ಸಲ್ಮಾನ್-ರಶ್ಮಿಕಾ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ, ಹಬ್ಬಗಳೇ ಟಾರ್ಗೆಟ್

|

Updated on: Mar 19, 2025 | 8:41 PM

Salman Khan: ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾ ‘ಸಿಕಂಧರ್’ ಇತ್ತೀಚೆಗಷ್ಟೆ ಚಿತ್ರೀಕರಣ ಮುಗಿಸಿದೆ. ಈಗಾಗಲೇ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಬಿಡುಗಡೆ ದಿನಾಂಕ ನಿಗದಿಪಡಿಸಿದೆ ಚಿತ್ರತಂಡ. ರಶ್ಮಿಕಾ ಮಂದಣ್ಣ, ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆಗೆ ನಟಿಸಿದ್ದಾರೆ ಈ ಸಿನಿಮಾನಲ್ಲಿ.

ಸಲ್ಮಾನ್-ರಶ್ಮಿಕಾ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ, ಹಬ್ಬಗಳೇ ಟಾರ್ಗೆಟ್
Sikandar Movie
Follow us on

ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿರುವ ‘ಸಿಕಂಧರ್’ ಸಿನಿಮಾದ ಚಿತ್ರೀಕರಣ ಕೆಲ ದಿನಗಳ ಹಿಂದಷ್ಟೆ ಮುಗಿದಿದೆ. ಸಲ್ಮಾನ್ ಖಾನ್, ಜೀವ ಬೆದರಿಕೆ ಬೆನ್ನಲ್ಲೆ ಈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡು ಸಿನಿಮಾ ಮುಗಿಸಿಕೊಟ್ಟಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಜೊತೆಗೆ ನಟಿಸಿದ್ದಾರೆ. ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಈದ್ ಮಾತ್ರವೇ ಅಲ್ಲದೆ ಹಿಂದೂ ಹಬ್ಬವನ್ನೂ ಸಹ ಗಮನದಲ್ಲಿಟ್ಟುಕೊಂಡು ಸಿನಿಮಾದ ಬಿಡುಗಡೆ ದಿನಾಂಕ ನಿಗದಿ ಮಾಡಲಾಗಿದೆ.

ಈದ್, ರಂಜಾನ್ ಹಬ್ಬಗಳಿಗೆ ಸಲ್ಮಾನ್ ಖಾನ್​ ನಟನೆಯ ಸಿನಿಮಾ ಬಿಡುಗಡೆ ಆಗುವುದು ಸಾಮಾನ್ಯ. ‘ಸಿಕಂಧರ್’ ಸಿನಿಮಾ ಚಿತ್ರೀಕರಣ ಆರಂಭದ ಸಮಯದಲ್ಲಿಯೇ ಈ ಸಿನಿಮಾ ಈದ್ ಹಬ್ಬಕ್ಕೆ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಅಂತೆಯೇ ‘ಸಿಕಂಧರ್’ ಸಿನಿಮಾವನ್ನು ಈದ್​​ಗೆ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಈದ್ ಮಾತ್ರವೇ ಅಲ್ಲದೆ ಯುಗಾದಿ ಹಬ್ಬವನ್ನೂ ಸಹ ಗಣನೆಗೆ ತೆಗೆದುಕೊಂಡು ಬಿಡುಗಡೆ ದಿನಾಂಕ ನಿರ್ಧರಿಸಿದೆ ಚಿತ್ರತಂಡ.

‘ಸಿಕಂಧರ್’ ಸಿನಿಮಾ ಮಾರ್ಚ್ 30 ರಂದು ತೆರೆಗೆ ಬರಲಿದೆ. ಅದೇ ದಿನ ಯುಗಾದಿ ಹಬ್ಬವೂ ಸಹ ಇದೆ. ಯುಗಾದಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಣೆ ಮಾಡಲಾಗುತ್ತದೆ. ಹಲವು ರಾಜ್ಯಗಳಲ್ಲಿ ಯುಗಾದಿ ಹಬ್ಬಕ್ಕೆ ರಜೆ ಸಹ ಇದೆ. ಗುಡಿ ಪಡವಾ ಎಂಬ ಹಬ್ಬವೂ ಅದೇ ದಿನ ಇದೆ. ಅದರ ಮಾರನೇಯ ದಿನ ಅಂದರೆ ಮಾರ್ಚ್ 31 ರಂದು ಈದ್ ಹಬ್ಬ ಆಚರಣೆ ಮಾಡಲಾಗುತ್ತದೆ. ಕೆಲವೆಡೆ ಏಪ್ರಿಲ್ 1 ರಂದು ಸಹ ಈದ್ ಹಬ್ಬದ ಆಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಮುನ್ನಲೆಗೆ

‘ಸಿಕಂಧರ್’ ಸಿನಿಮಾ ಅನ್ನು ತಮಿಳಿನ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಘಜಿನಿ’, ‘ಕತ್ತಿ’, ‘ತುಪಾಕಿ’, ‘ಸರ್ಕಾರ್’, ‘ದರ್ಬಾರ್’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಮೊದಲ ಬಾರಿಗೆ ಸಲ್ಮಾನ್ ಖಾನ್​ಗಾಗಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸಲ್ಮಾನ್ ಖಾನ್​ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:40 pm, Wed, 19 March 25