ಶಾರುಖ್ ಪತ್ನಿ ಎಂಬ ಕಾರಣಕ್ಕೆ ಗೌರಿ ಖಾನ್​ಗೆ ಆದ ನಷ್ಟಗಳೇನು? ಎಲ್ಲವನ್ನೂ ವಿವರಿಸಿದ ಸ್ಟಾರ್ ಹೀರೋ ಪತ್ನಿ

‘ಶಾರುಖ್ ಖಾನ್ ಪತ್ನಿ ಆಗಿರುವುದು ಎಷ್ಟು ಕಷ್ಟ’ ಎಂಬ ಪ್ರಶ್ನೆಯನ್ನು ಕರಣ್​ ಕೇಳಿದರು. ಇದಕ್ಕೆ ಗೌರಿ ಖಾನ್ ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರಿಸಿದ್ದಾರೆ. ‘

ಶಾರುಖ್ ಪತ್ನಿ ಎಂಬ ಕಾರಣಕ್ಕೆ ಗೌರಿ ಖಾನ್​ಗೆ ಆದ ನಷ್ಟಗಳೇನು? ಎಲ್ಲವನ್ನೂ ವಿವರಿಸಿದ ಸ್ಟಾರ್ ಹೀರೋ ಪತ್ನಿ
ಶಾರುಖ್ ಖಾನ್​-ಗೌರಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 22, 2022 | 10:18 PM

ಸ್ಟಾರ್ ನಟನ ಪತ್ನಿ ಆದಮೇಲೆ ಅದರ ಜತೆ ಒಂದಷ್ಟು ಜವಾಬ್ದಾರಿ ಹಾಗೂ ಸ್ಟಾರ್​ಡಂ ಕೂಡ ಸೇರ್ಪಡೆ ಆಗುತ್ತದೆ. ಹೀರೋನ ಮದುವೆ ಆದವರು ಕೂಡ ಚಿತ್ರರಂಗದವರೇ ಎಂದಾಗ ಈ ದಂಪತಿಗೆ ಸಮಾಜದಲ್ಲಿ ಬೇರೆಯದೇ ಗೌರವ ಸಿಗುತ್ತದೆ. ಕೆಲವೊಮ್ಮೆ ಸಾಕಷ್ಟು ಟೀಕೆ ಕೂಡ ಎದುರಿಸಬೇಕು. ಶಾರುಖ್ ಖಾನ್ (Shah Rukh Khan) ಮದುವೆ ಆದಾಗ ಗೌರಿ ಖಾನ್​ಗೂ ಹೀಗೆಯೇ ಆಗಿತ್ತಂತೆ. ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಶಾರುಖ್ ಪತ್ನಿ ಗೌರಿ (Gauri Khan) ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಅನೇಕ ಆಫರ್​ಗಳು ತಪ್ಪಿ ಹೋಗಿರುವುದಕ್ಕೆ ಶಾರುಖ್ ಖಾನ್ ಪತ್ನಿ ಎಂಬ ಪಟ್ಟವೇ ಕಾರಣ ಎಂಬ ಮಾಹಿತಿ ರಿವೀಲ್ ಮಾಡಿದ್ದಾರೆ.

ಗೌರಿ ಖಾನ್ ಅವರು ಹಲವು ಸಿನಿಮಾಗಳಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ‘ಚೆನ್ನೈ ಎಕ್ಸ್​ಪ್ರೆಸ್​’ ಸೇರಿ ಅನೇಕ ಚಿತ್ರಗಳಿಗೆ ಅವರು ಡಿಸೈನರ್ ಆಗಿದ್ದರು. ಇನ್ನು ಅವರು ಇಂಟೀರಿಯರ್ ಡಿಸೈನರ್ ಕೂಡ ಹೌದು. ಮುಕೇಶ್ ಅಂಬಾನಿ ಸೇರಿ ಅನೇಕ ಉದ್ಯಮಿ ಹಾಗೂ ಸೆಲೆಬ್ರಿಟಿಗಳ ಮನೆಯ ಒಳ ಭಾಗವನ್ನು ಡಿಸೈನ್ ಮಾಡಿದ ಖ್ಯಾತಿ ಗೌರಿಗೆ ಸಿಗುತ್ತದೆ. ಅವರು ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್​’ ಶೋಗೆ ಈ ಬಾರಿ ಗೌರಿ ಖಾನ್ ಆಗಮಿಸಿದ್ದರು. ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘ಶಾರುಖ್ ಖಾನ್ ಪತ್ನಿ ಆಗಿರುವುದು ಎಷ್ಟು ಕಷ್ಟ’ ಎಂಬ ಪ್ರಶ್ನೆಯನ್ನು ಕರಣ್​ ಕೇಳಿದರು. ಇದಕ್ಕೆ ಗೌರಿ ಖಾನ್ ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರಿಸಿದ್ದಾರೆ. ‘ನಾನು ಗೌರಿ ಖಾನ್ ಆಗಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಕೆಲವೊಮ್ಮೆ ಶಾರುಖ್ ಖಾನ್ ಪತ್ನಿ ಎಂಬ ಕಾರಣಕ್ಕೇ ಕೆಲವರು ಆಫರ್ ನೀಡಿದ್ದು ಇದೆ. ಆದರೆ, ಎಲ್ಲ ಬಾರಿಯೂ ಈ ರೀತಿ ಇರಲಿಲ್ಲ. ಕೆಲವರು ಶಾರುಖ್ ಖಾನ್ ಹೆಂಡತಿ ಜತೆ ಕೆಲಸ ಮಾಡೋದೆ ಬೇಡ ಎಂದು ಆಫರ್​ ನೀಡದೇ ಇದ್ದ ಉದಾಹರಣೆಯೂ ಇದೆ. ಅರ್ಧದಷ್ಟು ಆಫರ್ ಕಳೆದುಕೊಂಡಿದ್ದೇನೆ. ನಾನು ಅವರ ಜಾಗದಲ್ಲಿ ಇದ್ದಿದ್ದರೆ ಬಹುಶಃ ಹಾಗೆಯೇ ಆಲೋಚಿಸುತ್ತಿದ್ದೆ’ ಎಂದಿದ್ದಾರೆ ಗೌರಿ.

ಇದನ್ನೂ ಓದಿ
Image
Shah Rukh Khan: ಶಾರುಖ್​ ಖಾನ್​ ಬಾಲಿವುಡ್​ಗೆ ಕಾಲಿಟ್ಟು ಕಳೆಯಿತು 30 ವರ್ಷ; 14 ಬಾರಿ ‘ಫಿಲ್ಮ್​ಫೇರ್’​ ಪಡೆದ ಕಿಂಗ್​ ಖಾನ್
Image
Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್​ ಕಿಡ್​
Image
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?
Image
8 ಪ್ಯಾಕ್​ ಅವತಾರದಲ್ಲಿ ಬಂದ ಶಾರುಖ್​ ಖಾನ್​; ಮಸ್ತ್​ ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?

ಇದನ್ನೂ ಓದಿ: ರಣಬೀರ್-ಆಲಿಯಾ ಸಿನಿಮಾಗೆ ಎಂಟ್ರಿ ಕೊಟ್ಟ ಶಾರುಖ್ ಖಾನ್; ರಿವೀಲ್ ಆಯ್ತು ಹೊಸ ವಿಚಾರ

ಕೊವಿಡ್ ಟೈಮ್​ನಲ್ಲಿ ಸಿನಿಮಾ ಕೆಲಸಗಳು ನಿಂತಿದ್ದವು. ಹೀಗಾಗಿ ಶಾರುಖ್ ಖಾನ್ ಮನೆಯಲ್ಲೇ ಇದ್ದರು. ಆದರೆ, ಗೌರಿ ಖಾನ್ ಕೆಲಸ ನಿಂತಿರಲಿಲ್ಲ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಶಾರುಖ್ ಕುಟುಂಬದ ಅಕೌಂಟ್​ ಸೆಕ್ಷನ್ ನೋಡಿಕೊಳ್ಳುವ ಸಿಎ, ಗೌರಿ ಅವರನ್ನು ಹೊಗಳಿದ್ದರಂತೆ. ‘ಕೊವಿಡ್ ಸಂದರ್ಭದಲ್ಲಿ ಈ ಮನೆಯಲ್ಲಿ ದುಡಿಯುತ್ತಿರುವ ಏಕೈಕ ವ್ಯಕ್ತಿ ಎಂದರೆ ಗೌರಿ’ ಎಂದಿದ್ದರಂತೆ. ಈ ಮಾತನ್ನು ಕೇಳಿ ಗೌರಿ ಖುಷಿಯಾಗಿದ್ದರು.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ