ನೆಗೆಟಿವ್ ವಿಮರ್ಶೆ ಮಧ್ಯೆಯೂ ಎದ್ದು ನಿಂತ ಸಲ್ಮಾನ್ ಖಾನ್; ಭರ್ಜರಿ ಕಲೆಕ್ಷನ್ ಮಾಡಿದ ಸಲ್ಲು ಸಿನಿಮಾ
Kisi Ka Bhai Kisi ki Jaan Movie Collection: ಸಾಮಾನ್ಯವಾಗಿ ಸಲ್ಮಾನ್ ಖಾನ್ ಚಿತ್ರದ ಮೊದಲ ದಿನದ ಗಳಿಕೆ 25 ಕೋಟಿ ರೂಪಾಯಿ ಮೇಲಿರುತ್ತಿತ್ತು. ಹೀಗಾಗಿ, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ಗಳಿಕೆಯನ್ನು ಸಾಧಾರಣ ಗಳಿಕೆ ಎಂದು ಬಾಕ್ಸ್ ಆಫೀಸ್ ಪಂಡಿತರು ಕರೆದರು.
ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ (Kisi Ka Bhai Kisi ki Jaan Movie) ಮೊದಲ ದಿನ ನೆಗೆಟಿವ್ ವಿಮರ್ಶೆ ಪಡೆಯಿತು. ಅನೇಕರಿಗೆ ಸಿನಿಮಾ ಇಷ್ಟ ಆಗಲಿಲ್ಲ. ಈ ಕಾರಣಕ್ಕೆ ಶುಕ್ರವಾರ (ಏಪ್ರಿಲ್ 21) ಸಿನಿಮಾ ಸಾಧಾರಣ ಗಳಿಕೆ ಮಾಡಿತು. ಆದರೆ, ಅಭಿಮಾನಿಗಳು ಸಲ್ಮಾನ್ ಅವರ ಕೈಬಿಟ್ಟಿಲ್ಲ. ಸಿನಿಮಾವನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಮೂರು ದಿನಕ್ಕೆ ಚಿತ್ರದ ಕಲೆಕ್ಷನ್ 68.17 ಕೋಟಿ ರೂಪಾಯಿ ಆಗಿದೆ. ಸೋಮವಾರದ ಗಳಿಕೆ ಮೇಲೆ ಸಲ್ಮಾನ್ ಖಾನ್ (Salman Khan) ಸಿನಿಮಾ ಭವಿಷ್ಯ ನಿರ್ಧಾರ ಆಗಲಿದೆ.
ಈದ್ ಸಂದರ್ಭದಲ್ಲಿ ಸಲ್ಮಾನ್ ಖಾನ್ ಚಿತ್ರಗಳು ರಿಲೀಸ್ ಆಗುವುದು ವಾಡಿಕೆ. ಅದೇ ರೀತಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಂಜಾನ್ ಸಂದರ್ಭದಲ್ಲಿ (ಏಪ್ರಿಲ್ 21) ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ 15 ಕೋಟಿ ರೂಪಾಯಿ ಗಳಿಕೆ ಮಾಡಿತು. ಸಾಮಾನ್ಯವಾಗಿ ಸಲ್ಮಾನ್ ಖಾನ್ ಚಿತ್ರದ ಮೊದಲ ದಿನದ ಗಳಿಕೆ 25 ಕೋಟಿ ರೂಪಾಯಿ ಮೇಲಿರುತ್ತಿತ್ತು. ಹೀಗಾಗಿ, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ಗಳಿಕೆಯನ್ನು ಸಾಧಾರಣ ಗಳಿಕೆ ಎಂದು ಬಾಕ್ಸ್ ಆಫೀಸ್ ಪಂಡಿತರು ಕರೆದರು.
ಶನಿವಾರ (ಏಪ್ರಿಲ್ 23) ಈ ಚಿತ್ರ 25.75 ಕೋಟಿ ರೂಪಾಯಿ ಗಳಿಸಿದೆ. ಭಾನುವಾರ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಿದೆ. ಈ ಸಿನಿಮಾ ಭಾನುವಾರ 26.61 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 68 ಕೋಟಿ ರೂಪಾಯಿ ದಾಟಿದೆ.
#KisiKaBhaiKisiKiJaan packs a solid total in its opening weekend… #SalmanKhan’s star power + #Eid festivities ensured #HouseFull boards across many properties on Sat and Sun… Fri 15.81 cr, Sat 25.75 cr, Sun 26.61 cr. Total: ₹ 68.17 cr. #India biz.
The jump on Sat and Sun – in… pic.twitter.com/pq551jXhrz
— taran adarsh (@taran_adarsh) April 24, 2023
ವೀಕೆಂಡ್ನಲ್ಲಿ ಸಿನಿಮಾನ ವೀಕ್ಷಿಸೋದು ಸಹಜ. ಆದರೆ, ವಾರದ ದಿನಗಳಲ್ಲಿ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡಿದರೆ ಅದು ನಿಜವಾದ ಗೆಲುವು. ಹೀಗಾಗಿ, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಇಂದಿನ ಗಳಿಕೆ ಎಷ್ಟಾಗಲಿದೆ ಎಂಬುದು ತುಂಬಾನೇ ಮುಖ್ಯವಾಗುತ್ತದೆ.
ಇದನ್ನೂ ಓದಿ: ಈದ್ಗೆ ಸಲ್ಮಾನ್ ಖಾನ್-ಆಮಿರ್ ಖಾನ್ ಭೇಟಿ; ಈ ಫೋಟೋದಲ್ಲಿ ಮಿಸ್ಸಿಂಗ್ ಆಗಿದ್ದು ಯಾರು?
ಸಲ್ಮಾನ್ ಖಾನ್ ಸಿನಿಮಾದ ಬಜೆಟ್ ದೊಡ್ಡ ಮಟ್ಟದಲ್ಲಿರುತ್ತದೆ. ಹೀಗಾಗಿ, ಅವರ ಸಿನಿಮಾಗಳು ನೂರು ಕೋಟಿ ರೂಪಾಯಿಗೆ ಬಿಸ್ನೆಸ್ ಮುಗಿಸಿದರೆ ಅದನ್ನು ಗೆಲುವು ಎಂದು ಕರೆಯಲು ಸಾಧ್ಯವಿಲ್ಲ. ತಮಿಳಿನಿ ‘ವೀರಂ’ ಚಿತ್ರದ ರಿಮೇಕ್ ‘ಕಿಸಿ ಕಿ ಭಾಯ್ ಕಿಸಿ ಕಿ ಜಾನ್’ ಸಿನಿಮಾ. ರಿಮೇಕ್ ಎನ್ನುವ ಕಾರಣಕ್ಕೂ ಅನೇಕರಿಗೆ ಸಿನಿಮಾ ಇಷ್ಟವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ