Salman Khan: ಒಂದು ದಿನದ ಮಟ್ಟಿಗೆ ತಮ್ಮ ಪ್ರೀತಿಯ ವಸ್ತುವನ್ನು ಆಮಿರ್ ಖಾನ್ಗೆ ನೀಡಿದ ಸಲ್ಮಾನ್ ಖಾನ್
Salman Khan Bracelet: ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ನಡುವೆ ಉತ್ತಮ ಗೆಳೆತನ ಇದೆ. ಅವರಿಬ್ಬರ ಸ್ನೇಹಕ್ಕೆ ಸಾಕ್ಷಿ ಒದಗಿಸುವಂತಹ ಹೊಸ ಘಟನೆ ನಡೆದಿದೆ.
ನಟ ಸಲ್ಮಾನ್ ಖಾನ್ (Salman Khan) ಅವರು ಹಲವು ಕಾರಣಗಳಿಂದಾಗಿ ಸುದ್ದಿ ಆಗುತ್ತಾರೆ. ಅವರು ಎಲ್ಲೇ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಅವರ ಫೋಟೋ ಮತ್ತು ವಿಡಿಯೋಗಳು ಆಗಾಗ ವೈರಲ್ ಆಗುತ್ತವೆ. ಪ್ರತಿ ಬಾರಿ ಸಲ್ಮಾನ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೂ ಅವರನ್ನು ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರ ಕೈಯಲ್ಲಿ ಯಾವಾಗಲೂ ಒಂದು ಬ್ರೇಸ್ಲೆಟ್ (Salman Khan Bracelet) ಇರುತ್ತದೆ. ಇದನ್ನು ಅದೃಷ್ಟದ ಸಂಕೇತ ಎಂದೇ ಸಲ್ಮಾನ್ ಖಾನ್ ಭಾವಿಸುತ್ತಾರೆ. ಸಿನಿಮಾಗಳಲ್ಲೂ ಕೂಡ ಅವರು ಅದನ್ನು ಧರಿಸುತ್ತಾರೆ. ಅಚ್ಚರಿ ಎಂದರೆ ತಮ್ಮ ಈ ಪ್ರೀತಿಯ ವಸ್ತುವನ್ನು ಅವರು ಒಂದು ದಿನದ ಮಟ್ಟಿಗೆ ಆಮಿರ್ ಖಾನ್ಗೆ ನೀಡಿದ್ದರು. ಇತ್ತೀಚೆಗೆ ಆಮಿರ್ ಖಾನ್ (Aamir Khan) ಕೈಯಲ್ಲಿ ಈ ಬ್ರೇಸ್ಲೆಟ್ ಕಾಣಿಸಿದೆ. ಈ ಬದಲಾವಣೆಗೆ ಕಾರಣ ಏನು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ನಡುವೆ ಉತ್ತಮ ಗೆಳೆತನ ಇದೆ. ಇತ್ತೀಚೆಗೆ ಇಬ್ಬರೂ ಜೊತೆಯಾಗಿ ಇರುವ ಫೋಟೋವನ್ನು ಸಲ್ಮಾನ್ ಖಾನ್ ಶೇರ್ ಮಾಡಿಕೊಂಡಿದ್ದರು. ಅದರ ಮರುದಿನವೇ ಸಲ್ಲು ಸಹೋದರಿ ಅರ್ಪಿತಾ ಖಾನ್ ಆಯೋಜಿಸಿದ್ದ ಈದ್ ಪಾರ್ಟಿಗೆ ಆಮಿರ್ ಖಾನ್ ಹಾಜರಿ ಹಾಕಿದ್ದಾರೆ. ಆಗ ಪಾಪರಾಜಿಗಳಿಗೆ ಪೋಸ್ ನೀಡಿದ ಅವರ ಕೈಯಲ್ಲಿ ಬ್ರೇಸ್ಲೆಟ್ ಕಾಣಿಸಿದೆ. ‘ಇದು ಸಲ್ಲು ಭಾಯ್ ಬ್ರೇಸ್ಲೆಟ್’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಹೊಸ ಚಿತ್ರಕ್ಕಾಗಿ ಒಂದಾದ ಸಲ್ಮಾನ್ ಖಾನ್-ಆಮಿರ್ ಖಾನ್; ಬಿಗ್ ಬಜೆಟ್ ಚಿತ್ರಕ್ಕೆ ಶೀಘ್ರವೇ ಮುಹೂರ್ತ?
ಪಾರ್ಟಿ ಮುಗಿಸಿ ವಾಪಸ್ ಹೊರಡುವಾಗ ಆಮಿರ್ ಖಾನ್ ಕೈಯಲ್ಲಿ ಆ ಬ್ರೇಸ್ಲೆಟ್ ಕಾಣಿಸಲಿಲ್ಲ. ಅದನ್ನು ಪುನಃ ಅವರು ಸಲ್ಮಾನ್ ಖಾನ್ಗೆ ನೀಡಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಒಟ್ಟಿನಲ್ಲಿ ತಮ್ಮ ಪಾಲಿನ ಅದೃಷ್ಟದ ವಸ್ತುವನ್ನು ಆತ್ಮೀಯ ಗೆಳೆಯನಿಗೆ ಸಲ್ಲು ಯಾಕೆ ನೀಡಿದ್ದರು ಎಂಬ ಬಗ್ಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
View this post on Instagram
ಮ್ಯಾಜಿಕ್ ಮಾಡಿದ ಸಲ್ಲು ಹೊಸ ಸಿನಿಮಾ:
ಸಲ್ಮಾನ್ ಖಾನ್ ಅವರು ನಟಿಸಿರುವ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಏಪ್ರಿಲ್ 21ರಂದು ಬಿಡುಗಡೆಯಾಗಿ ಸಾಧಾರಣ ಗಳಿಕೆ ಮಾಡಿತು. ಮೊದಲ ದಿನ ಈ ಚಿತ್ರಕ್ಕೆ ಕೇವಲ 15.81 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಆದರೆ ಎರಡನೇ ದಿನ ಬಿಸ್ನೆಸ್ ಹೆಚ್ಚಾಗಿದೆ. ಶನಿವಾರ (ಏಪ್ರಿಲ್ 22) ಈ ಸಿನಿಮಾ ಬರೋಬ್ಬರಿ 25.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಭಾನುವಾರ ಕೂಡ ಉತ್ತಮ ಪ್ರದರ್ಶನ ಕಂಡಿದೆ. ಆ ಮೂಲಕ ಶೀಘ್ರದಲ್ಲೇ 100 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸೂಚನೆ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.