AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ಕಾಶ್ಮೀರದಲ್ಲಿ ಕಾಣಿಸಿಕೊಂಡ ಶಾರುಖ್​ ಖಾನ್: ಅಲ್ಲಿನ ಜನರಿಂದ ಅದ್ದೂರಿ ಸ್ವಾಗತ

Shah Rukh Khan Viral Video: ಶಾರುಖ್​ ಖಾನ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಹಲವು ವರ್ಷಗಳ ಬಳಿಕ ಕಾಶ್ಮೀರಕ್ಕೆ ಬಂದಿರುವ ಅವರನ್ನು ನೋಡಲು ಅಲ್ಲಿನ ಫ್ಯಾನ್ಸ್​ ಮುಗಿಬಿದ್ದಿದ್ದಾರೆ.

Shah Rukh Khan: ಕಾಶ್ಮೀರದಲ್ಲಿ ಕಾಣಿಸಿಕೊಂಡ ಶಾರುಖ್​ ಖಾನ್: ಅಲ್ಲಿನ ಜನರಿಂದ ಅದ್ದೂರಿ ಸ್ವಾಗತ
ಶಾರುಖ್ ಖಾನ್
ಮದನ್​ ಕುಮಾರ್​
|

Updated on: Apr 25, 2023 | 11:14 AM

Share

​ನಟ ಶಾರುಖ್​ ಖಾನ್​ (Shah Rukh Khan) ಅವರು ಹಲವು ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅನೇಕ ಕಡೆಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ. ‘ಪಠಾಣ್​’ ಸಿನಿಮಾದ ಯಶಸ್ಸಿನ ಬಳಿಕ ಅವರು ಸಖತ್​ ಬ್ಯುಸಿ ಆಗಿದ್ದಾರೆ. ಈ ಚಿತ್ರ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದರೂ ಕೂಡ ಶಾರುಖ್​ ಖಾನ್​ ವಿಶ್ರಾಂತಿ ಪಡೆಯುವ ಮೂಡ್​ನಲ್ಲಿ ಇಲ್ಲ. ಸ್ವಲ್ಪವೂ ಬ್ರೇಕ್​ ನೀಡದೇ ಅವರು ಮುಂದಿನ ಸಿನಿಮಾಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಅವರು ಕಾಶ್ಮೀರಕ್ಕೆ (Kashmir) ತೆರಳಿದ್ದಾರೆ. ಆ ಸಂದರ್ಭದ ವಿಡಿಯೋಗಳು ವೈರಲ್​ ಆಗಿವೆ. ಮುಂಬೈನಿಂದ ಏಕಾಏಕಿ ಕಾಶ್ಮೀರಕ್ಕೆ ಶಾರುಖ್​ ಅವರು ಪ್ರಯಾಣ ಬೆಳೆಸಿದ್ದು ಯಾಕೆ? ಅದಕ್ಕೆ ಅವರ ಕಡೆಯಿಂದ ಉತ್ತರ ಸಿಕ್ಕಿಲ್ಲ. ಮೂಲಗಳ ಪ್ರಕಾರ ಅವರು ‘ಡಂಕಿ’ ಸಿನಿಮಾದ (Dunki Movie) ಶೂಟಿಂಗ್​ ಸಲುವಾಗಿ ಕಾಶ್ಮೀರಕ್ಕೆ ತೆರಳಿದ್ದಾರೆ. ಅಲ್ಲಿನ ಜನರು ಬಹಳ ಪ್ರೀತಿಯಿಂದ ಅವರನ್ನು ಬರಮಾಡಿಕೊಂಡಿದ್ದಾರೆ.

ಶಾರುಖ್​ ಖಾನ್​ ಅವರು ಬಹಳ ವರ್ಷಗಳ ನಂತರ ಕಾಶ್ಮೀರಕ್ಕೆ ತೆರಳಿರುವುದರಿಂದ ಈ ಭೇಟಿ ವಿಶೇಷ ಎನಿಸಿಕೊಂಡಿದೆ. 2012ರಲ್ಲಿ ‘ಜಬ್​ ತಕ್​ ಹೈ ಜಾನ್​’ ಸಿನಿಮಾದ ಶೂಟಿಂಗ್​ಗಾಗಿ ಅವರು ಕಾಶ್ಮೀರಕ್ಕೆ ಹೋಗಿದ್ದರು. ಈಗ ಬರೋಬ್ಬರಿ 11 ವರ್ಷಗಳ ಬಳಿಕ ಅವರು ಅಲ್ಲಿಗೆ ತೆರಳಿದ್ದಾರೆ. ಅಲ್ಲಿನ ರೆಸಾರ್ಟ್​ಗೆ ಅವರು ಬರುತ್ತಿದ್ದಂತೆಯೇ ಭರ್ಜರಿ ಸ್ವಾಗತ ಕೋರಲಾಗಿದೆ. ಹೂಗುಚ್ಛ ನೀಡಿ, ಶಾಲು ಹೊದಿಸಿ ಅವರನ್ನು ಬರಮಾಡಿಕೊಳ್ಳಲಾಗಿದೆ. ಶಾರುಖ್​ ಖಾನ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಹಲವು ವರ್ಷಗಳ ಬಳಿಕ ಕಾಶ್ಮೀರಕ್ಕೆ ಬಂದಿರುವ ಶಾರುಖ್​ ಖಾನ್​ ಅವರನ್ನು ನೋಡಲು ಅಲ್ಲಿನ ಫ್ಯಾನ್ಸ್​ ಮುಗಿಬಿದ್ದಿದ್ದಾರೆ.

Shah Rukh Khan: ಶಾರುಖ್​ ಮೊದಲ ಮನೆ ಖರೀದಿಸಿದಾಗ ಹೇಗಿತ್ತು ಪರಿಸ್ಥಿತಿ? ಕಷ್ಟದ ದಿನಗಳ ನೆನಪಿಸಿಕೊಂಡ ನಟ​

ಅಭಿಮಾನಿಗಳ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಅದನ್ನು ನೋಡಿ ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಡಂಕಿ’ ಸಿನಿಮಾಗೆ ರಾಜ್​ಕುಮಾರ್​ ಹಿರಾನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘3 ಈಡಿಯಟ್ಸ್​’, ‘ಪಿಕೆ’, ‘ಸಂಜು’ ಮುಂತಾದ ಸೂಪರ್​ ಹಿಟ್​ ಸಿನಿಮಾ ನೀಡಿದ ಅವರ ಕಸುಬಿನ ಬಗ್ಗೆ ಎಲ್ಲರಿಗೂ ಭರವಸೆ ಇದೆ. ಹಾಗಾಗಿ ಈಗ ‘ಡಂಕಿ’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ.

‘ಡಂಕಿ’ ಮಾತ್ರವಲ್ಲದೇ ‘ಜವಾನ್​’ ಸಿನಿಮಾದಲ್ಲೂ ಶಾರುಖ್​ ಖಾನ್​ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಟ್ಲಿ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್​ ಖಾನ್​ಗೆ ಜೋಡಿಯಾಗಿ ನಯನತಾರಾ ಅಭಿನಯಿಸಿದ್ದಾರೆ. ಜೂನ್​ 2ರಂದು ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ವಿಜಯ್​ ಸೇತುಪತಿ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More