‘ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’ ಪಡೆದವರ ಸಂಪೂರ್ಣ ಪಟ್ಟಿ ಇಲ್ಲಿದೆ

ರಿಷಬ್ ಶೆಟ್ಟಿ, ಆಲಿಯಾ ಭಟ್, ರಣಬೀರ್ ಕಪೂರ್, ಅನುಪಮ್ ಖೇರ್ ಸೇರಿ ಹಲವರಿಗೆ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಪಡೆದವರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

‘ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’ ಪಡೆದವರ ಸಂಪೂರ್ಣ ಪಟ್ಟಿ ಇಲ್ಲಿದೆ
ರಿಷಬ್ -ವರುಣ್ ಧವನ್

Updated on: Feb 21, 2023 | 11:45 AM

‘ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’ ಕಾರ್ಯಕ್ರಮ ಸೋಮವಾರ (ಫೆಬ್ರವರಿ 20) ಮುಂಬೈನಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಸೆಲೆಬ್ರಿಟಿಗಳಿಗೆ ಕೆಂಪುಹಾಸಿನ ಸ್ವಾಗತ ಸಿಕ್ಕಿದೆ. ರಿಷಬ್ ಶೆಟ್ಟಿ, ಆಲಿಯಾ ಭಟ್, ರಣಬೀರ್ ಕಪೂರ್ (Ranbir Kapoor), ಅನುಪಮ್ ಖೇರ್ ಸೇರಿ ಹಲವರಿಗೆ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಪಡೆದವರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಾಗಾದರೆ, ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬ ಬಗ್ಗೆ ಇಲ್ಲಿದೆ ವಿವರ.

ಅತ್ಯುತ್ತಮ ಸಿನಿಮಾ: ದಿ ಕಾಶ್ಮೀರ್ ಫೈಲ್ಸ್​

ಅತ್ಯುತ್ತಮ ನಿರ್ದೇಶಕ: ಆರ್​. ಬಾಲ್ಕಿ (ಚುಪ್: ರಿವೇಂಜ್ ಆಫ್ ದಿ ಆರ್ಟಿಸ್ಟ್​)

ಅತ್ಯುತ್ತಮ ನಟ: ರಣಬೀರ್ ಕಪೂರ್​ (ಬ್ರಹ್ಮಾಸ್ತ್ರ)

ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ)

ಅತ್ಯಂತ ಭರವಸೆಯ ನಟ: ರಿಷಬ್ ಶೆಟ್ಟಿ (ಕಾಂತಾರ)

ಅತ್ಯುತ್ತಮ ಪೋಷಕ ಪಾತ್ರ: ಮನಿಷ್ ಪೌಲ್ (ಜುಗ್​ಜುಗ್ ಜಿಯೋ)

ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದವರು: ರೇಖಾ

ಅತ್ಯುತ್ತಮ ವೆಬ್ ಸೀರಿಸ್​: ರುದ್ರ: ದಿ ಎಡ್ಜ್​ ಆಫ್ ಡಾರ್ಕ್​ನೆಸ್​

ಅತ್ಯುತ್ತಮ ನಟ (ಕ್ರಿಟಿಕ್ಸ್​): ವರುಣ್ ಧವನ್ (ಭೇಡಿಯಾ)

ವರ್ಷದ ಸಿನಿಮಾ: ಆರ್​ಆರ್​ಆರ್

ವರ್ಷದ ಧಾರಾವಾಹಿ: ಅನುಪಮಾ

ಬಹುಮುಖ ಪ್ರತಿಭೆಯ ನಟ: ಅನುಪಮ್ ಖೇರ್ (ದಿ ಕಾಶ್ಮೀರ್ ಫೈಲ್ಸ್)

ಅತ್ಯುತ್ತಮ ಛಾಯಾಗ್ರಹಣ: ಪಿಎಸ್​ ವಿನೋದ್ (ವಿಕ್ರಮ್ ವೇದ)

ಪಂಚೆಯಲ್ಲಿ ಗಮನ ಸೆಳೆದ ರಿಷಬ್

ರಿಷಬ್ ಶೆಟ್ಟಿ ಅವರು ಈ ಕಾರ್ಯಕ್ರಮಕ್ಕೆ ಪಂಚೆ ಉಟ್ಟು ಬಂದಿದ್ದರು. ಇದು ಎಲ್ಲರ ಗಮನ ಸೆಳೆಯಿತು. ‘ರಿಷಬ್ ಅವರು ನಮ್ಮ ಸಂಸ್ಕೃತಿಯನ್ನು ಎಲ್ಲ ಕಡೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ’ ಎನ್ನುವ ಮಾತುಗಳನ್ನು ಅನೇಕರು ಹೇಳಿದ್ದಾರೆ. ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಂಗನಾ ಆಕ್ರೋಶ

ನಟಿ ಕಂಗನಾ ರಣಾವತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕರ ವಿರುದ್ಧ ಅವರು ಧ್ವನಿ ಎತ್ತುತ್ತಾರೆ. ಈಗ ಅವರು ‘ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’ ಬಗ್ಗೆ ಧ್ವನಿ ಎತ್ತಿದ್ದಾರೆ. ಬಹುತೇಕ ಪ್ರಶಸ್ತಿಗಳನ್ನು ಸ್ಟಾರ್ ನಟರ ಮಕ್ಕಳೇ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ದೂರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ