ಈ ಖ್ಯಾತ ಸೆಲೆಬ್ರಿಟಿಗಳಿಗೆ ಇದೆ ಕೆಟ್ಟ ಸ್ವಭಾವ; ಇದನ್ನು ಅಭಿಮಾನಿಗಳು ಎಂದಿಗೂ ಸಹಿಸಲ್ಲ

ಕರೀನಾ ಕಪೂರ್, ಐಶ್ವರ್ಯಾ ರೈ ಬಚ್ಚನ್​, ಸಲ್ಮಾನ್ ಖಾನ್, ಕಂಗನಾ ರಣಾವತ್ ಮೊದಲಾದವರ ಬಳಿ ಕೆಟ್ಟ ಸ್ವಭಾವ ಇದೆ. ಅಭಿಮಾನಿಗಳಿಗೆ ಇದು ಇಷ್ಟ ಆಗುವುದಿಲ್ಲ.

ಈ ಖ್ಯಾತ ಸೆಲೆಬ್ರಿಟಿಗಳಿಗೆ ಇದೆ ಕೆಟ್ಟ ಸ್ವಭಾವ; ಇದನ್ನು ಅಭಿಮಾನಿಗಳು ಎಂದಿಗೂ ಸಹಿಸಲ್ಲ
ಕರೀನಾ, ರಣಬೀರ್, ಐಶ್ವರ್ಯಾ ರೈ, ಸಲ್ಮಾನ್

Updated on: Apr 27, 2023 | 8:02 AM

ಸೆಲೆಬ್ರಿಟಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಒಂದಷ್ಟು ಸ್ವಭಾವವನ್ನು ಅವರಿಗೆ ಬಿಡೋಕೆ ಸಾಧ್ಯವೇ ಆಗಿರುವುದಿಲ್ಲ. ಇದರಿಂದ ಅವರು ಅನೇಕ ಬಾರಿ ಟೀಕೆಗೆ ಒಳಗಾಗಬೇಕಾದ ಪರಿಸ್ಥಿತಿ ಬರುತ್ತದೆ. ಕೆಲವೊಮ್ಮೆ ಸೆಲೆಬ್ರಿಟಿಗಳು ನಡೆದುಕೊಳ್ಳುವುದು ಅಭಿಮಾನಿಗಳೇ ಇಷ್ಟ ಆಗುವುದಿಲ್ಲ. ಈ ಸಾಲಿನಲ್ಲಿ ಕರೀನಾ ಕಪೂರ್ (Kareena Kapoor), ಐಶ್ವರ್ಯಾ ರೈ ಬಚ್ಚನ್​, ಸಲ್ಮಾನ್ ಖಾನ್, ಕಂಗನಾ ರಣಾವತ್ (Kangana Ranaut) ಮೊದಲಾದವರು ಇದ್ದಾರೆ. ಅಷ್ಟಕ್ಕೂ ಈ ಸೆಲೆಬ್ರಿಟಿಗಳಲ್ಲಿ ಅಭಿಮಾನಿಗಳಿಗೆ ಇಷ್ಟ ಆಗದೇ ಇರುವಂಥದ್ದು ಏನಿದೆ? ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿ ಇದೆ ಉತ್ತರ.

ಐಶ್ವರ್ಯಾ ರೈ ಬಚ್ಚನ್: ಬಾಲಿವುಡ್​ನಲ್ಲಿ ಐಶ್ವರ್ಯಾ ರೈ ಇನ್ನೂ ಬೇಡಿಕೆ ಉಳಿಸಿಕೊಂಡಿದ್ದಾರೆ. ದಕ್ಷಿಣದ ಕೆಲ ಸಿನಿಮಾಗಳಲ್ಲೂ ನಟಿಸಿ ಅವರು ಫೇಮಸ್ ಆಗಿದ್ದಾರೆ. ಕೆಲವೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರು ಕಠೋರವಾಗಿ ನಡೆದುಕೊಳ್ಳುತ್ತಾರೆ. ಇದು ಕೆಲವರಿಗೆ ಇಷ್ಟ ಆಗುವುದಿಲ್ಲ.

ಕರೀನಾ ಕಪೂರ್: ಕರೀನಾ ಕಪೂರ್ ಸದ್ಯ ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ಸಹಕಲಾವಿದರ ಬಗ್ಗೆ ಕೆಟ್ಟ ಕಮೆಂಟ್ ಹಾಕುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುವುದಿಲ್ಲ.

ಸಲ್ಮಾನ್ ಖಾನ್: ಸಲ್ಮಾನ್ ಖಾನ್ ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರು ಕೆಲವು ಕಡೆಗಳಲ್ಲಿ ಸಿಟ್ಟಿನಿಂದ ನಡೆದುಕೊಂಡಿದ್ದಿದೆ. ಅವರು ರಿವೇಂಜ್ ತೀರಿಸಿಕೊಳ್ಳುವ ಗುಣವನ್ನು ಹೊಂದಿದ್ದಾರೆ.

ಕಂಗನಾ ರಣಾವತ್: ನಿರ್ದೇಶಕಿ, ನಿರ್ಮಾಪಕಿ, ನಟಿಯಾಗಿ ಗುರುತಿಸಿಕೊಂಡಿರುವ ಕಂಗನಾ ರಣಾವತ್ ಅವರು ಸದಾ ಟೀಕೆಗೆ ಒಳಗಾಗುತ್ತಾರೆ. ಸಂಬಂಧ ಇಲ್ಲದ ವಿವಾದಗಳಲ್ಲಿ ಮೂಗು ತೂರಿಸಲು ಹೋಗುತ್ತಾರೆ. ಅವರಿಗೆ ಬಾಲಿವುಡ್​ನಲ್ಲಿ ಬಹುತೇಕರನ್ನು ಕಂಡರೆ ಆಗುವುದಿಲ್ಲ.

ರಣಬೀರ್ ಕಪೂರ್: ಬಾಲಿವುಡ್​ನ ಬೇಡಿಕೆಯ ಹೀರೋ ರಣಬೀರ್ ಕಪೂರ್. ಇವರು ಸೋಶಿಯಲ್ ಮೀಡಿಯಾ ಇಂದ ದೂರ ಇದ್ದಾರೆ. ರಣಬೀರ್​ಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಣ್ಣ ಮಟ್ಟದಲ್ಲಿ ಕಿರಿಕಿರಿ ಆದರೂ ಅವರು ಸಿಟ್ಟಾಗುತ್ತಾರೆ. ಇದು ಅನೇಕ ಬಾರಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: Saif Ali Khan: ‘ಆದಿಪುರುಷ್​’ ಪ್ರಮೋಷನ್​ನಿಂದ ದೂರ ಉಳಿಯಲಿದ್ದಾರೆ ರಾವಣನ ಪಾತ್ರ ಮಾಡಿದ ಸೈಫ್ ಅಲಿ ಖಾನ್

ಜಯಾ ಬಚ್ಚನ್: ಅಮಿತಾಭ್ ಬಚ್ಚನ್ ಪತ್ನಿ ಜಯಾ ಬಚ್ಚನ್​ಗೆ ಪಾಪರಾಜಿಗಳು ಮುತ್ತಿಕೊಂಡರೆ ಇಷ್ಟ ಆಗುವುದಿಲ್ಲ. ಈ ವೇಳೆ ಅವರು ಕಠೋರವಾಗಿ ನಡೆದುಕೊಂಡಿದ್ದರು.

ಕರಣ್ ಜೋಹರ್: ಬಾಲಿವುಡ್​ನ ವಿವಾದಾತ್ಮಕ ನಿರ್ಮಾಪಕರಲ್ಲಿ ಕರಣ್ ಜೋಹರ್ ಕೂಡ ಒಬ್ಬರು. ಅವರು ಸ್ಟಾರ್ ಕಿಡ್​ಗಳನ್ನು ಬೆಳೆಸೋಕೆ ಇದ್ದವರು ಎನ್ನುವ ಮಾತಿದೆ. ತಮಗೆ ಇಷ್ಟ ಇಲ್ಲದವರನ್ನು ಇಂಡಸ್ಟ್ರಿಯಿಂದ ಹೊರ ಹಾಕಲು ಅವರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ