟಿಕೊಟ್ಟಿದ್ದಾರೆ. ಮಿಲಿಟರಿಯವರಿಂದಲೂ ಸಿನಿಮಾಗೆ ಮೆಚ್ಚುಗೆ ಸಿಕ್ಕಿದ್ದಕ್ಕೆ ಹೃತಿಕ್ ಖುಷಿಪಟ್ಟಿದ್ದಾರೆ.

‘ಫೈಟರ್’ ಚಿತ್ರಕ್ಕೆ ಸಿಕ್ತು ವಿಶೇಷ ವ್ಯಕ್ತಿಯ ಮೆಚ್ಚುಗೆ; ಹೃತಿಕ್ ರೋಷನ್​ಗೆ ಖುಷಿಯೋ ಖುಷಿ
ಫೈಟರ್ ಸಿನಿಮಾ
Follow us on

‘ಫೈಟರ್​’ ಸಿನಿಮಾ (Fighter Movie) ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಗಳಿಕೆ ಮಾಡಿದೆ. ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಈ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ 172 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನ ಇರುವ ಹಾಗೂ ಹೃತಿಕ್, ದೀಪಿಕಾ, ಅನಿಲ್ ಕಪೂರ್ ಅವರಂಥ ಸ್ಟಾರ್ ಹೀರೋಗಳು ನಟಿಸಿದ ಚಿತ್ರಕ್ಕೆ ಇದು ದೊಡ್ಡ ಮೊತ್ತದ ಗಳಿಕೆ ಅಲ್ಲ. ಈ ಮಧ್ಯೆ ಒಂದಷ್ಟು ಮಂದಿ ಸಿನಿಮಾಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಿವೃತ್ತ ಮೇಜರ್ ಜನರಲ್ ಜಿಡಿ ಭಕ್ಷಿ ಅವರು ಚಿತ್ರವನ್ನು ಹೊಗಳಿದ್ದಾರೆ.

‘ಫೈಟರ್’ ಸಿನಿಮಾ ಭಾರತದ ಚಿತ್ರರಂಗದ ಪಾಲಿಗೆ ಒಂದು ಹೊಸ ಪ್ರಯೋಗ. ಆಗಸದಲ್ಲಿ ಫೈಟರ್ ಜೆಟ್​ಗಳ ಮೂಲಕ ಫೈಟ್ ಮಾಡೋ ರೀತಿಯ ಸಿನಿಮಾಗಳು ಭಾರತದಲ್ಲಿ ಸಿದ್ಧವಾಗಿರಲಿಲ್ಲ. ಅಂಥ ಹೊಸ ಅನುಭವವನ್ನು ಸಿದ್ದಾರ್ಥ್ ಆನಂದ್ ಕಟ್ಟಿಕೊಟ್ಟಿದ್ದಾರೆ. ಮಿಲಿಟರಿಯವರಿಂದಲೂ ಸಿನಿಮಾಗೆ ಮೆಚ್ಚುಗೆ ಸಿಕ್ಕಿದ್ದಕ್ಕೆ ಹೃತಿಕ್ ಖುಷಿಪಟ್ಟಿದ್ದಾರೆ.

‘ಫೈಟರ್ ಸಿನಿಮಾ ವೀಕ್ಷಿಸಿದೆ. ನಮ್ಮ ವಾಯುನೆಲೆ ಸಿಬ್ಬಂದಿಗೆ ಒಂದೊಳ್ಳೆಯ ಗೌರವ. ಸುಖೋಯ್ ಯುದ್ಧವಿಮಾನಗಳ ಥ್ರಿಲ್ಲಿಂಗ್ ಆ್ಯಕ್ಷನ್ ಇದೆ. ಗಾಳಿಯಲ್ಲಿ ನಡೆಯೋ ಯುದ್ಧವನ್ನು ಮಿಸ್ ಮಾಡಿಕೊಳ್ಳಬೇಡಿ. ಹೃತಿಕ್ ರೋಷನ್ ಅವರು ಒಂದೊಳ್ಳೆಯ ಫೈಟರ್ ಪೈಲಟ್ ಪಾತ್ರ ಮಾಡಿದ್ದಾರೆ. ಎಲ್ಲರೂ ನೋಡಲೇಬೇಕಾದ ಸಿನಿಮಾ’ ಎಂದು ಹೃತಿಕ್​ನ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ ಅವರು.

‘ನಿಮ್ಮಿಂದ ನಮ್ಮ ಸಿನಿಮಾಗೆ ಫೀಡ್​ಬ್ಯಾಕ್ ಸಿಗುತ್ತಿರುವುದು ಖುಷಿ ಇದೆ. ಧನ್ಯವಾದಗಳು’ ಎಂದು ಹೃತಿಕ್ ಟ್ವೀಟ್ ಮಾಡಿದ್ದಾರೆ. ಸಿದ್ದಾರ್ಥ್ ಆನಂದ್ ಕೂಡ ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ ಅವರು.

‘ಫೈಟರ್’ ಸಿನಿಮಾ ಜನವರಿ 25ರಂದು ರಿಲೀಸ್ ಆಯಿತು. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಸಿನಿಮಾ ರಿಲೀಸ್ ಆಗಿದ್ದರಿಂದ ನಿರೀಕ್ಷೆ ಹೆಚ್ಚಿತ್ತು. ಮೊದಲ ದಿನ ಸಾಧಾರಣ ಗಳಿಕೆ ಮಾಡಿದ ಈ ಚಿತ್ರ ರಜಾ ದಿನಗಳಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ನಂತರ ಈ ಚಿತ್ರದ ಗಳಿಕೆ ಕುಗ್ಗಿತು.

ಇದನ್ನೂ ಓದಿ: ಹೃತಿಕ್ ರೋಷನ್-ದೀಪಿಕಾ ಚುಂಬನ ದೃಶ್ಯಕ್ಕೆ ಆಕ್ಷೇಪ: ‘ಫೈಟರ್’ ವಿರುದ್ಧ ದೂರು

‘ಫೈಟರ್’ ಸಿನಿಮಾದಲ್ಲಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಜೊತೆ ಕರಣ್ ಸಿಂಗ್ ಗ್ರೋವರ್, ಅನಿಲ್ ಕಪೂರ್, ಅಕ್ಷಯ್ ಒಬೆರಾಯ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ 170 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ