ಜನ ಜಂಗುಳಿ ನಡುವೆಯೂ ರಣವೀರ್​ ಸಿಂಗ್​ಗೆ ಪ್ರೀತಿಯ ಅಪ್ಪುಗೆ ನೀಡಿದ ಸಲ್ಮಾನ್​ ಖಾನ್​; ವಿಡಿಯೋ ವೈರಲ್​

ಬುಧವಾರ (ಆಗಸ್ಟ್​ 16) ರಾತ್ರಿ ಎ.ಪಿ. ದಿಲೋನ್​ ಅವರ ಡಾಕ್ಯುಸೀರಿಸ್​ ‘ಎ.ಪಿ. ದಿಲೋನ್​: ಫಸ್ಟ್​ ಆಫ್​ ಎ ಕೈಂಡ್​’ ಪ್ರೀಮಿಯರ್​ ಆಯಿತು. ಅದಕ್ಕೆ ಸಲ್ಮಾನ್​ ಖಾನ್​ ಅವರು ಅತಿಥಿಯಾಗಿ ಬಂದಿದ್ದರು. ಕಾರ್ಯಕ್ರಮ ಮುಗಿಸಿ ತೆರಳುವಾಗ ಅವರು ರಣವೀರ್​ ಸಿಂಗ್​ ಮತ್ತು ಎ.ಪಿ. ದಿಲೋನ್​ಗೆ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.

ಜನ ಜಂಗುಳಿ ನಡುವೆಯೂ ರಣವೀರ್​ ಸಿಂಗ್​ಗೆ ಪ್ರೀತಿಯ ಅಪ್ಪುಗೆ ನೀಡಿದ ಸಲ್ಮಾನ್​ ಖಾನ್​; ವಿಡಿಯೋ ವೈರಲ್​
ರಣವೀರ್​ ಸಿಂಗ್​, ಸಲ್ಮಾನ್​ ಖಾನ್​, ಎ.ಪಿ. ದಿಲೋನ್​

Updated on: Aug 17, 2023 | 10:56 AM

ಬಾಲಿವುಡ್​ನ ಖ್ಯಾತ ನಟ ಸಲ್ಮಾನ್​ ಖಾನ್​ (Salman Khan) ಅವರು ಕೆಲವೊಮ್ಮೆ ಸಿಟ್ಟು ಪ್ರದರ್ಶಿಸುತ್ತಾರೆ. ಅವರು ಕೋಪ ಮಾಡಿಕೊಂಡಾಗ ಯಾರೂ ಹತ್ತಿರಕ್ಕೆ ಸುಳಿಯುವುದಿಲ್ಲ. ಹಾಗಂತ ಅದು ಅವರ ಪೂರ್ಣ ವ್ಯಕ್ತಿತ್ವ ಅಲ್ಲ. ಬಹುತೇಕ ಸಂದರ್ಭಗಳಲ್ಲಿ ಸಲ್ಮಾನ್​ ಖಾನ್​ ಅವರು ಕೂಲ್​ ಆಗಿ ಇರುತ್ತಾರೆ. ತಮ್ಮ ಪ್ರೀತಿ ಪಾತ್ರರಿಗಾಗಿ ಸಮಯ ನೀಡುತ್ತಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಎಂಬಂತೆ ಈಗೊಂದು ವಿಡಿಯೋ ವೈರಲ್​ ಆಗಿದೆ. ನಟ ರಣವೀರ್​ ಸಿಂಗ್ (Ranveer Singh)​ ಅವರನ್ನು ಸಲ್ಮಾನ್​ ಖಾನ್​ ಪ್ರೀತಿಯಿಂದ ತಬ್ಬಿಕೊಂಡಿದ್ದಾರೆ. ಅಲ್ಲದೇ ರ‍್ಯಾಪರ್​ ಎ.ಪಿ. ದಿಲೋನ್​ಗೂ ಸಿಹಿಯಾದ ಅಪ್ಪುಗೆ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ (Salman Khan Viral Video) ಆಗಿರುವ ಈ ವಿಡಿಯೋ ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಸಲ್ಮಾನ್​ ಖಾನ್​ ಅವರು ಇದ್ದಲ್ಲಿ ಜನಜಂಗುಳಿ ಇದ್ದೇ ಇರುತ್ತದೆ. ಅವರನ್ನು ನೋಡಲು ಅಭಿಮಾನಿಗಳು ಮುತ್ತಿಗೆ ಹಾಕಿಕೊಳ್ಳುತ್ತಾರೆ. ಒಂದೇ ಒಂದು ಸೆಲ್ಫಿ ಸಿಕ್ಕರೂ ಸಾಕು ಎಂದು ಜನರು ಹಪಹಪಿಸುತ್ತಾರೆ. ಅಂಥ ಸಂದರ್ಭದಲ್ಲಿ ಸಲ್ಲುಗೆ ಕಿರಿಕಿರಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬುಧವಾರ (ಆಗಸ್ಟ್​ 16) ರಾತ್ರಿ ಎ.ಪಿ. ದಿಲೋನ್​ ಅವರ ಡಾಕ್ಯುಸೀರಿಸ್​ ‘ಎ.ಪಿ. ದಿಲೋನ್​: ಫಸ್ಟ್​ ಆಫ್​ ಎ ಕೈಂಡ್​’ ಪ್ರೀಮಿಯರ್​ ಆಯಿತು. ಅದಕ್ಕೆ ಸಲ್ಮಾನ್​ ಖಾನ್​ ಅವರು ಅತಿಥಿಯಾಗಿ ಬಂದಿದ್ದರು. ಕಾರ್ಯಕ್ರಮ ಮುಗಿಸಿ ತೆರಳುವಾಗ ಅವರು ರಣವೀರ್​ ಸಿಂಗ್​ ಮತ್ತು ಎ.ಪಿ. ದಿಲೋನ್​ಗೆ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.

ಇದನ್ನೂ ಓದಿ: Salman Khan: ಅತಿಯಾದ ಕೋಪದ ಕಾರಣಕ್ಕೆ ಬಿಗ್​ ಬಾಸ್​ ನಿರೂಪಣೆಯಿಂದ ಹೊರನಡೆದ್ರಾ ಸಲ್ಮಾನ್​ ಖಾನ್​?

ಪಂಜಾಬ್​ನ ಸಣ್ಣ ಹಳ್ಳಿಯಿಂದ ಬಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ರ‍್ಯಾಪರ್​ ಆಗಿ ಬೆಳೆದ ಎ.ಪಿ. ದಿಲೋನ್​ ಅವರ ಜೀವನದ ಘಟನೆಗಳನ್ನು ಇಟ್ಟುಕೊಂಡು ಡಾಕ್ಯುಸೀರೀಸ್​ ಮಾಡಲಾಗಿದೆ. ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಇದು ಆಗಸ್ಟ್​ 18ರಿಂದ ಸ್ಟ್ರೀಮಿಂಗ್​ ಆರಂಭಿಸಲಿದೆ. ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸಲ್ಮಾನ್​ ಖಾನ್​ ಅವರು ಪ್ರೀಮಿಯರ್​ ಶೋಗೆ ಬಂದಿದ್ದರು. ಅವರಿಂದ ಬೆಂಬಲ ಸಿಕ್ಕಿದ್ದರೆ ಎ.ಪಿ. ದಿಲೋನ್​ ಖುಷಿ ಆಗಿದ್ದಾರೆ.

ಸಲ್ಮಾನ್​ ಖಾನ್​ ವೈರಲ್ ವಿಡಿಯೋ:

ಸಲ್ಮಾನ್​ ಖಾನ್​ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋ. ಈಗ ಅವರು ‘ಟೈಗರ್​ 3’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ ಶಾರುಖ್​ ಖಾನ್​ ಅವರು ಅತಿಥಿ ಪಾತ್ರ ಮಾಡುತ್ತಾರೆ ಎನ್ನಲಾಗುತ್ತಿದೆ. ಆ ಕಾರಣದಿಂದ ‘ಟೈಗರ್​ 3’ ಬಗ್ಗೆ ನಿರೀಕ್ಷೆ ಮೂಡಿದೆ. ಸಲ್ಮಾನ್​ ಖಾನ್​ಗೆ ಜೋಡಿಯಾಗಿ ಕತ್ರಿನಾ ಕೈಫ್​ ನಟಿಸುತ್ತಿದ್ದಾರೆ. ಮನೀಶ್​ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಈ ವರ್ಷ ದೀಪಾವಳಿಗೆ ರಿಲೀಸ್​ ಆಗಲಿದೆ. ‘ಯಶ್ ರಾಜ್​ ಫಿಲ್ಮ್ಸ್​’ ಬ್ಯಾನರ್​ ಮೂಲಕ ಆದಿತ್ಯ ಚೋಪ್ರಾ ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us