ಹೊಸ ಬ್ರ್ಯಾಂಡ್ ಪರಿಚಯಿಸಿದ ಆರ್ಯನ್ ಖಾನ್; ಜಾಹೀರಾತಿನಲ್ಲಿ ಕಾಣಿಸಿಕೊಂಡ ಶಾರುಖ್  

ಸೆಲೆಬ್ರಿಟಿ ಮಕ್ಕಳು ಸಾಮಾನ್ಯವಾಗಿ ಹೀರೋ ಆಗೋಕೆ ಬಯಸುತ್ತಾರೆ. ಆದರೆ, ಆರ್ಯನ್ ಖಾನ್ ನಿರ್ದೇಶನದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಹೊಸ ಬ್ರ್ಯಾಂಡ್ ಪರಿಚಯಿಸಿದ ಆರ್ಯನ್ ಖಾನ್; ಜಾಹೀರಾತಿನಲ್ಲಿ ಕಾಣಿಸಿಕೊಂಡ ಶಾರುಖ್  
ಶಾರುಖ್​-ಆರ್ಯನ್
Follow us
ರಾಜೇಶ್ ದುಗ್ಗುಮನೆ
|

Updated on:Apr 25, 2023 | 7:20 AM

ಶಾರುಖ್ ಖಾನ್​​ಗೆ (Shah Rukh Khan) ಕುಟುಂಬದ ಮೇಲೆ ಎಲ್ಲಿಲ್ಲದ ಪ್ರೀತಿ. ಅವರು ಈ ವಿಚಾರವನ್ನು ಈ ಮೊದಲು ಅನೇಕ ಬಾರಿ ಹೇಳಿಕೊಂಡಿದ್ದರು. ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ಅವರು ಮನೆಯಲ್ಲೇ ಇರುತ್ತಾರೆ. ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯೋಕೆ ಅವರು ಇಷ್ಟಪಡುತ್ತಾರೆ. ಶಾರುಖ್ ಖಾನ್ ಮಗ ಆರ್ಯನ್ ಖಾನ್ (Aryan Khan) ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮದೇ ಬಟ್ಟೆ ಬ್ರ್ಯಾಂಡ್ ಪರಿಚಯಿಸುತ್ತಿದ್ದಾರೆ. ಇದಕ್ಕೆ ಪ್ರಚಾರ ರಾಯಭಾರಿಯಾಗಿ ಬಂದಿರೋದು ಶಾರುಖ್ ಖಾನ್ ಅನ್ನೋದು ವಿಶೇಷ. ಮಗನ ಜಾಹೀರಾತಿದ್ದರಿಂದ ಅವರು ಯಾವುದೇ ಸಂಭಾವನೆ ಪಡೆದಿಲ್ಲ.

ಆರ್ಯನ್ ಖಾನ್ ಅವರು ಡ್ರಗ್ ಕೇಸ್​ನಲ್ಲಿ ಸಿಕ್ಕಿ ಬಿದ್ದರು. ಇದರಿಂದ ಅವರು ಜೈಲು ಕೂಡ ಸೇರಿದರು. ಈ ಸಂದರ್ಭದಲ್ಲಿ ಶಾರುಖ್ ಖಾನ್ ಹೆಚ್ಚು ಚಿಂತೆಗೆ ಒಳಗಾದರು. ಬಳಿಕ ಆರ್ಯನ್ ಖಾನ್ ತಪ್ಪಿಲ್ಲ ಅನ್ನೋದು ಸಾಬೀತಾಯಿತು. ಅವರು ಕ್ಲೀನ್​ಚಿಟ್ ಪಡೆದು ಹೊರ ಬಂದರು. ಸೆಲೆಬ್ರಿಟಿ ಮಕ್ಕಳು ಸಾಮಾನ್ಯವಾಗಿ ಹೀರೋ ಆಗೋಕೆ ಬಯಸುತ್ತಾರೆ. ಆದರೆ, ಆರ್ಯನ್ ಖಾನ್ ನಿರ್ದೇಶನದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಆರ್ಯನ್ ಖಾನ್​ ಅವರ ಮೊದಲ ವೆಬ್​ ಸೀರಿಸ್​ನ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ಇದರ ಜೊತೆ ಬಟ್ಟೆ ಬಿಸ್ನೆಸ್​ಗೆ ಇಳಿದಿದ್ದಾರೆ. Dyavolx ಹೆಸರಿನ ಬಟ್ಟೆ ಬ್ರ್ಯಾಂಡ್ ಅನ್ನು ಅವರು ಹೊರ ತರುತ್ತಿದ್ದಾರೆ. ಇದರ ಜಾಹೀರಾತಿನ ತುಣುಕೊಂದು ಬಿಡುಗಡೆ ಆಗಿದೆ. ಇದರಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತನ್ನು ಆರ್ಯನ್ ಖಾನ್ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ‘ಅವರು ನನ್ನ ಕೈ ಕತ್ತರಿಸುತ್ತಾರೆ ಎನ್ನುವ ಭಯ ಈಗಲೂ ಇದೆ‘; ಶಾರುಖ್ ಖಾನ್​ಗೆ ಇದೆ ಫೋಬಿಯಾ

ಅಂದಹಾಗೆ, ಪೂರ್ತಿ ಜಾಹೀರಾತನ್ನು ಆರ್ಯನ್ ಖಾನ್ ರಿಲೀಸ್ ಮಾಡಿಲ್ಲ. ಇಂದು (ಏಪ್ರಿಲ್ 25) ಪೂರ್ತಿ ಜಾಹೀರಾತು ರಿಲೀಸ್ ಆಗಲಿದೆ. ಆರ್ಯನ್ ಖಾನ್ ಅವರು ಕುರ್ಚಿ ಮೇಲೆ ಕುಳಿತು ಮಾನಿಟರ್​ನ ಚೆಕ್ ಮಾಡುತ್ತಿರುವ ಫೋಟೋನ ಈ ಮೊದಲು ಹಂಚಿಕೊಳ್ಳಲಾಗಿತ್ತು. ಸದ್ಯ ಯಾವುದೇ ಅಂಗಡಿ ತೆರೆಯುವ ಆಲೋಚನೆ ಆರ್ಯನ್ ಖಾನ್​ಗೆ ಇಲ್ಲ. ಆನ್​ಲೈನ್ ಮೂಲಕ ಮಾರಾಟ ಮಾಡಲು ಅವರು ನಿರ್ಧರಿಸಿದ್ದಾರೆ. ಈ ಮೊದಲು ಅನೇಕ ಸೆಲೆಬ್ರಿಟಿಗಳು ತಮ್ಮ ಬಟ್ಟೆ ಬ್ರ್ಯಾಂಡ್ ಪರಿಚಯಿಸಿದ್ದಾರೆ. ಈಗ ಈ ಸಾಲಿಗೆ ಆರ್ಯನ್ ಖಾನ್ ಕೂಡ ಸೇರ್ಪಡೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:20 am, Tue, 25 April 23

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ