ರಿತೇಶ್ ದೇಶ್ಮುಖ್ ಅವರು ಬಾಲಿವುಡ್ನಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಇಂದು (ಡಿಸೆಂಬರ್ 17) ರಿತೇಶ್ ದೇಶ್ಮುಖ್ ಅವರ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. ರಿತೇಶ್ ಅವರಿಗೆ ಈ ಮೊದಲು ಬೆಂಗಳೂರು ಲಿಫ್ಟ್ನಲ್ಲಿ ಅವಮಾನ ಆಗಿತ್ತು. ಆ ಬಗ್ಗೆ ಹೇಳಿಕೊಂಡಿದ್ದರು. ಈ ಘಟನೆಯನ್ನು ಅವರು ಫನ್ ಆಗಿಯೇ ತೆಗೆದುಕೊಂಡಿದ್ದರು.
ರಿತೇಶ್ ಅವರು ಜೆನಿಲಿಯಾ ಅವರನ್ನು ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಕನ್ನಡಿಗರಿಗೆ ಜೆನಿಲಿಯಾ ಪರಿಚಯ ಇದೆ. ಅವರು ಕನ್ನಡದಲ್ಲೂ ನಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ರಿತೇಶ್ ಅವರನ್ನು ಅನೇಕರು ಜೆನಿಲಿಯಾ ಪತಿ ಎಂದು ಗುರುತಿಸುವವರೇ ಹೆಚ್ಚು. ಇದೇ ರೀತಿಯ ಘಟನೆ ಬೆಂಗಳೂರಿನಲ್ಲೂ ಆಗಿತ್ತು.
ರಿತೇಶ್ ಒಮ್ಮೆ ಬೆಂಗಳೂರಿನ ಹೋಟೆಲ್ನ ಲಿಫ್ಟ್ನಲ್ಲಿ ಹೋಗುತ್ತಿದ್ದರು. ‘ನೀವು ಜೆನಿಲಿಯಾ ಪತಿ ಅಲ್ಲವಾ’ ಎಂದು ಅಲ್ಲಿದ್ದವರು ಕೇಳಿದರು. ಇದಕ್ಕೆ ರಿತೇಶ್ಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ‘ನಾನು ಇಲ್ಲಿ ಜೆನಿಲಿಯಾ ಪತಿ. ಆದರೆ, ಮಹಾರಾಷ್ಟ್ರದಲ್ಲಿ ಎಲ್ಲರೂ ಜೆನಿಲಿಯಾ ಅವರನ್ನು ಗುರುತಿಸೋದು ರಿತೇಶ್ ಅವರ ಪತ್ನಿ ಎಂದು’ ಎಂಬುದಾಗಿ ರಿತೇಶ್ ಹೇಳಿದ್ದರು.
ಆಗ ಅಲ್ಲಿ ಲಿಫ್ಟ್ನಲ್ಲಿ ಇದ್ದವರು ಸುಮ್ಮನೆ ಆಗಲಿಲ್ಲ. ‘ಅದು ಒಂದು ರಾಜ್ಯದಲ್ಲಿ ಮಾತ್ರ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರದಲ್ಲಿ ನೀವು ಜೆನಿಲಿಯಾ ಪತಿ ಅಷ್ಟೇ’ ಎಂದು ಉತ್ತರಿಸಿದ್ದರು. ಈ ಘಟನೆಯ ಬಗ್ಗೆ ರಿತೇಶ್ ಅನೇಕ ಬಾರಿ ಹೇಳಿದ್ದಾರೆ. ಅವರಿಗೆ ಇದು ಅವಮಾನದ ಸಂಗತಿಯೇ. ಆದರೆ, ಇದನ್ನು ಅವರು ಆ ರೀತಿಯಲ್ಲಿ ತೆಗೆದುಕೊಂಡಿಲ್ಲ. ಅವರಿಗೆ ಈ ಬಗ್ಗೆ ಖುಷಿ ಇದೆ. ‘ನನ್ನನ್ನು ಜೆನಿಲಿಯಾ ಪತಿ ಎಂದು ಗುರುತಿಸಿದಾಗ ಖುಷಿ ಆಗುತ್ತದೆ’ ಎಂದು ರಿತೇಶ್ ಹೇಳಿಕೊಂಡಿದ್ದರು.
ಇದನ್ನೂ ಓದಿ: ಜೆನಿಲಿಯಾ ಡಿಸೋಜಾ-ರಿತೇಶ್ ದೇಶಮುಖ್ ದಾಂಪತ್ಯಕ್ಕೆ 12 ವರ್ಷ
ರಿತೇಶ್ ಅವರು ಇತ್ತೀಚೆಗೆ ನಟನೆಯಿಂದ ದೂರ ಇದ್ದಾರೆ. ಅವರು ಅಷ್ಟಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಹೊಸ ಚಿತ್ರಗಳಲ್ಲಿ ನಟಿಸಿ ಅವರು ಗಮನ ಸೆಳೆಯುವ ಪ್ರಯತ್ನ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.