Shah Rukh Khan: ಶಾರುಖ್​ ಮೊದಲ ಮನೆ ಖರೀದಿಸಿದಾಗ ಹೇಗಿತ್ತು ಪರಿಸ್ಥಿತಿ? ಕಷ್ಟದ ದಿನಗಳ ನೆನಪಿಸಿಕೊಂಡ ನಟ​

ಗೌರಿ ಖಾನ್​ ಅವರು ‘ಮೈ ಲೈಫ್​ ಇನ್​ ಡಿಸೈನ್​’ ಎಂಬ ಪುಸ್ತಕ ಬರೆದಿದ್ದಾರೆ. ಆ ಪುಸ್ತಕಕ್ಕೆ ಶಾರುಖ್​ ಖಾನ್​ ಅವರು ಮುನ್ನುಡಿ ಬರೆದಿದ್ದಾರೆ.

Shah Rukh Khan: ಶಾರುಖ್​ ಮೊದಲ ಮನೆ ಖರೀದಿಸಿದಾಗ ಹೇಗಿತ್ತು ಪರಿಸ್ಥಿತಿ? ಕಷ್ಟದ ದಿನಗಳ ನೆನಪಿಸಿಕೊಂಡ ನಟ​
ಶಾರುಖ್ ಖಾನ್ ಕುಟುಂಬ
Follow us
ಮದನ್​ ಕುಮಾರ್​
|

Updated on: Apr 21, 2023 | 12:40 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಇಂದು ಬಹುಕೋಟಿ ರೂಪಾಯಿ ಒಡೆಯನಾಗಿದ್ದಾರೆ. ಹಲವಾರು ಕಡೆಗಳಲ್ಲಿ ಅವರು ಆಸ್ತಿ ಹೊಂದಿದ್ದಾರೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಸಿನಿಮಾಗಳಿಂದ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಆರಂಭದ ದಿನಗಳಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಆರ್ಯನ್​ ಖಾನ್​ ಜನಿಸುವುದಕ್ಕೂ ಮುನ್ನ ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ದಂಪತಿ ಹೊಸ ಮನೆ (Shah Rukh Khan House) ಖರೀದಿಸಿದ್ದರು. ಆಗ ಇಂಟೀರಿಯರ್​ ಡಿಸೈನ್​ ಮಾಡಿಸಲು ಅವರ ಬಳಿ ಹಣ ಇರಲಿಲ್ಲ. ಹಾಗಾಗಿ ಸ್ವತಃ ಗೌರಿ ಖಾನ್​ (Gauri Khan) ಅವರೇ ಒಳಾಂಗಣ ವಿನ್ಯಾಸ ಮಾಡಿದ್ದರು. ನಂತರ ಅದನ್ನೇ ಅವರು ಉದ್ಯೋಗವಾಗಿ ಮಾಡಿಕೊಂಡರು. ಆ ಹಳೇ ದಿನಗಳನ್ನು ಶಾರುಖ್​ ಅವರು ಈಗ ನೆನಪಿಸಿಕೊಂಡಿದ್ದಾರೆ.

ಗೌರಿ ಖಾನ್​ ಅವರು ‘ಮೈ ಲೈಫ್​ ಇನ್​ ಡಿಸೈನ್​’ ಎಂಬ ಪುಸ್ತಕ ಬರೆದಿದ್ದಾರೆ. ಆ ಪುಸ್ತಕಕ್ಕೆ ಶಾರುಖ್​ ಖಾನ್​ ಅವರು ಮುನ್ನುಡಿ ಬರೆದಿದ್ದಾರೆ. ಅದರಲ್ಲಿ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಇದೆಲ್ಲ ಶುರುವಾಗಿದ್ದು ನಾವು ಮುಂಬೈನಲ್ಲಿ ಮೊದಲ ಮನೆ ಖರೀದಿಸಿದಾಗ. ಅದು ನಮ್ಮ ಸಾಮರ್ಥ್ಯಕ್ಕೆ ಮೀರಿದ್ದಾಗಿತ್ತು. ನಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಿದ್ದರಿಂದ ಹೊಸ ಮನೆಗೆ ಹೋಗುವುದು ಅನಿವಾರ್ಯ ಆಗಿತ್ತು’ ಎಂದು ಶಾರುಖ್​ ಖಾನ್​ ಬರಹ ಆರಂಭಿಸಿದ್ದಾರೆ.

ಇದನ್ನೂ ಓದಿ: Gauri Khan: ಆಸ್ತಿ ವಿಚಾರದಲ್ಲಿ ಮೋಸ ಮಾಡಿದ ಆರೋಪ; ಶಾರುಖ್ ಪತ್ನಿ ಗೌರಿ ಖಾನ್​ ಮೇಲೆ ಎಫ್​ಐಆರ್​ ದಾಖಲು

‘ಹಣ ಇದ್ದಾಗಲೆಲ್ಲ ಮನೆಗೆ ಬೇಕಾದ ವಸ್ತುಗಳನ್ನು ನಾವು ಖರೀದಿಸುತ್ತಿದ್ದೆವು. ಒಳಾಂಗಣ ವಿನ್ಯಾಸಕರಿಗಾಗಿ ಹಣ ನೀಡುವಷ್ಟು ಶ್ರೀಮಂತಿಕೆ ನಮಗೆ ಇರಲಿಲ್ಲ. ಹಾಗಾಗಿ ಆ ಕೆಲಸವನ್ನು ಗೌರಿ ಖಾನ್​ ಮಾಡಿದರು’ ಎಂದಿದ್ದಾರೆ ಶಾರುಖ್​ ಖಾನ್​. ನಂತರ ಅವರ ಬದುಕಿನಲ್ಲಿ ಅದೃಷ್ಟ ಬಂತು. ಶಾರುಖ್​ ಸೂಪರ್​ ಸ್ಟಾರ್​ ಆದರು. ಬಳಿಕ ಅವರು ‘ಮನ್ನತ್​’ ಬಂಗಲೆಯನ್ನು ಖರೀದಿಸಿದರು.

ಇದನ್ನೂ ಓದಿ: ಶಾರುಖ್ ಪತ್ನಿ ಎಂಬ ಕಾರಣಕ್ಕೆ ಗೌರಿ ಖಾನ್​ಗೆ ಆದ ನಷ್ಟಗಳೇನು? ಎಲ್ಲವನ್ನೂ ವಿವರಿಸಿದ ಸ್ಟಾರ್ ಹೀರೋ ಪತ್ನಿ

‘ಮನ್ನತ್​ ಖರೀದಿಸಿದಾಗಲೂ ಹಾಗೆಯೇ ಆಯಿತು. ಇದ್ದ ಎಲ್ಲ ಹಣವನ್ನೂ ನಾವು ಆ ಆಸ್ತಿಗಾಗಿ ಖರ್ಚು ಮಾಡಿದೆವು. ಹಾಗಾಗಿ ಆಗಲೂ ಸಹ ಬೇರೆಯವರಿಂದ ಇಂಟೀರಿಯರ್ ಡಿಸೈನ್​ ಮಾಡಿಸಲು ಹಣ ಇರಲಿಲ್ಲ. ಮತ್ತೆ ಗೌರಿಯೇ ಡಿಸೈನ್​ ಮಾಡಿದರು’ ಎಂದು ಶಾರುಖ್​ ಖಾನ್​ ಬರೆದಿದ್ದಾರೆ. ಶಾರುಖ್​ ಅವರ ಮನ್ನತ್​ ನಿವಾಸ ಬಹಳ ಐಷಾರಾಮಿಯಾಗಿದೆ. ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಈ ಬಂಗಲೆ ಬಗ್ಗೆ ಮಾತನಾಡಿದ್ದುಂಟು. ಈ ಮನೆಯ ಗೇಟ್​ಗೆ ವಜ್ರದಿಂದ ವಿನ್ಯಾಸ ಮಾಡಿದ ನೇಮ್​ಪ್ಲೇಟ್​ ಹಾಕಿಸಲಾಗಿದೆ. ಇದೆಲ್ಲದರ ವಿನ್ಯಾಸವನ್ನೂ ಗೌರಿ ಖಾನ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ